ಉದ್ಯಾನವನ ಭೂಮಿ ವಿಭಜನೆ ಮಸೂದೆ ಹಿಂಪಡೆಯಲು ವಾಕರ್ಸ್ ಅಸೋಸಿಯೇಷನ್ ಆಗ್ರಹ 
ರಾಜ್ಯ

ಉದ್ಯಾನವನ ಭೂಮಿ ವಿಭಜನೆ ಮಸೂದೆ ಹಿಂಪಡೆಯಲು ವಾಕರ್ಸ್ ಅಸೋಸಿಯೇಷನ್ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಉದ್ಯಾನವನ ಭೂಮಿ ವಿಭಜನೆ ಮಸೂದೆ ಹಿಂಪಡೆಯಲು ಆಗ್ರಹ
  • ಕಬ್ಬನ್ ಪಾರ್ಕ್​, ಲಾಲ್​ಬಾಗ್ ವಾಕರ್ಸ್ ಅಸೋಸಿಯೇಷನ್ ಒತ್ತಾಯ
  • ಮುಂದಿನ ಅಧಿವೇಶನದಲ್ಲಿ ಮಸೂದೆ ಹಿಂಪಡೆಯುವ ವಿಶ್ವಾಸ

ಬೆಂಗಳೂರು: ಕರ್ನಾಟಕದಾದ್ಯಂತಇರುವ ಉದ್ಯಾನವನಗಳ ಶೇ. 5ರಷ್ಟುಭೂಮಿಯನ್ನು ಬೇರ್ಪಡಿಸುವ ಉದ್ದೇಶದಪ್ರಸ್ತಾವಿತ ಮಸೂದೆಯನ್ನುಹಿಂಪಡೆಯುವಂತೆ ಬೆಂಗಳೂರಿನಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ವಾಕರ್ಸ್ ಅಸೋಸಿಯೇಷನ್ ಆಗ್ರಹಿಸಿದೆ.

ಈಸಂಬಂಧ ಅಸೋಸಿಯೇಷನ್ ಅಧ್ಯಕ್ಷಡಾ. ಎಸ್. ಉಮೇಶ್ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆನಡೆಸಲಾಗಿತ್ತು. ಮುಖ್ಯಮಂತ್ರಿಡಿ.ಕೆ.ಶಿವಕುಮಾರ್ಪ್ರಸ್ತಾವಿತ ಮಸೂದೆಯನ್ನುಅಧಿಕೃತವಾಗಿ ಹಿಂಪಡೆಯುವುದಾಗಿಭರವಸೆ ನೀಡಿದ ಹಿನ್ನೆಲೆಯಲ್ಲಿಸಂಘವು ತನ್ನ ಹೋರಾಟವನ್ನುತಾತ್ಕಾಲಿಕವಾಗಿ ಹಿಂಪಡೆದಿದೆ.

ಇದೇವೇಳೆ ಭರವಸೆ ನೀಡಿರುವ ಮುಖ್ಯಮಂತ್ರಿಗಳಿಗೆಧನ್ಯವಾದ ಸಲ್ಲಿಸಿರುವ ಅಸೋಸಿಯೇಷನ್, ಮುಂಬರುವ ವಿಧಾನಸಭಾಅಧಿವೇಶನದಲ್ಲಿ ಮಸೂದೆಹಿಂಪಡೆಯುವಿಕೆಯನ್ನು ಔಪಚಾರಿಕವಾಗಿಮಂಡಿಸಿ ಅಂಗೀಕರಿಸುವ ಮೂಲಕ ಸರ್ಕಾರತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು.ಒಂದು ವೇಳೆ ಸರ್ಕಾರಮುಂಬರುವ ಅಧಿವೇಶನದಲ್ಲಿ ಮಸೂದೆಯನ್ನುಹಿಂಪಡೆಯಲು ವಿಫಲವಾದರೆ,ಕಬ್ಬನ್ ಪಾರ್ಕ್ಮತ್ತು ಲಾಲ್‌ಬಾಗ್ ವಾಕರ್ಸ್ಅಸೋಸಿಯೇಷನ್ ರಾಜ್ಯಾದ್ಯಂತಪ್ರತಿಭಟನೆಯನ್ನು ಮತ್ತೆತೀವ್ರಗೊಳಿಸಬೇಕಾಗುತ್ತದೆ ಎಂದುಎಚ್ಚರಿಕೆ ನೀಡಿದೆ.