ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರಗಳನ್ನು ನೀಡಲಾಯಿತು. ಕಾರ್ಯಾಧ್ಯಕ್ಷ ಸುಂದರೇಶ್​ ನರ್ಗಲ್​, ಕಾರ್ಯದರ್ಶಿ ರಮೇಶ್​ ಗೌಡ, ಧರ್ಮ ಪ್ರಚಾರಕ ಶ್ರೀನಿವಾಸ್​ ಗುರೂಜಿ, ಜಿಲ್ಲಾಧ್ಯಕ್ಷ ಪ್ರಕಾಶ್​ ಗೌಡ, ದುರ್ಗಸೇನೆ ಅಧ್ಯಕ್ಷೆ ಉಮಾದೇವಿ ಇತರರು ಇದ್ದರು. 
ರಾಜ್ಯ

ವಿರಾಟ್​ ಹಿಂದೂ ಸಮಾವೇಶಕ್ಕೆ ಸಿದ್ಧತೆ / DODDABALLAPUR

ದೊಡ್ಡಬಳ್ಳಾಪುರ : ನಗರದ ಪ್ರವಾಸಿ ಮಂದಿರದಲ್ಲಿ ಶ್ರೀರಾಮಸೇನೆಯ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಸೋಮವಾರ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು. ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಸೂಚನೆ ಮೇರೆಗೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ದೊಡ್ಡಬಳ್ಳಾಪುರ ಸೇರಿ ಗ್ರಾಮಾಂತರ ಜಿಲ್ಲೆಯಲ್ಲಿ ಅಕ್ರಮವಾಗಿ ಗೋಮಾಂಸ ಸರಬರಾಜು ಮಾಡಲಾಗುತ್ತಿದೆ.
ಗೋವಿನ ವಿಚಾರದಲ್ಲಿ ಚಿಕ್ಕಬಳ್ಳಾಪುರ ರೈತರಿಗೆ ಅನ್ಯಾಯವಾಗುತ್ತಿದೆ. ಬಡವರಿಗೆ ನ್ಯಾಯ ಸಿಗುತ್ತಿಲ್ಲ. ಯಾವುದೇ ಪಕ್ಷವಾದರೂ ಜನಪರ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ವಿರಾಟ್​ ಹಿಂದೂ ಸಮಾವೇಶವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಯುತ್ತಿದೆ ಎಂದು ಕಾರ್ಯಾಧ್ಯಕ್ಷ ಸುಂದರೇಶ್​ ನರ್ಗಲ್​ ಹೇಳಿದರು.
ಧರ್ಮ ಪ್ರಚಾರಕ ಶ್ರೀನಿವಾಸ್​ ಗುರೂಜಿ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಹಿಂದು ಸಂಘಟನೆಯ ಕೊರತೆ ಇದೆ. ಜನಪ್ರತಿನಿಧಿಗಳ ಬಳಿ ಹೋದರೆ ಪ್ರಯೋಜನವಾಗುತ್ತಿಲ್ಲ. ಕೆಲ ಸಂಘಟನೆಗಳು ಶೋಭಯಾತ್ರೆಗೆ ಸೀಮಿತವಾಗುತ್ತಿದೆ. ಶ್ರೀರಾಮಸೇನೆ ದೊಡ್ಡಬಳ್ಳಾಪುರ ಜನಗಳ ಧ್ವನಿಯಾಗಬೇಕು. ಕಟ್ಟಕಡೆಯ ವ್ಯಕ್ತಿಯ ಸಮಸ್ಯೆ ಕೇಳಲು ಕೆಲಸ ಮಾಡಲಾಗುತ್ತದೆ.
ನಾವು ಗೋವು ಸಾಗಾಟ ಮಾಡಿದವರನ್ನು ಹಿಡಿದರೆ ನಮ್ಮ ಮೇಲೆ ಕೇಸ್​ ಹಾಕಲಾಗುತ್ತಿದೆ. ಗೋವು ಸಾಗಣೆ ಮಾಡಿದವರ ಮೇಲೆ ಕೇಸ್​ ಇಲ್ಲ. ಹಿಂದುಗಳು ಎಂದರೆ ಎಲ್ಲವನ್ನೂ ಸಹಿಸಿಕೊಳ್ಳುವಂತಾಗಿದೆ. ಹಿಂದು ಸಮಾಜ ಸಂಸ್ಕಾರ ವಂಚಿತರಾಗಿದ್ದಾರೆ. ಮುಂದೆ ನಮ್ಮ ಒಳಗೆ ಇರುವ ಶತ್ರುಗಳ ವಿರುದ್ಧವೇ ಹೋರಾಟ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಮನೆಮನೆ ತಲುಪುವ ಚಿಂತನೆ ಇದೆ ಎಂದರು.