ಗುಬ್ಬಿ ಪಟ್ಟಣದ ಅದಿದೇವತೆ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವಕ್ಕೆ ಗದ್ದುಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಗುಬ್ಬಿ :ಪಟ್ಟಣದ ಅದಿದೇವತೆ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವಕ್ಕೆ ಗದ್ದುಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಪಟ್ಟಣದ ರಾಜಬೀದಿಗಳಲ್ಲಿ ವಿವಿಧ ಕಲಾ ತಂಡದೊಂದಿಗೆ ಅಮ್ಮನವರ ಮೆರವಣಿಗೆ ಸಾಗಿ ಹಳೇ ಸಂತೆ ಮೈದಾನದ ಗದ್ದುಗೆಗೆ ಆಗಮಿಸಿ ಮೂರು ದಿನದ ಜಾತ್ರೆಗೆ ಸ್ಥಾಪನೆ ವಾಡಲಾಯಿತು.
ಸೆ.2ರಂದು ಹದಿನೆಂಟು ಕೋಮಿನ ಆರತಿ ಸೇವೆ ನಂತರ ಬಾನಪೂಜೆ, ಟ ಸೇವೆ ನಡೆಯಲಿದೆ. ಸೆ.3ರಂದು ಅಮ್ಮನವರನ್ನು ಉತ್ಸವ ಮೂಲಕ ಮೆರವಣಿಗೆ ಹೊರಟು ಲಕ್ಕೇನಹಳ್ಳಿ ಸಮೀಪದ ಗ್ರಾಮದೇವತೆ ವನದಲ್ಲಿನ ಗದ್ದುಗೆಯಲ್ಲಿ ಅಮ್ಮನವರ ಸ್ಥಾಪಿಸಿ ಬೀಳ್ಕೊಡುವ ಮೂಲಕ ಜಾತ್ರೆ ಅಂತಿಮ ಹಂತಕ್ಕೆ ತಲುಪಲಿದೆ. ನಂತರ ಸೆ.4ರ ಸಂಜೆ 7.30ಕ್ಕೆ ಮರುಪೂಜೆ ಸಲ್ಲಿಸಿ ಜಾತ್ರೆ ಸಂಪನ್ನಗೊಳಿಸಲಾಗುವುದು.