- ಬೆಂಗಳೂರು ಕಬ್ಬನ್ ಪಾರ್ಕ್ನಲ್ಲಿ ನಡೆದಾಡುವವರಿಗೆ ಚಿಕಿತ್ಸಾ ಥೆರಪಿಯಿದ್ದಂತೆ
- ಕಬ್ಬನ್ ಪಾರ್ಕ್ ಸಮಾನತೆಯಿಂದ ಜನರನ್ನು ಕಾಣುವ ವಿಶ್ವವಿದ್ದಂತೆ ಎಂದ ಭಾರತ್ ಅಗ್ರಿ ಸಿಇಒ
- ಕಬ್ಬನ್ ಪಾರ್ಕ್ ಎಲ್ಲರ ನೆಚ್ಚಿನ ತಾಣ ಎಂದು ಎಕ್ಸ್ನಲ್ಲಿ ಹಲವರಿಂದ ಕಾಮೆಂಟ್ ಶೇರ್
ಬೆಂಗಳೂರು: ಬೆಂಗಳೂರು ಅಂದರೆ ಮೊದಲು ನೆನಪಾಗುವುದೇ ಟ್ರಾಫಿಕ್ ಜಾಮ್! ಇಲ್ಲಿನ ಟ್ರಾಫಿಕ್ ತಲೆನೋವಿಗೆ ಬೇಸತ್ತು, 'ಇಲ್ಲಿಗೆ ಬರಲು ಸಾಧ್ಯವಿಲ್ಲ, ಬೇರೆಲ್ಲಾದರೂ ಕೆಲಸವಿದ್ದರೆ ಹೇಳಿ' ಎಂದು ವಿದೇಶಿ ಉದ್ಯಮಿಗಳು ಕೇಳತೊಡಗಿದ್ದಾರೆಂದು ಜಪಾನ್‌ನ ತ್ಸುಯೋಶಿ ಇಟೊ ಒಮ್ಮೆ ಟ್ವೀಟ್ ಮಾಡಿದ್ದರು. ಆದರೆ, ಕೇವಲ ಟ್ರಾಫಿಕ್‌ನಿಂದಲೇ ಸಿಲಿಕಾನ್ ಸಿಟಿಯನ್ನು ಅಳೆಯಲು ಸಾಧ್ಯವಿಲ್ಲ. ಟ್ರಾಫಿಕ್ ಕಿರಿಕಿರಿ ನಡುವೆಯೂ ಬೆಂಗಳೂರು ತನ್ನದೇ ಆದ ವಿಶಿಷ್ಟ ಕಾರಣಗಳಿಂದ ಜನರ ಮನಸ್ಸಿಗೆ ಹತ್ತಿರವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ 'ಭಾರತ್ ಅಗ್ರಿ' ಸಂಸ್ಥೆಯ ಸಿಇಒ ಸಿದ್ಧಾರ್ಥ್ ಡಯಾಲಾನಿ ಅವರು ಹಂಚಿಕೊಂಡಿರುವ ಎಕ್ಸ್ (ಟ್ವಿಟರ್) ಪೋಸ್ಟ್ ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,
"ಬೆಂಗಳೂರಿನ ಹೃದಯಭಾಗದಲ್ಲಿ 1870ರಿಂದಲೂ ಹಸಿರ ಉಸಿರಾಗಿರುವ ಕಬ್ಬನ್ ಪಾರ್ಕ್(Cubbon Park), ಕೇವಲ ಒಂದು ಉದ್ಯಾನವಲ್ಲ; ಅದೊಂದು ಭಾವನಾತ್ಮಕ ತಾಣ. ಹೈಕೋರ್ಟ್, ವಿಧಾನಸೌಧ ಇಲ್ಲವೇ ಮ್ಯೂಸಿಯಂ ನೋಡಲು ಬಂದವರು ಇಲ್ಲಿನ ಮರಗಳ ನೆರಳಿನಲ್ಲಿ ಮೌನವಾಗಿ ಕುಳಿತು ದಣಿವು ಆರಿಸಿಕೊಳ್ಳುತ್ತಾರೆ. ಇಲ್ಲಿ ಗೆಳೆಯರೊಡನೆ ನಗಬಹುದು, ಪುಸ್ತಕಗಳ ಲೋಕದಲ್ಲಿ ಮುಳುಗಬಹುದು ಅಥವಾ ಪ್ರೇಮಿಗಳು ಕೈ ಕೈ ಹಿಡಿದು ಪ್ರೇಮ ನಿವೇದನೆಯನ್ನೂ ಮಾಡಿಕೊಳ್ಳಬಹುದು. ಹಕ್ಕಿಗಳ ಚಿಲಿಪಿಲಿ ಮತ್ತು ಹೂಗಳ ನಗು ಮನಸ್ಸಿನ ಘಾಸಿಗೆ ಮದ್ದಿನಂತೆ ಕೆಲಸ ಮಾಡುತ್ತದೆ. ಸಿದ್ಧಾರ್ಥ್ ಡಯಾಲಾನಿ ಹೇಳುವಂತೆ, ಮನಸ್ಸು ನೋವಾದಾಗ ವೈದ್ಯರಿಗಿಂತಲೂ ಹೆಚ್ಚಾಗಿ ಈ ಉದ್ಯಾನವೇ ನಮ್ಮನ್ನು ಗುಣಪಡಿಸುವ ಶಕ್ತಿ ಹೊಂದಿದೆ."
