ಪದವಿಪೂರ್ವ ಕಾಲೇಜು ಮಂಜೂರಾಗಿದ್ದರಿಂದ ವಾಡಿಯಲ್ಲಿ ಎಐಡಿಎಸ್​ಒ, ಎಐಡಿವೈಒ, ಜನದ್ವನಿ ಸಂಟನೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ವೆಂಕಟೇಶ ದೇವದುರ್ಗ, ಸಿದ್ದಯ್ಯಶಾಸಿ ನಂದೂರುಮಠ, ಗೋವಿಂದ ಯಳವಾರ, ರಾಜು ಒಡೆಯರಾಜ ಇತರರಿದ್ದರು. 
ರಾಜ್ಯ

ವಾಡಿಗೆ ಪದವಿಪೂರ್ವ ಕಾಲೇಜು ಮಂಜೂರು

ಪ್ರಮುಖ ಮುಖ್ಯಾಂಶಗಳು

  • ಎಐಡಿಎಸ್​ಒ ಸೇರಿ ವಿವಿಧ ಸಂಘಟನೆಗಳಿಂದ ಸಂಭ್ರಮಾಚರಣೆ
 ವಾಡಿ: ಪಟ್ಟಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದ್ದರಿಂದ ಎಐಡಿಎಸ್​ಒ, ಎಐಡಿವೈಒ ಹಾಗೂ ಜನದ್ವನಿ ಜಾಗೃತ ಸಮಿತಿ ಕಾರ್ಯಕರ್ತರು ಗುರುವಾರ ಸಿಹಿ ಹಂಚಿ ಸಂಭ್ರಮಿಸಿದರು.
ಎಐಡಿಎಸ್​ಒ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಮಾತನಾಡಿ, ಪಟ್ಟಣದಲ್ಲಿ ಪಿಯು ಕಾಲೇಜು ಆರಂಭಿಸುವಂತೆ ಕಳೆದ ಇಪ್ತತ್ತು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿತ್ತು. ೇತ್ರದ ಮೂವರು ಶಾಸಕರು, ಹಿಂದಿನ ಎಲ್ಲ ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ ಮನವಿಪತ್ರ ಸಲ್ಲಿಸಲಾಗಿತ್ತಿ. ಎರಡು ದಶಕಗಳ ನಂತರ ಬೇಡಿಕೆ ಈಡೇರಿಸಿರುವುದು ಸಂತಸ ತಂದಿದೆ. ಇದು ವಿದ್ಯಾರ್ಥಿ ಯುವಜನರ ಹೋರಾಟಕ್ಕೆ ದೊರೆತ ಜಯವಾಗಿದೆ ಎಂದರು.
ಜನಧ್ವನಿ ಜಾಗೃತ ಸಮಿತಿ ಉಪಾಧ್ಯಕ್ಷ ಸಿದ್ದಯ್ಯಶಾಸಿ ನಂದೂರುಮಠ ಮಾತನಾಡಿದರು.
ಎಐಡಿಎಸ್​ಒ ಜಿಲ್ಲಾ ಉಪಾಧ್ಯಕ್ಷ ಗೋವಿಂದ ಯಳವಾರ, ಎಐಡಿವೈಒ ಉಪಾಧ್ಯಕ್ಷ ರಾಜು ಒಡೆಯರಾಜ, ಎಸ್​ಯುಸಿಐಸಿ ಕಾರ್ಯದರ್ಶಿ ಶರಣು ಹೇರೂರ, ಜನಧ್ವನಿ ಜಾಗೃತ ಸಮಿತಿ ಕಾರ್ಯದರ್ಶಿ ಶೇಖ್​ ಅಲ್ಲಾಭಕ್ಷ, ಪ್ರಮುಖರಾದ ಆನಂದ ಆರ್​.ಎನ್​., ವಿಠ್ಠಲ್​ ರಾಠೋಡ್​, ಶರಣುಕುಮಾರ ದೋಶೆಟ್ಟಿ, ದತ್ತಾತ್ರೇಯ ಹುಡೇಕರ, ಶ್ರೀಶೈಲ ಕೆಂಚಗುಂಡಿ ಇತರರಿದ್ದರು.