ಮತದಾರರು ಸುಳ್ಳು ಸುದ್ದಿಗೆ ಕಿವಿಗೊಡದಿರಿ fake news
- ಕೋಲಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯ ಮೈಲಾಂಡಹಳ್ಳಿ ಮುರಳಿ ಹೇಳಿಕೆ
ನರಸಾಪುರ: ಉದ್ದೇಶಪೂರ್ವಕವಾಗಿ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಅಥವಾ ಲೋಕಾಯುಕ್ತಕ್ಕೆ ಹೋಗಲಿ ಎಂದು ಕೋಲಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯ ಮೈಲಾಂಡಹಳ್ಳಿ ಮುರಳಿ ತಿಳಿಸಿದರು. fake news
ಕೋಲಾರ ತಾಲೂಕಿನ ನರಸಾಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬುಧವಾರ ನರಸಾಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂ ನಿಗಮದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ಕೆಲವು ಕಿಡಿಗೇಡಿಗಳು ಚುನಾವಣೆಗೆ ಪೈಪೋಟಿ ಮಾಡುವ ಸಾಮರ್ಥ್ಯವಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವೀಡಿಯೋ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದರು.
ನರಸಾಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂ ನಿಗಮದ ಅಧ್ಯ ಕೆ.ಎಂ.ಮುನಿರಾಜು ಮೇಲೆ ಇಲ್ಲಸಲ್ಲದ ಆರೋಪ ಮಾಡಿ ತೇಜುವದೇ ಮಾಡುತ್ತಿದ್ದಾರೆ. ವಿಡಿಯೋ ಹಂಚಿಕೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಮತದಾರರು ಇಂಥ ಸುಳ್ಳು ಸುದ್ದಿಗೆ ಕಿವಿಗೊಡಬಾರದು ಎಂದು ತಿಳಿಸಿದರು.
ನರಸಾಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂದ ಅಧ್ಯ ಕೆ.ಎಂ.ಮುನಿರಾಜು ಮಾತನಾಡಿ, ಡಿಸಿಸಿ ಬ್ಯಾಂಕ್ನಲ್ಲಿ ಅಧ್ಯನಾದ ನಂತರ ರೈತರಿಗೆ ಡಿಸಿಸಿ ಬ್ಯಾಂಕ್ನಿಂದ 40 ಕೋಟಿ ರೂಪಾಯಿಯನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲಾಗಿದೆ. ವರ್ಷಕ್ಕೆ ಸೊಸೈಟಿಗೆ 30&35 ಲ ಆದಾಯ ಬರುತ್ತದೆ. ಈ ಆದಾಯದಲ್ಲಿ ಸಂಬಳ ಹಾಗೂ ಇನ್ನಿತರ ಖರ್ಚು ಕಳೆದು ಉಳಿಕೆಯಾಗುವುದು ಕೇವಲ 5 ರಿಂದ 10 ಲ ಮಾತ್ರ, ಆದರೆ 10 ಕೋಟಿ ರೂ. ಹಣ ಯಾವ ರೀತಿ ಎತ್ತಿಕೊಂಡು ಹೋಗಲು ಸಾಧ್ಯ ಎಂದು ಹೇಳಿದರು.