ಗ್ರಾಮ ಆಡಳಿತಾಧಿಕಾರಿಗಳ ಮೇಲಿನ ಹಲ್ಲೆ ಖಂಡಿಸಿ, ಗ್ರಾಮ ಆಡಳಿತಾಧಿಕಾರಿಗಳ ಸಂದ ಪದಾಧಿಕಾರಿಗಳು ರಾಮದುರ್ಗ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಶಿವು ಗೊರವನಕೊಳ್ಳ, ರಂಗನಾಥ ದಾಸರ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ರಾಮದುರ್ಗ
ಬೆಂಗಳೂರು ದಣ ಜಿಲ್ಲೆ, ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ, ನಕಾಶೆಯ ದಾರಿ ಒತ್ತುವರಿ ಅಳತೆ ಕಾರ್ಯದಲ್ಲಿ ತೊಡಗಿರುವ ಗ್ರಾಮ ಆಡಳಿತ ಅಧಿಕಾರಿ ಹಡಗಲಿ ಹೊನ್ನಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ, ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಪದಾಧಿಕಾರಿಗಳು ತಹಸೀಲ್ದಾರ್ ಪ್ರಕಾಶ ಗಾಯಕವಾಡ ಮೂಲಕ ಕಂದಾಯ
ಇಲಾಖೆ ಮುಖ್ಯ ಕಾರ್ಯದರ್ಶಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕರ್ತವ್ಯ ನಿರತ ಗ್ರಾಮ ಆಡಳಿತಾಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ ಹೆಚ್ಚಾಗುತ್ತಿರುವುದು ವಿಷಾಧನೀಯ. ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಭದ್ರತೆ ನೀಡಬೇಕು. ಸರ್ಕಾರಿ ಜಮೀನುಗಳ ಒತ್ತುವರಿ ತಹಸೀಲ್ದಾರ್, ಉಪ ತಹಸೀಲ್ದಾರ್ ನೇತೃತ್ವ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ತೆರವುಗೊಳಿಸಲು ಸರ್ಕಾರ ಆದೇಶ ಹೊರಡಿಸಬೇಕು. ನೌಕರರ ರಣೆಗಾಗಿ ಸೂಕ್ತ ಕಾನೂನು ರೂಪಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಗ್ರಾಮ ಆಡಳಿತಾಧಿಕಾರಿ ಸಂದ ಅಧ್ಯ ಶಿವು ಗೊರವನಕೊಳ್ಳ, ಗೌರವಾಧ್ಯ ರಂಗನಾಥ ದಾಸರ, ಖಜಾಂಚಿ ನಾರಾಯಣ ಗುಂಜಿರಿ, ಪ್ರಧಾನ ಕಾರ್ಯದರ್ಶಿ ಅತ್ತಾ ಉಲ್ಲಾ ಖಾನ ಹೊಸಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, .ಪ್ರವಿಣ ಖಾನಾಪುರ, ಮಣಿ ಪ್ರಸಾದ, ವಿಠ್ಠಲ, ಹನಮಂತ ಬಂಡಾರಿ, ಸಿದ್ದು ಲಿಂಗದಾಳ, ಸವಿತಾ ಪಂಢರಿ, ಶೋಭಾ ಬೆಹರೆ, ಗೀತಾ ಬಾಗೇವಾಡಿ, ರೇಖಾ ಹುಲ್ಲನ್ನವರ, ಶಿವಲೀಲಾ ಗೊರವನಕೊಳ್ಳ, ಶಮ್ಶಾದ ಮುಲ್ಲಾ, ಹನಮಂತ ಬಂಡಾರಿ, ಸುನೀಲ ಪಾಟೀಲ, ಹನಮಂತ ಭಜಂತ್ರಿ, ಯಲ್ಲಪ್ಪ ವಿಭೂತಿ, ಸಂತೋಷ ಬೀಳಗಿಕರ, ಸಂಜು ಹಿರೇಮಠ ಇತರರಿದ್ದರು.