ಗುಬ್ಬಿ ತಾಲೂಕಿನ election ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿಗೆ ಸಿಂಡಿಕೇಟ್ ತಂಡ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಮುಖಂಡರಾದ ಶಶಿಭೂಷಣ, ದಿವ್ಯಪ್ರಕಾಶ್, ಯತೀಶ್, ಬಸವಲಿಂಗಪ್ಪ, ಸಿದ್ಧಲಿಂಗಮೂರ್ತಿ, ವಿಶ್ವನಾಥ್ ಇದ್ದರು.
ನೊಳಂಬ ಲಿಂಗಾಯಿತ ಸಂಕ್ಕೆ ಆ.23ರಂದು ಜಿಲ್ಲಾ ನಿರ್ದೇಶಕರ ಚುನಾವಣೆ ನಿಗದಿಯಾಗಿದ್ದು,
ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದ 8 ಮಂದಿ ನಿರ್ದೇಶಕರ ಆಯ್ಕೆಗೆ ಸಾಗರನಹಳ್ಳಿ ನಟರಾಜ್ ನೇತೃತ್ವದ ಸಿಂಡಿಕೇಟ್ ತಂಡ ಚುನಾವಣಾ ಪ್ರಚಾರ ಹಾಗೂ ಮತಯಾಚನೆಗೆ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ನಿರ್ದೇಶಕ ಸ್ಥಾನದ ಸ್ಪರ್ಧಿ ಸಾಗರನಹಳ್ಳಿ ನಟರಾಜ್ ಮಾತನಾಡಿ, ಜಿಲ್ಲೆಯಲ್ಲಿ 7,240 ಮತಗಳು ನೊಳಂಬ ಲಿಂಗಾಯಿತ ಸಂದಲ್ಲಿದೆ. ಗುಬ್ಬಿ ತಾಲೂಕಿನಲ್ಲಿ 1,460 ಮತಗಳಿವೆ. ನೊಳಂಬ ಲಿಂಗಾಯಿತ ಸಮಾಜದ ಪ್ರಗತಿಗೆ ಎಲ್ಲ ಮತದಾರರು ಒಟ್ಟು 31 ಮಂದಿ ಸ್ಪರ್ಧಿಗಳ ಪೈಕಿ ನಮ್ಮ 8 ಜನರ ತಂಡಕ್ಕೆ ನಿಮ್ಮ ಅಮೂಲ್ಯ ಮತ ನೀಡಿ ಗೆಲ್ಲಿಸಿ. ನಿಮ್ಮ ಅಭಿಲಾಷೆಗೆ ತಕ್ಕಂತೆ ಸಮಾಜದ election ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ನಮ್ಮ ಸಿಂಡಿಕೇಟ್ ತಂಡ ದುಡಿಯಲಿದೆ ಎಂದು ತಿಳಿಸಿದರು.
ಗುಬ್ಬಿ ತಾಲೂಕಿನ ಪ್ರವಾಸಕ್ಕೆ ಗುಬ್ಬಿಯಪ್ಪ ಆಶೀರ್ವಾದ ಪಡೆದು ಎರಡು ದಿನಗಳ ಪ್ರಚಾರ ಕಾರ್ಯ ಮಾಡಿ ಮತದಾರರನ್ನು ನೇರವಾಗಿ ಭೇಟಿ ಮಾಡಿ ನಮ್ಮ ತಂಡಕ್ಕೆ ಮತಯಾಚನೆ ಮಾಡುತ್ತೇವೆ. ನಮ್ಮ ತಂಡದಲ್ಲಿ ನಾನು ಸಾಗರನಹಳ್ಳಿ ನಟರಾಜ್ ಸೇರಿ ಎಸ್.ಗಂಗಾಧರಯ್ಯ(ಪಿಬಿಆರ್), ರಾಜಶೇಖರಯ್ಯ, ಚುಂಗನಹಳ್ಳಿ ಮೋಹನ್ ಕುಮಾರ್, ತುರುವೇಕೆರೆ ಕುಮಾರಸ್ವಾಮಿ, ಗೋಡೆಕೆರೆ ಮರಿಸ್ವಾಮಿ, ಎಂ.ಎಸ್.ಯೋಗೇಶ್, ಕೆ.ರಾಜಣ್ಣ ಸ್ಪರ್ಧೆಯಲ್ಲಿದ್ದಾರೆ. ನಿಮ್ಮ ಅಮೂಲ್ಯ ಮತ ನೀಡಿ ಸಮಾಜದ ಸೇವೆಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಮುಖಂಡರಾದ ಹೇರೂರು ರಮೇಶ್, ರುದ್ರಪ್ರಸಾದ್, ಮಂಜುನಾಥ್, ಪಿಬಿಆರ್ ಭರತ್, ಕೆ.ಎಂ.ರವೀಶ್, ಮರಿಸ್ವಾಮಿ, ವಿವೇಕ್, ಉಮೇಶ್ ಇದ್ದರು.