ಯಾದಗಿರಿಯಲ್ಲಿ ಭಾನುವಾರ ಕರೆದಿದ್ದ ಸಭೆಯಲ್ಲಿ ವಿಐಪಿ ಪಕ್ಷದ ಅಧ್ಯಕ್ಷ ಬಿ.ಕೆ.ಮೋಹನಕುಮಾರ್ ಮಾತನಾಡಿದರು. ಪ್ರಶಾಂತ, ಮಲ್ಲಿಕಾರ್ಜುನ ಗೋಷಿ, ನಾಗರಾಜ ನಾಟೇಕರ್ ಇದ್ದರು. 
ರಾಜ್ಯ

ರಾಜ್ಯದ ೭೦ ಕ್ಷೇತ್ರಗಳಲ್ಲಿ ವಿಐಪಿ ಸ್ಪರ್ಧೆ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಮೋಹನಕುಮಾರ್ ಹೇಳಿಕೆ
  • ಯಾದಗಿರಿಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಸಂಘಟನಾ ಸಭೆ
ಯಾದಗಿರಿ : ತಳಮಟ್ಟದಿಂದ ಸಂಘಟನೆ ಮಾಡಿ ಅತಿ ಹಿಂದುಳಿದ, ಅಲೆಮಾರಿ ಸಮಾಜದ ಧ್ವನಿಯಾಗಿ ಪಕ್ಷ ಕೆಲಸ ಮಾಡಲಿದೆ. ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ೭೦ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ೧೦-೧೫ ಕಡೆ ಗೆಲ್ಲಲಿದೆ ಎಂದು ವಿಕಾಸಶೀಲ ಇನ್ಸಾನ್ ಪಾರ್ಟಿ(ವಿಐಪಿ) ಅಧ್ಯಕ್ಷ ಬಿ.ಕೆ. ಮೋಹನಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಪಕ್ಷದ ಉದ್ದೇಶ. ಈಗಾಗಲೇ ಕಲಬುರಗಿ, ಬೀದರ್‌ನಲ್ಲಿ ಸಭೆ ಮಾಡಿದ್ದು, ಮುಂದಿನ ದಿನಗಳಲ್ಲಿ ವಿಜಯಪುರ, ಮೈಸೂರು, ಮಂಗಳೂರು ಸೇರಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಲಾಗುವುದು. ಹಿಂದುಳಿದ ಸಮಾಜದವರಲ್ಲಿ ಜಾಗÊತಿ ಮೂಡಿಸಿ ಸೆಪ್ಟೆಂಬರ್ ಒಳಗೆ ಎಲ್ಲ ಜಿಲ್ಲೆಗಳಲ್ಲಿ ಪದಾಽಕಾರಿಗಳ ನೇಮಕ ಮಾಡಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಪಕ್ಷ ಸ್ಪಽðಸಲಿದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಎ.ಎಚ್. ಪ್ರಶಾಂತ, ರಾಜ್ಯ ಸಂಚಾಲಕ ಶಾಂತಪ್ಪ ಕೋಡಿ, ರವಿ ಡೊಂಗರಗಾAವ್, ಮಲ್ಲಿಕಾರ್ಜುನ ಗೋಷಿ, ನಾಗರಾಜ ಬಿ.ನಾಟೇಕರ್ ಇತರರಿದ್ದರು.
"

ಸಿದ್ದರಾಮಯ್ಯ ಅಹಿಂದ ಹೆಸರಿನಲ್ಲಿ ಎಂಟು ವರ್ಷ ಸಿಎಂ ಆಗಿ ಹಿಂದುಳಿದ ಮತಗಳನ್ನು ಪಡೆದು ನ್ಯಾಯ ಕಲ್ಪಿಸದೆ ಹಿಂದುಳಿದವರಿಗೇ ಮೋಸ ಮಾಡಿದ್ದಾರೆ. ಅಹಿಂದ ವರ್ಗಕ್ಕೆ ಅನುದಾನ ನೀಡದೆ ಕೇವಲ ತಮ್ಮ ಸಮಾಜಕ್ಕೆ ನೂರಾರು ಕೋಟಿ ರೂ. ಮಂಜೂರು ಮಾಡಿದ್ದಾರೆ.| ಬಿ.ಕೆ.ಮೋಹನಕುಮಾರ್ ವಿಕಾಸಶೀಲ ಇನ್ಸಾನ್ ಪಾರ್ಟಿ ಅಧ್ಯಕ್ಷ