ಆಲಂಬಗಿರಿ ಸರ್ಕಾರಿ ಶಾಲೆಯ ಹಳೇ ಕಟ್ಟಡ ಗೋಡೆ ಕುಸಿತ government school  
ರಾಜ್ಯ

ಸರ್ಕಾರಿ ಶಾಲೆಯ ಹಳೇ ಕಟ್ಟಡ ಗೋಡೆ ಕುಸಿತ government school

ಪ್ರಮುಖ ಮುಖ್ಯಾಂಶಗಳು

  • ಆತಂಕದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು
  • ಶಾಲಾವರಣದಲ್ಲೇ ಬಿದ್ದ ಕಲ್ಲುಗಳು
ಶ್ರೀನಿವಾಸಪುರ: ತಾಲೂಕಿನ ಆಲಂಬಗಿರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡದ ಗೋಡೆ ಕುಸಿದಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಭಯದ ವಾತಾವರಣದಲ್ಲಿ ತರಗತಿಗಳಿಗೆ ಹಾಜರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. government school.
ಶಾಲೆಯಲ್ಲಿ ಪ್ರಸ್ತುತ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಿಥಿಲಾವಸ್ಥೆಗೆ ತಲುಪಿದ್ದ ಹಳೇ ಕಟ್ಟಡ ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯ ಪರಿಣಾಮ ಒಂದು ಕಡೆ ಸಂಪೂರ್ಣ ಕುಸಿದಿದ್ದು, ಉಳಿದ ಪಾರ್ಶ್ವಗಳು ಯಾವಾಗ ಬೇಕಾದರೂ ಬೀಳಬಹುದು. ಹೊಸ ಕಟ್ಟಡಕ್ಕೆ ತರಗತಿಗಳು ಸ್ಥಳಾಂತಗೊಂಡಿದ್ದರೂ ಸಹ ಒಂದೇ ಆವರಣದಲ್ಲಿ ಹೊಸ ಮತ್ತು ಹಳೇ ಕಟ್ಟಡ ಇರುವುದರಿಂದ ಅನಿವಾರ್ಯವಾಗಿ ಓಡಾಡಬೇಕಾಗುತ್ತದೆ. ಕುಸಿದಿರುವ ಕಟ್ಟಡದ ಸುತ್ತಮುತ್ತ ವಿದ್ಯಾರ್ಥಿಗಳು ಆಟವಾಡಲು ಹೋದಾಗ ಏನಾದರೂ ಅನಾಹುತವಾದರೆ ಯಾರು ಜವಾಬ್ದಾರಿ ಎನ್ನುವ ಪ್ರಶ್ನೆ ಎದುರಾಗಿದೆ. ಇನ್ನೂ ಶಾಲೆಗೆ ಮಕ್ಕಳನ್ನು ಬಿಡಲು ಬರುವ ಪಾಲಕರೂ ಸಹ ಆತಂಕ ವ್ಯಕ್ತಪಡಿಸಿದ್ದು, ಮಕ್ಕಳನ್ನು ಶಾಲೆಯಲ್ಲಿ ಬಿಟ್ಟು ಕೆಲಸಕ್ಕೆ ಹೋದರೂ ಅವರೆಲ್ಲವ ಚಿತ್ತ ಶಾಲೆಯತ್ತಲೇ ಇರುವಂತಾಗಿದೆ.

"

ಶಾಲೆ ಶಿಥಿಲಾವಸ್ಥೆ ಕುರಿತು ಕಳೆದ ಎರಡು ವರ್ಷಗಳಿಂದ ಬಿಇಒ ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಉಪಯೋಗವಾಗಿಲ್ಲ. ಹಳೇ ಕಟ್ಟಡ ಕೆಡವಿ ಹೊಸಕಟ್ಟಡ ಕಟ್ಟಬೇಕು. ಗ್ರಾಮದಲ್ಲಿ ಈಗಾಗಲೇ ಸಮುದಾಯ ಭವನವಿದೆ, ನಾವು ಎಲ್ಲರೂ ಸೇರಿ ಸಮುದಾಯ ಭವನದ ಬದಲು ಶಾಲೆಗೆ ಕೊಠಡಿ ನಿರ್ಮಿಸಿ ಕೊಡಲಿ.