- ನಗರಸಭೆ ಪೌರಾಯುಕ್ತ ಚವ್ಹಾಣ್ ಸೂಚನೆ
- ನಿಯಮ ಪಾಲಿಸಿ ಬೃಹತ್ ತ್ಯಾಜ್ಯ ಉತ್ಪಾದಕರು
ಯಾದಗಿರಿ: ನಗರಸಭೆ ವ್ಯಾಪ್ತಿಯಲ್ಲಿ ಎಲ್ಲ ನ ತ್ಯಾಜ್ಯ ನಿರ್ವಹಣಾ ಎಸ್ಡಬ್ಲುಎಂ ನಿಯಮಗಳು&2006ರ ಅನುಸಾರವಾಗಿ ಎಲ್ಲ ನಾಗರಿಕರು, ವಾಣಿಜ್ಯ ಸಂಸ್ಥೆ, ಶಿಣ ಸಂಸ್ಥೆ, ಅಪಾರ್ಟ್ಮೆಂಟ್, ಕೈಗಾರಿಕೆ, ಹೋಟೆಲ್, ಉಪಹಾರ ಗೃಹ, ಮಾರುಕಟ್ಟೆ ಮತ್ತು ಬೃಹತ್ ತ್ಯಾಜ್ಯ ಉತ್ಪಾದಕರು ಬಿಡಬ್ಲುಜಿಎಸ್ ಕಡ್ಡಾಯವಾಗಿ ನಾಲ್ಕು ತರಹದ ತ್ಯಾಜ್ಯ ವಿಂಗಡಣೆಯನ್ನು ಮೂಲದಲ್ಲಿಯೇ ಜಾರಿಗೆ ತರಬೇಕೆಂದು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾನ್ ಹೇಳಿದರು.
ಈ ಕುರಿತು ಹೇಳಿಕೆ ನೀಡಿರುವ ಅವರು, ಎಲ್ಲ ತ್ಯಾಜ್ಯ ಉತ್ಪಾದಕರು ಹಸಿ, ತ್ಯಾಜ್ಯ, ಆಹಾರ ತ್ಯಾಜ್ಯ ತರಕಾರಿ ತ್ಯಾಜ್ಯ ಜೈವಿಕವಾಗಿ ಕರಗುವ ತ್ಯಾಜ್ಯ, ಒಣ ತ್ಯಾಜ್ಯ ಪ್ಲಾಸ್ಟಿಕ್, ಕಾಗದ, ಲೋಹ, ಗಾಜು ಹಾಗೂ ಮರುಬಳಕೆ ಯೋಗ್ಯ ವಸ್ತುಗಳು. ವಿಶೇಷ ಕಾಳಜಿ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯಡೈಪರ್ಗಳು, ಬ್ಯಾಟರಿ, ಔಷಧ ಅವಶೇಷಗಳು, ಬಣ್ಣದ ಡಬ್ಬಿಗಳು, ಇ&ತ್ಯಾಜ್ಯ ಇತ್ಯಾದಿ. ಸ್ಯಾನಿಟರಿ ತ್ಯಾಜ್ಯ ಮರುಬಳಕೆಯಾಗದ ಹಾಗೂ ಜೈವಿಕವಾಗಿ ಕರಗದ ತ್ಯಾಜ್ಯ ನಾಗರಿಕರು ವಿಂಗಡಿಸಲಾದ ತ್ಯಾಜ್ಯವನ್ನು ಪ್ರತ್ಯೇಕವಾಗಿ ಅಧಿಕೃತ ತ್ಯಾಜ್ಯ ಸಂಗ್ರಹಕಾರರು, ಪೌರಾಕಾರ್ಮಿಕರಿಗೆ ಹಸ್ತಾಂತರಿಸಬೇಕು ಮತ್ತು ತ್ಯಾಜ್ಯ ಮಿಶ್ರಣ ಮಾಡುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದರು.
ಎಲ್ಲ ಬೃಹತ್ ತ್ಯಾಜ್ಯ ಉತ್ಪಾದಕರು ಬಿಡಬ್ಲುಜಿಎಸ್ ಅಪಾರ್ಟ್ ಮೆಂಟ್ಗಳು, ವಸತಿ ಸಮುಚ್ಚಯಗಳು, ಹೋಟೆಲ್ಗಳು ಮತ್ತು ಉಪಹಾರ ಗೃಹಗಳು, ಕಲ್ಯಾಣ ಮಂಟಪಗಳು, ಶಿಣ ಸಂಸ್ಥೆಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು, ಮಾರುಕಟ್ಟೆಗಳು, ಮಂಡಿಗಳು, ಕೈಗಾರಿಕೆಗಳು ಮತ್ತು ಕಚೇರಿಗಳು 20,000 ಚಮೀಗಿಂತ ಹೆಚ್ಚಿನ ನಿರ್ಮಿತ ಪ್ರದೇಶ ಹೊಂದಿದಲ್ಲಿ ಅಥವಾ ದಿನಕ್ಕೆ 40 ಕೆಎಲ್ಡಿಗಿಂತ ಹೆಚ್ಚಿನ ನೀರಿನ ಬಳಕೆ, ಅಥವಾ 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದನೆ ಇದ್ದಲ್ಲಿ, ತಮ್ಮ ಸಂಸ್ಥೆಯನ್ನು ನಗರ ಸ್ಥಳಿಯ ಸಂಸ್ಥೆಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಎಸ್ಡಬ್ಲುಎಂನಿಯಮಗಳು&2026ರ ಪ್ರಕಾರ ತ್ಯಾಜ್ಯದ ವೈಾನಿಕ ವಿಲೇವಾರಿ ಮತ್ತು ನಿರ್ವಹಣೆಯನ್ನು ಅನುಸರಿಸಬೇಕು. ನಿಯಮಗಳು ಉಲ್ಲಂನೆ ಮಾಡಿದಲ್ಲಿ ದಂಡ ಹಾಕಲಾಗುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಗರದ ಸ್ವಚ್ಛತೆ ಪರಿಸರ ಸಂರಣೆ ಹಾಗೂ ಶಾಶ್ವತ ನ ತ್ಯಾಜ್ಯ ನಿರ್ವಹಣೆಗೆ ಎಲ್ಲ ನಾಗರಿಕರು ಹಾಗೂ ಸಂಸ್ಥೆಗಳು ಸಹಕರಿಸುವಂತೆ ವಿನಂತಿಸಿದೆ ಎಂದು ಅವರು ಮನವಿ ಮಾಡಿದ್ದಾರೆ.