ದೇವನಹಳ್ಳಿ ಮಲಸಂಸ್ಕರಣಾ ಘಟಕಕ್ಕೆ ಸಚಿವ ಕೆ.ಎಚ್​.ಮುನಿಯಪ್ಪ ಭೇಟಿ ನೀಡಿ ಪರಿಶೀಲಿಸಿ ಉತ್ತಮ ನಿರ್ವಹಣೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಪುರಸಭೆ ಮುಖ್ಯಾಧಿಕಾರಿ ಎ.ಶಿವಮೂರ್ತಿ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೆ.ಸಿ.ಮಂಜುನಾಥ್​ ಇತರರು ಇದ್ದರು.  
ರಾಜ್ಯ

ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ / DEVANAHALLI

ದೇವನಹಳ್ಳಿ: ಪುರಸಭೆ ವ್ಯಾಪ್ತಿಯ ಬೈಪಾಸ್​ ರಸ್ತೆಯಲ್ಲಿರುವ ಮಲತ್ಯಾಜ್ಯ ಸಂಸ್ಕರಣಾ ಘಟಕಕ್ಕೆ (ಎಫ್​.ಎಸ್​.ಟಿ.ಪಿ. ಪ್ಲಾಂಟ್​) ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ ಭೇಟಿ ನೀಡಿ ನಿರ್ವಹಣಾ ವ್ಯವಸ್ಥೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವ ಕೆ.ಎಚ್​.ಮುನಿಯಪ್ಪ ಮಾತನಾಡಿ, ಕುಂದಾಣ ಹೋಬಳಿ, ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನ ಸುಣ್ಣಟ್ಟದ ಬಳಿ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಎಫ್​ಎಸ್​ಟಿಪಿ ಪ್ಲಾಂಟ್​ ನಿರ್ಮಿಸಲು ಉದ್ದೇಶಿದ್ದು, ಈಗಾಗಲೇ ರಾಷ್ಟ್ರದಲ್ಲಿ ಪ್ರಥಮ ಎಫ್​ಎಸ್​ಟಿಪಿ ಎಂಬ ಖ್ಯಾತಿಯ ಈ ಪ್ಲಾಂಟ್​ ನಿರ್ವಹಣೆಯನ್ನು ಪರಿಶೀಲಿಸಲಾಯಿತು. ಇಲ್ಲಿ ಸಂಸ್ಕರಿಸಿದ ಮಲದಿಂದ ಗೊಬ್ಬರ ತಯಾರಿಸಿ ಅದನ್ನು ವ್ಯವಸಾಯಕ್ಕೆ ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇದೇ ರೀತಿ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಎಫ್​ಎಸ್​ಟಿಪಿಟಿಪಿ ನಿರ್ಮಿಸಿದರೆ ಸ್ವಚ್ಛತೆ ಹಾಗೂ ಪರಿಸರ ರಕ್ಷಣೆ ಜತೆಗೆ ರೈತರಿಗೆ ಉತ್ತಮ ಕೊಟ್ಟಿಗೆ ಗೊಬ್ಬರ ಸಿಗಲಿದೆ ಎಂದು ಮಾಹಿತಿ ನೀಡಿದರು.