ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸಂಸತ್ತು ಚುನಾವಣೆ ವೇಳೆ ಶಿಕ್ಷಕರು ಮತದಾನ ಮಾಡಿದರು. ಜಯಶ್ರೀ ನಾಗಲೋಟಿ, ಸುಮಿತ್ರಾ ಪತ್ತಾರ, ವಿಜಯಾ ಚೌಕದ, ಬಿ.ಎಲ್. ಸಂಕದಾಳ, ಸುಮಿತ್ರಾ ಶಿವನಪ್ಪನವರ ಇತರರಿದ್ದರು. 
ರಾಜ್ಯ

ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಪ್ರಾಂಶುಪಾಲ ಎಚ್.ಎನ್ ಹೊಸಮನಿ ಹೇಳಿಕೆ
  • ಶಾಲಾ ಸಂಸತ್ತು ರಚನೆ
ಬಾದಾಮಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣೆ ಮತದಾನಕ್ಕೆ ಮಹತ್ವವಿದೆ. ಇಂದಿನ ಮಕ್ಕಳೇ ನಾಳಿನ ಮತದಾನದ ಪ್ರಭುಗಳು, ಮಕ್ಕಳಿಗೆ ಶಾಲಾ ಹಂತದಲ್ಲಿ ಚುನಾವಣೆಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದು ಪ್ರಾಂಶುಪಾಲ ಎಚ್.ಎನ್ ಹೊಸಮನಿ ಹೇಳಿದರು.
ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಇತ್ತೀಚೆಗೆ ನಡೆಸಿದ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಚುನಾವಣೆ ಪ್ರಕ್ರಿಯಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ಚುನಾವಣೆ ಹಾಗೇಯೇ ಶಾಲೆಯಲ್ಲಿ ಚುನಾವಣೆ ನಡೆಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಚುನಾವಣೆ ವೇಳಾಪಟ್ಟಿ ಪ್ರಕಟ, ಮತದಾರರ ಪಟ್ಟಿ, ನಾಮಪತ್ರ ಸಲ್ಲಿಸುವಿಕೆ, ಚುನಾವಣೆ ಪ್ರಣಾಳಿಕೆ, ಪ್ರಚಾರ ಹಾಗೂ ಮತಗಟ್ಟೆಗಳಲ್ಲಿ ಮತದಾರರು ಸಾಲಾಗಿ ನಿಂತು ಮತದಾನ ಮಾಡುವುದನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮುಖಾಂತರ ತಿಳಿಸಿಕೊಡಲಾಯಿತು.
ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಉತ್ಸಾಹದಿಂದ ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು. ಮತದಾನದ ಮಹತ್ವ ಹಾಗೂ ಅನುಭವವನ್ನು ಮಕ್ಕಳು ಪಡೆದುಕೊಂಡರು. 10ನೇ ತರಗತಿ ವಿದ್ಯಾರ್ಥಿನಿ ಸಹನಾ ಕಳ್ಳಿಗುಡ್ಡ ಶಾಲೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಶಿಕ್ಷಕರಾದ ಜಯಶ್ರೀ ನಾಗಲೋಟಿ, ಸುಮಿತ್ರಾ ಪತ್ತಾರ, ವಿಜಯಾ ಚೌಕದ, ಬಿ.ಎಲ್. ಸಂಕದಾಳ, ಸುಮಿತ್ರಾ ಶಿವನಪ್ಪನವರ, ಗೀತಾ ಗಿರಿತಿಮ್ಮಣ್ಣನವರ, ಆರ್.ಎಸ್. ಮಾದರ, ಎಂ. ಬಾಗವಾನ, ಎಸ್.ವೈ. ಗಿಣ್ಣಿ, ನಿಂಗರಾಜ ತಳ್ಳೊಳ್ಳಿ, ಆರ್.ಎಚ್. ಐಹೊಳ್ಳಿ, ಗೋಪಾಲ ದೊಡಮನಿ, ವೈ.ಬಿ. ಭಜಂತ್ರಿ ಇತರರಿದ್ದರು.