ಜೀವನದ ಸತ್ಯ ತಿಳಿಯಲು ಆಸ್ಪತ್ರೆ, ಸ್ಮಶಾನಗಳಿಗೆ ಭೇಟಿ ನೀಡಿ life 
ರಾಜ್ಯ

ಜೀವನದ ಸತ್ಯ ತಿಳಿಯಲು ಆಸ್ಪತ್ರೆ, ಸ್ಮಶಾನಗಳಿಗೆ ಭೇಟಿ ನೀಡಿ life

ಚಿಂತಾಮಣಿ: ಪ್ರತಿಯೊಬ್ಬರೂ ಆಗಾಗ್ಗೆ ಆಸ್ಪತ್ರೆ, ಬಂದೀಖಾನೆ ಹಾಗೂ ಸ್ಮಶಾನಗಳಿಗೆ ಹೋಗಿ ಬರಬೇಕು. ಇದರಿಂದ ಜೀವನದಲ್ಲಿ ಎದುರಿಸಬೇಕಾದ ನೋವು, ವಾಸ್ತವಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಶಿಕ್ಷಕ ಕೆ.ಜಿ.ಶ್ರೀರಾಮಪ್ಪ ತಿಳಿಸಿದರು.truth of life
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ವೇದಿಕೆಯ ಮಾಸಿಕ ಸಭೆಯಲ್ಲಿ ಮಾತನಾಡಿ, ಮಾನವನ ಜೀವನದ ಕುರಿತು ಆಳವಾಗಿ ತಿಳಿದುಕೊಳ್ಳಬೇಕಾದರೆ ಸಮಾಜದಲ್ಲಿನ ಸಮಸ್ಯೆಗಳ ಅರಿವಿರಬೇಕು. ಅಲ್ಲದೆ ಆಡುವ ಮಾತು ಹಿತ&ಮಿತವಾಗಿರಬೇಕು. ನಾಲಿಗೆ ಹೊರಳಿದರೆ ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಿವೃತ್ತ ಉಪ ನಿರ್ದೇಶಕ ಎಂ.ವಿ.ವೆಂಕಟಸ್ವಾಮಿ ಮಾತನಾಡಿ, ಹಿರಿಯರು ಧಾರ್ಮಿಕ ಗ್ರಂಥಗಳನ್ನು ಓದುತ್ತಿರಬೇಕು.ಮನುಷ್ಯ ತನ್ನನ್ನು ತಾನು ಅರಿತು, ನಡೆ&ನುಡಿಗಳನ್ನು ಉತ್ತಮವಾಗಿ ಇಟ್ಟುಕೊಂಡರೆ ದೇವರಾಗಬಹುದು ಎಂದರು.
ನಿವೃತ್ತ ಶಿಕ್ಷಕ ಕೆ.ಎಲ್​.ನರಸಿಂಹಮೂರ್ತಿ ಮಾತನಾಡಿ, ರಾಮಾಯಣ ಮತ್ತು ಮಹಾಭಾರತದಲ್ಲಿನ ಕೆಲವು ಸಂದೇಹಗಳ ಕುರಿತು ಪ್ರಸ್ತಾಪಿಸಿದರು.
ಸಾಹಿತಿ ಕಾಗತಿ ವೆಂಕಟರತ್ನಂ ಮಾತನಾಡಿ, ಹಿರಿಯ ನಾಗರಿಕರು ವಿಶ್ರಾಂತಿಗೆ ಸೀಮಿತವಾಗದೆ ಸಮಾಜದ ಪರ ಕಾರ್ಯಕ್ರಮಗಳಲ್ಲಿ ಆಸಕ್ತಿ ತೋರಬೇಕು. ಪುಸ್ತಕಗಳ ಓದು ಹಾಗೂ ಸತವೃತ್ತಿಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷಿ$್ಮ ತಂಡದವರಿಂದ ಭಕ್ತೀಗಿತೆ ಗಾಯನ ನಡೆಯಿತು. ಹಿರಿಯ ಸಂಗೀತ ವಿದ್ವಾಂಸ ಎನ್​.ಶಿವರಾಂ ಭಾವಗೀತೆ ಹಾಡಿದರೆ, ಹಿರಿಯ ತತ್ವಪದಗಾರ ಶಂಕರರೆಡ್ಡಿ ಚೌಡೇಶ್ವರಿ ದಂಡಕ ಪಠಿಸಿದರು. ಪಾರ್ವತಮ್ಮಜನಪದ ಗೀತೆ, ಮಂಗಳಗೌರಿ ಭಕ್ತೀಗಿತೆ ಹಾಗೂ ಜಿ.ಟಿ.ವೆಂಕಟರಮಣರೆಡ್ಡಿ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ನಿವೃತ್ತ ಶಿಕ್ಷಕ ಸುಬ್ಬರಾಯಪ್ಪ ಪ್ರಚಲಿತ ವಿದ್ಯಮಾನಗಳ ಕುರಿತು ನಡೆಸಿಕೊಟ್ಟ ಪ್ರಶ್ನೋತ್ತರ ಕಾರ್ಯಕ್ರಮ ಎಲ್ಲರನ್ನೂ ಚುರುಕುಗೊಳಿಸಿತು.