ಪವರ್​ಲಿಫ್ಟಿಂಗ್​ ಸ್ಪರ್ಧೆಯ ವಿಜೇತರು 
ರಾಜ್ಯ

'ಸ್ಟ್ರಾಂಗ್​​ಮ್ಯಾನ್ ಆಫ್ ಸೌಥ್ ಇಂಡಿಯಾ' ಆಗಿ ಹೊರಹೊಮ್ಮಿದ ವಿಶ್ವನಾಥ್ ಭಾಸ್ಕರ್​

ಪ್ರಮುಖ ಮುಖ್ಯಾಂಶಗಳು

  • 'ಸ್ಟ್ರಾಂಗ್​​ಮ್ಯಾನ್ ಆಫ್ ಸೌಥ್ ಇಂಡಿಯಾ' ಆಗಿ ಹೊರಹೊಮ್ಮಿದ ವಿಶ್ವನಾಥ್ ಭಾಸ್ಕರ್​
  • ದಕ್ಷಿಣ ಭಾರತದ ಪವರ್​ಲಿಫ್ಟಿಂಗ್ ಚಾಂಪಿಯನ್​ಷಿಪ್​ನಲ್ಲಿ ಚಿನ್ನದ ಪದಕ
870kg ಭಾರವನ್ನು 105kg ಸೀನಿಯರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಇಷ್ಟಲ್ಲದೆ, 'ಸ್ಟ್ರಾಂಗ್ ಮ್ಯಾನ್ ಆಫ್​ ಸೌತ್ ಇಂಡಿಯಾ' ಟೈಟಲ್ ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಇನ್ನು ಇವರ ವಿದ್ಯಾರ್ಥಿಗಳಾದ ಧೀಶಾ ಮೋಹನ್ 63kg ಜೂನಿಯರ್ ವಿಭಾಗದಲ್ಲಿ ಚಿನ್ನ, 84ಕ್ಕೂ ಅಧಿಕ ಕೆಜಿ ವಿಭಾಗದಲ್ಲಿ ದೇವಿಕಾ ಅಶ್ವಿನ್ ದೇಸಾಯಿ ಚಿನ್ನ ಮತ್ತು ಸೀನಿಯರ್ 84 ಕೆಜಿ ವಿಭಾಗದಲ್ಲಿ ತೇಜಸ್ವಿನಿ ಬೆಳ್ಳಿ ಪದಕ ಗೆದ್ದು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.