ಸಂಕೇಶ್ವರದ ಶಂಕರಾಚಾರ್ಯ ಮಠದಲ್ಲಿ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಜನ್ಮದಿನೋತ್ಸವ ಅಂಗವಾಗಿ ಪುಸ್ತಕ ಹಾಗೂ ಶಾಲಾ ಬ್ಯಾಗ್ ತುಲಾಭಾರ ನೆರವೇರಿಸಲಾಯಿತು. 
ರಾಜ್ಯ

ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಜನ್ಮದಿನೋತ್ಸವ

ವಿಜಯವಾಣಿ ಸುದ್ದಿಜಾಲ ಸಂಕೇಶ್ವರ
ಸಮಾಜಸೇವೆ ಮತ್ತು ಆಧ್ಯಾತ್ಮಿಕ ಸಮನ್ವಯವೇ ನಿಜವಾದ ಧರ್ಮ ಎಂಬ ಸಂದೇಶದನ್ವಯ ಪಟ್ಟಣದ ಐತಿಹಾಸಿಕ ಶ್ರೀ ಶಂಕರಾಚಾರ್ಯ ಮಠದಲ್ಲಿ ಪೀಠಾಧಿಪತಿ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಜನ್ಮದಿನೋತ್ಸವ ಆಚರಿಸಲಾಯಿತು.
ಜನ್ಮದಿನದ ಅಂಗವಾಗಿ ಭಕ್ತರು ಶಾಲಾ ಬ್ಯಾಗ್ ಹಾಗೂ ಪುಸ್ತಕಗಳ ತುಲಾಭಾರ ನಡೆಸಿದರು. ತುಲಾಭಾರದಲ್ಲಿ ಸಂಗ್ರಹವಾದ ಶಾಲಾ ಬ್ಯಾಗ್, ನೋಟ್ ಪುಸ್ತಕಗಳು ಹಾಗೂ ಇತರ ಶೈಕ್ಷಣಿಕ ಸಾಮಗ್ರಿಗಳನ್ನು ಪಟ್ಟಣದ 11 ಸರ್ಕಾರಿ ಶಾಲೆಗಳ 1,200 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಜನ್ಮದಿನದ ಪ್ರಯುಕ್ತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಜರುಗಿತು. ಶ್ರೀಮಠದ ಉತ್ತರಾಧಿಕಾರಿ ಶಂಕರ ಭಾರತಿ ಸ್ವಾಮೀಜಿ, ಗಜಾನನ ಕ್ವಳ್ಳಿ, ಸುನೀಲ ಪರ್ವತರಾವ, ಶಿವಾನಂದ ಮುಡಶಿ, ಅಮರ ನಲವಡೆ, ಶ್ರೀಕಾಂತ ಹತನೂರಿ, ಬಸನಗೌಡ ಪಾಟೀಲ, ಡಾ.ರಮೇಶ ದೊಡ್ಡಭಂಗಿ, ರೋಹನ ನೇಸರಿ, ಆನಂದ ಸಂಸುದ್ದಿ, ಚಿದಾನಂದ ಕರದನ್ನವರ, ಡಾ.ವಿಕಾಸ ಪಾಟೀಲ, ಶಂಕರರಾವ ಹೆಗಡೆ, ಡಾ.ಜಯಪ್ರಕಾಶ ಕರಜಗಿ, ಡಾ.ಶರ್ವಾನಿ ಬಸ್ತವಾಡಿ, ಡಾ.ನಾಗಭೂಷಣ ಚೌಗಲಾ, ಡಾ.ಶಶಿಕಾಂತ ಕೋರೆ, ಡಾ.ಪ್ರಶಾಂತ ಬಸ್ತವಾಡಿ, ಡಾ.ಪ್ರಜ್ವಲ ಸದಲಗಿ ಇತರರಿದ್ದರು.