ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 
ರಾಜ್ಯ

ವಿಟಿಯುದಿಂದ ಪಿಎಚ್‌ಡಿಗೆ ಅರ್ಜಿ ಆಹ್ವಾನ

ಎನ್.ಎಲ್. ಶಿವಮಾದು
ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ, ಎಂಎಸ್‌ಸಿ, ಸಂಶೋಧನಾ ಕೋರ್ಸ್ ವರ್ಕ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಬಯಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಮಾ.31ರೊಳಗಾಗಿ ಅರ್ಜಿ ಸಲ್ಲಿಸಬಹುದು. ಏ.2ರವರೆಗೆ ದಂಡ ಶುಲ್ಕ 500 ರೂ. ಪಾವತಿಸಿ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ನೀಡಲಾಗಿದೆ. ವಿಟಿಯು ವೆಬ್‌ಸೈಟ್‌ಗೆ ಭೇಟಿ ನೀಡಿ ಸಂಶೋಧನಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜ್ಞಾನಶೋಧ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಪ್ರತಿ ವಿಷಯಕ್ಕೆ 1,500 ಹಾಗೂ ಗ್ರೇಡ್ ಕಾರ್ಡ್‌ಗೆ 200 ರೂ. ಪಾವತಿಸಬೇಕು ಎಂದು ವಿಟಿಯು ಪ್ರಕಟಣೆ ತಿಳಿಸಿದೆ.