ಕಬ್ಬನ್ ಪಾರ್ಕ್ ಚಿಕಿತ್ಸಾ ಕೇಂದ್ರವಿದ್ದಂತೆ
ಕಬ್ಬನ್ ಪಾರ್ಕ್ನಲ್ಲಿನ ಮರಗಳ ಚಿತ್ರ ಹಂಚಿಕೊಂಡಿರುವ ಅವರು, ಅದಕ್ಕೆ ಕಬ್ಬನ್ ಪಾರ್ಕಿನಲ್ಲಿ ನಡೆದಾಡುವುದು ಒಂದು ಚಿಕಿತ್ಸಾ ಥೆರಪಿ ಇದ್ದಂತೆ ಎಂದು ಹೇಳಿದ್ದಾರೆ. ಈ ಉದ್ಯಾನವನ ಜನರನ್ನು ಸಮಾನವಾಗಿ ಕಾಣುವ ವಿಶ್ವವಿದ್ದಂತೆ. ಇಲ್ಲಿ ಒಂದೇ ತರಹದ ಜನರರಿರೋದಿಲ್ಲ. ನೃತ್ಯ ಮಾಡುವವರು, ಯೋಗ, ಸ್ಕೇಟಿಂಗ್, ಸೈಕ್ಲಿಂಗ್, ಪೇಂಟಿಂಗ್ ಮಾಡುವವರು ಬರುತ್ತಾರೆ. ಇವರೆಲ್ಲರು ಯಾವುದೇ ಸಮಸ್ಯೆ ಇಲ್ಲದಂತೆ ನಿಶ್ಚಿಂತೆಯಾಗಿ ತಮ್ಮ ಕೆಲಸದಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು.
ನಿನ್ನೆ ನಾನು ಸ್ಟ್ಯಾಂಡ್ ಅಪ್ ಕಾಮಿಡಿ ಮತ್ತು ಯಾರೋ ಒಬ್ಬರು ತಮ್ಮ ತರಬೇತುದಾರರೊಂದಿಗೆ ಬಾಕ್ಸಿಂಗ್ ಮಾಡುವುದನ್ನು ನೋಡಿದೆ. ಈ ಸ್ಥಳಕ್ಕೆ ಬಂದವರು ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುತ್ತಾರೆ. ಬೇರೆಯವರಿಂದ ಸಮಸ್ಯೆಗೆ ಒಳಗಾಗುವವರೆಗೂ ಯಾವುದರ ಗಮನವೇ ಇರೋದಿಲ್ಲ. ಈ ಸ್ಥಳವೊಂದು ಅದ್ಭುತ. ನಿಜಕ್ಕೂ ನನಗೆ ಒಳ್ಳೆಯ ಅನುಭವ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರು ಫಿದಾ!
40 ಸಾವಿರ ಜನರು ಅವರ ಈ ಪೋಸ್ಟ್ನ್ನು ವಿಕ್ಷಣೆ ಮಾಡಿದ್ದು, ಬರಪೂರ ಕಾಮೆಂಟ್ಗಳು ಬಂದಿವೆ. ಒಬ್ಬ ಎಕ್ಸ್ ಬಳಕೆದಾರರು. ಕಬ್ಬನ್ ಪಾರ್ಕ್ನಲ್ಲಿ ಎಲೆಗಳ ಸದ್ದು, ಹಕ್ಕಿಗಳ ಚಿಲಿಪಿಲಿ ಕಲರವ ಕೇಳೋದೆ ಒಂದು ಇಂಪು. ಇಲ್ಲಿ ಜಾಗಿಂಗ್ ಮಾಡುವಾಗ ಇಯರ್ ಫೋನ್ ಅವಶ್ಯಕತೆನೆ ಇರಲ್ಲ ಎಂದು ನೆಟ್ಟಿಗರು ಕಾಂಮೆಂಟ್ ಮಾಡುತ್ತಿದ್ದಾರೆ.