ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ಅಂತಿಮ ಸೆಮಿಸ್ಟರ್ಎಂಜಿನಿಯರಿಂಗ್ ಪರೀಕ್ಷೆ ಮುಗಿದಕೇವಲ 10 ನಿಮಿಷದೊಳಗೆಫಲಿತಾಂಶ ಪ್ರಕಟಿಸುವ ಮೂಲಕ ಹೊಸಇತಿಹಾಸ ನಿರ್ಮಿಸಿದೆ.
ಫಲಿತಾಂಶವನ್ನುವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ಹಾಗೂ ಕುಲಸಚಿವ (ಮೌಲ್ಯಮಾಪನ)ಪ್ರೊ.ಯು.ಜೆ.ಉಜ್ವಲ್ಜಂಟಿಯಾಗಿ ಬಿಡುಗಡೆ ಮಾಡಿದರು.
ಬಿ.ಇ.ಮತ್ತು ಬಿ.ಟೆಕ್ಅಂತಿಮ ಸೆಮಿಸ್ಟರ್ ಪರೀಕ್ಷೆಗೆ56,192 ವಿದ್ಯಾರ್ಥಿಗಳುಹಾಜರಾಗಿದ್ದರು.ಶುಕ್ರವಾರ ಸಂಜೆ5.30ಕ್ಕೆಪರೀಕ್ಷೆ ಅಂತ್ಯವಾಗಿದ್ದು,5.40ಕ್ಕೆ ಫಲಿತಾಂಶವನ್ನುಬಿಡುಗಡೆ ಮಾಡಿದ್ದು,ಶೇಕಡ 99.98ಫಲಿತಾಂಶ ಸಾಧಿಸಿದೆ.
ಹಿಂದಿನವರ್ಷಗಳಿಗೆ ಹೋಲಿಕೆ ಮಾಡಿದರೆ,ಸಂಪೂರ್ಣ ಮೌಲ್ಯಮಾಪನಪ್ರಕ್ರಿಯೆಯನ್ನು 8ದಿನಗಳ ಮುಂಚಿತವಾಗಿಯೇಮುಗಿಸಿದೆ. ಆಮೂಲಕ ಈ ಹಿಂದಿನ ದಾಖಲೆಗಳನ್ನುಮುರಿದಿದೆ. ಈಹಿಂದೆ ಪರೀಕ್ಷೆ ಮುಗಿದ ಒಂದುಗಂಟೆಯೊಳಗೆ ಫಲಿತಾಂಶವನ್ನುಪ್ರಕಟಿಸಿತ್ತು.ಫಲಿತಾಂಶವನ್ನುವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆನೇರವಾಗಿ ಕಳುಹಿಸಲಾಗಿದೆ.
ಈಕುರಿತು ಮಾತನಾಡಿದ ವಿಟಿಯು ಕುಲಪತಿಪ್ರೊ.ಎಸ್.ವಿದ್ಯಾಶಂಕರ್,ವಿಟಿಯು ತಂತ್ರಜ್ಞಾನಅಳವಡಿಕೆಯಲ್ಲಿ ಸದಾ ಮುಂದಿದೆ.ವಿದ್ಯಾರ್ಥಿಗಳಸ್ನೆಹಿಯಾಗಿದೆ ಎಂಬುದಕ್ಕೆ ಈಫಲಿತಾಂಶವೇ ಸಾಕ್ಷಿಯಾಗಿದೆ.ಪರೀಕ್ಷೆ ಮುಗಿದಕೇವಲ 10 ನಿಮಿಷದಲ್ಲಿಫಲಿತಾಂಶ ನೀಡುವುದು ಸುಲಭದವಿಷಯವಲ್ಲ.ಇದಕ್ಕೆ ಸಹಕಾರನೀಡಿದ ವಿಟಿಯು ಸಿಬ್ಬಂದಿಗಳಿಗೆಅಭಿನಂದನೆ ತಿಳಿಸುತ್ತೇನೆ.ಅಂತಿಮ ವರ್ಷದವಿದ್ಯಾರ್ಥಿಗಳು ಉದ್ಯೋಗ ಮತ್ತುಉನ್ನತ ಶಿಕ್ಷಣ ಪಡೆಯಲು ಫಲಿತಾಂಶದನಿರೀಕ್ಷೆಯಲ್ಲಿರುತ್ತಾರೆ.ಹೀಗಾಗಿ ಶೀಘ್ರವಾಗಿಫಲಿತಾಂಶ ನೀಡಿದ್ದೇವೆ ಎಂದರು.
ವಿದ್ಯಾರ್ಥಿಗಳು https://results.vtu.ac.in/ ವೆಬ್ ಸೈಟ್‌ಗೆಭೇಟಿ ನೀಡುವ ಮೂಲಕ ಫಲಿತಾಂಶವನ್ನುಪಡೆದುಕೊಳ್ಳಬಹುದು.