ಇಂಡಿ ನಗರದಲ್ಲಿ ಕಾಳಿಕಾದೇವಿ ಜಾತ್ರಾ ಮಹೋತ್ಸವ ಉಚಿತ ಸಾಮೂಹಿಕ ಉಪನಯನ ಹಾಗೂ ನೂತನ ರಥೋತ್ಸವದ ಕಾರ್ಯಕ್ರಮದಲ್ಲಿ ದೇವಸ್ಥಾನ ಕಮಿಟಿ ವತಿಯಿಂದ ಶಾಸಕ ಯಶವಂತರಾಯಗೌಡ ಪಾಟೀಲರನ್ನು ಸತ್ಕರಿಸಲಾಯಿತು. ಪ್ರಣವ ನಿರಂಜನ ಶ್ರೀ, ಕನ್ನೂರ ಪ್ರಕಾಶ ಶ್ರೀ ಇತರರಿದ್ದರು.
- ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿಕೆ
- ಕಾಳಿಕಾದೇವಿ ಜಾತ್ರಾ ಮಹೋತ್ಸವ
ಇಂಡಿ: ವಿಶ್ವಕರ್ಮ ಸಮಾಜದವರು ಶಿಲ್ಪಕಲೆ ವಾಸ್ತುಶಿಲ್ಪ ಮತ್ತು ಲೋಹದ ಕೆಲಸಗಳಲ್ಲಿ ಪರಿಣಿತರಿದ್ದು ಸಮಾಜಕ್ಕೆ ಅವರ ಕೊಡುಗೆ ಅಪಾರ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ನಗರದಲ್ಲಿ ಕಾಳಿಕಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಉಚಿತ ಸಾಮೂಹಿಕ ಉಪನಯನ ಹಾಗೂ ನೂತನ ರಥೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಳಿಕಾದೇವಿ ದೇವಸ್ಥಾನಕ್ಕೆ ವ್ಯವಸ್ಥಿತ ರಸ್ತೆ, ದೇವಸ್ಥಾನ ಸುತ್ತ ವಿದ್ಯುತ್ ವ್ಯವಸ್ಥೆ ಮತ್ತು ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.
ಕಲಬುರಗಿಯ ಪ್ರಣವ ನಿರಂಜನ ಶ್ರೀಗಳು ಮಾತನಾಡಿ, ವಿಶ್ವಕರ್ಮ ಸಮಾಜ ಮಾನವನ ಜೀವನದ ಪ್ರತಿಯೊಂದು ಹಂತದಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಮಗು ಹುಟ್ಟಿದಾಗಿನಿಂದಲೇ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಆಚರಣೆಗಳಲ್ಲಿ ತನ್ನ ಕೊಡುಗೆ ನೀಡುತ್ತದೆ. ಮದುವೆ ಸಂದರ್ಭಗಳಲ್ಲಿ ತಾಳಿ, ಕಾಲುಂಗರ, ಓಲೆ ಸೇರಿ ವಿವಿಧ ವಸ್ತುಗಳನ್ನು ತಯಾರಿಸುವ ಮೂಲಕ ಮಂಗಲ ಕಾರ್ಯಗಳಿಗೆ ಸಹಕಾರ ನೀಡುತ್ತದೆ ಎಂದರು.
ಕನ್ನೂರ ಪ್ರಕಾಶ ಶ್ರೀಗಳು ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ
ವಿಶ್ವಕರ್ಮ ಸಮಾಜದ ಪಾತ್ರ ಅಪಾರವಾಗಿದೆ ಎಂದರು.
ಪುರಾಣ ಮಹಾಮಂಗಲ, ಉಡಿ ತುಂಬುವ ಕಾರ್ಯಕ್ರಮ, ಉಚಿತ ಸಾಮೂಹಿಕ ಉಪನಯನ ಹಾಗೂ ಶ್ರೀ ಕಾಳಿಕಾ ಸೇವಾಭೂಷಣ ಪ್ರಶಸ್ತಿ ಸಮಾರಂಭ ನಡೆದವು.
ಮುರನಾಳದ ಜಗನ್ನಾಥ ಶ್ರೀಗಳು, ಬೌರಮ್ಮ ಕಣ್ಣಿ, ಅಗರಖೇಡದ ಪ್ರಭುಲಿಂಗೇಶ್ವರ ಶ್ರೀಗಳು, ಹಿಕ್ಕಣಗುತ್ತಿ ಪ್ರಭುಲಿಂಗ ಶ್ರೀಗಳು, ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ, ಭಾಗ್ಯಶ್ರೀ ಯಶವಂತಗೌಡ ಪಾಟೀಲ ಹಾಗೂ ಡಾ. ಪವಿತ್ರಾ ಬೆಂಗಳೂರು, ಬಸವರಾಜ ಕಣ್ಣಿ, ಶರಣಗೌಡ ನಾನಾಗೌಡ ಬಿರಾದಾರ, ದತ್ತಾತ್ರೇಯ ಸುತಾರ, ನರಸಿಂಹ ಬಡಿಗೇರ, ವಿಠ್ಠಲಾಚಾರ್ಯ, ಕಾಳಿಕಾ ದೇವಸ್ಥಾನದ ಅರ್ಚಕರು, ಮತ್ತಿತರರಿದ್ದರು.