ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ.  folder
ರಾಜ್ಯ

ವಿಟಿಯು ಆನ್ ಡಿಮ್ಯಾಂಡ್ ಎಕ್ಸಾಮ್

ಸೆಮಿಸ್ಟರ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಾಗಿ ‘ಬೇಡಿಕೆ ಮೇರೆಗಿನ ಪರೀಕ್ಷೆ’ (ಆನ್ ಡಿಮ್ಯಾಂಡ್ ಎಕ್ಸಾಮ್) ನಡೆಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಯವು (ವಿಟಿಯು) ನಿರ್ಧರಿಸಿದೆ.

* ವಿಟಿಯುನಿಂದ ಪ್ರಯೋಜನಕಾರಿ ತೀರ್ಮಾನ

* ಪರೀಕ್ಷೆ ಬರೆದ 24 ಗಂಟೆಗಳಲ್ಲಿ ಲಿತಾಂಶ ಪ್ರಕಟ

ಬೆಂಗಳೂರು: ಸೆಮಿಸ್ಟರ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಾಗಿ ‘ಬೇಡಿಕೆ ಮೇರೆಗಿನ ಪರೀಕ್ಷೆ’ (ಆನ್ ಡಿಮ್ಯಾಂಡ್ ಎಕ್ಸಾಮ್) ನಡೆಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಯವು (ವಿಟಿಯು) ನಿರ್ಧರಿಸಿದೆ.

ಒಂದು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಅರ್ಹತೆ, ಅರ್ಜಿ ಸಲ್ಲಿಕೆ, ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಲಿತಾಂಶವನ್ನು 24 ಗಂಟೆಗಳಲ್ಲಿ ಪ್ರಕಟಿಸಲು ಕ್ರಮವಹಿಸಿದೆ.

ಈ ಪರೀಕ್ಷಾ ವ್ಯವಸ್ಥೆ ಜಾರಿಯ ಜತೆಗೆ, ವಿದ್ಯಾರ್ಥಿಗಳು ಇನ್ನು ಮುಂದೆ ವಿಶ್ವವಿದ್ಯಾಲಯವು ನಡೆಸುವ ಪೂರಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ತನಕ ಕಾಯಬೇಕಾಗಿಲ್ಲ. ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ, ಅನುಕೂಲವಾಗುವ ಸಮಯದಲ್ಲಿ ಪರೀಕ್ಷೆಗಳನ್ನು ನಡೆಸಲು ವಿವಿ ತೀರ್ಮಾನ ತೆಗೆದುಕೊಂಡಿದೆ. ರಜೆಯ ದಿನಗಳಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಈ ವಿವಿ ವ್ಯಾಪ್ತಿಯಲ್ಲಿ 220 ಎಂಜಿನಿಯರಿಂಗ್ ಕಾಲೇಜುಗಳಿದ್ದು, 3 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಎಐ ತಂತ್ರಜ್ಞಾನ ಬಳಕೆ:

ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿಟಿಯು ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುತ್ತದೆ. ಇದಕ್ಕಾಗಿ 500 ರಿಂದ 600 ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡ ಪ್ರಶ್ನೆ ಪತ್ರಿಕೆ ಬ್ಯಾಂಕ್ ಅನ್ನು ಹೊಂದಿದೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ವಿಶ್ವವಿದ್ಯಾಲಯವು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಲಿದೆ.