ಯುದ್ಧ ಸ್ಮಾರಕ ಗೌರವದ ಸೂಚಕ memorial 
ರಾಜ್ಯ

ಯುದ್ಧ ಸ್ಮಾರಕ ಗೌರವದ ಸೂಚಕ memorial

ಬಂಗಾರಪೇಟೆ: ದೇಶಕ್ಕಾಗಿ ಜೀವನವನ್ನೇ ಅರ್ಪಿಸಿದ ವೀರ ಯೋಧರ ಸ್ಮರಣಾರ್ಥ ನಿಮಾರ್ಣವಾಗುತ್ತಿರುವ ಯುದ್ಧ ಸ್ಮಾರಕವು ಅವರ ನಿಸ್ವಾರ್ಥ ತ್ಯಾಗಕ್ಕೆ ಸಲ್ಲಿಸುವ ಗೌರವದ ಪ್ರತಿಕ ಎಂದು ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ಹೇಳಿದರು.memorial
ನಗರಸಭೆ ಆವರಣದಲ್ಲಿ ಕೋಲಾರ ಜಿಲ್ಲಾ ಮಾಜಿ ಯೋಧರ ಟ್ರಸ್ಟ್​ ಬಂಗಾರಪೇಟೆ ಶಾಖೆಯಿಂದ ಆಯೋಜಿಸಿದ್ದ ಯುದ್ಧ ಸ್ಮಾರಕ ಸ್ತಂಭದ ಭೂಮಿಪೂಜ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಮಾರಕ ನಿಮಾರ್ಣಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಪಡೆಯುವ ಅಗತ್ಯವಿಲ್ಲ. ಸ್ವಂತ ಖರ್ಚಿನಲ್ಲಿ ಸ್ಮಾರಕ ನಿರ್ಮಿಸಲು ಸಿದ್ಧನಿದ್ದು,
ಒಂದು ವೇಳೆ ದೇಣಿಗೆ ಸಂಗ್ರಹಿಸಿದರೆ, ಅದನ್ನು ಯೋಧರ ಮಕ್ಕಳ ಶಿಕ್ಷಣಕ್ಕಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಈಗಾಗಲೇ ಗುರುತಿಸಿದ ವಸತಿ ಸ್ಥಳ ನಗರದಿಂದ ದೂರವಿದೆ ಎಂಬ ಯೋಧರ ಮನವಿ ಗಮನಿಸಿ, ನಗರದಿಂದ 3 ಕಿಲೋಮೀಟರ್​ ವ್ಯಾಪ್ತಿಯಲ್ಲಿ ಹೊಸ ಸ್ಥಳ ಗುರುತಿಸಲಾಗಿದೆ. 256 ಯೋಧರಿಗೆ ನಿವೇಶನ ಹಂಚಿಕೆ ಮಾಡುವ ಯೋಜನೆ ಇದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯೋಧರ ಮಕ್ಕಳ ಶಿಕ್ಷಣಕ್ಕಾಗಿ ಸೈನಿಕರ ವಸತಿಶಾಲೆ ಆರಂಭಿಸಲಾಗಿದೆ ಎಂದರು. ಜಂಟಿ ಕಾರ್ಯದರ್ಶಿ ರಘು, ಗೌರವಾಧ್ಯಕ್ಷ ಜಯಪಾಲ್​ ಇತರರು ಇದ್ದರು.