ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಫಜಲಪುರ ತಾಲೂಕಿನ ಮಣ್ಣೂರಿನ ವೇದೇಶತೀರ್ಥ ಸಂಸತ ವಿದ್ಯಾಪಿಠದ ಕುಲಪತಿ ಪಂ.ಅನಂತಾಚಾರ್ಯ ಅಕಮಂಚಿ ಅವರಿಗೆ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತಿರ್ಥರು ಶ್ರೀ ವಿದ್ಯಾಧಿಶಾನುಗ್ರಹ ಪುರಸ್ಕಾರ ನೀಡಿ ಆಶೀರ್ವದಿಸಿದರು. ಪಂ.ಸತ್ಯಧ್ಯಾನಾಚಾರ್ಯ ಕಟ್ಟಿ ಇದ್ದರು. 
ರಾಜ್ಯ

ಪಂ.ಅಕಮಂಚಿಗೆ ವಿದ್ಯಾಧಿಶಾನುಗ್ರಹ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಪುರಸ್ಕಾರ ನೀಡಿ ಅನುಗ್ರಹಿಸಿದ ಶ್ರೀ ಸತ್ಯಾತ್ಮ ತೀರ್ಥರು
ಕಲಬುರಗಿ: ಅಫಜಲಪುರ ತಾಲೂಕಿನ ಮಣ್ಣೂರಲ್ಲಿರುವ ಶ್ರೀ ವೇದಶತೀರ್ಥ ಸಂಸತ ವಿದ್ಯಾಪಿಠದ ಕುಲಪತಿ ಪಂ.ಅನಂತಾಚಾರ್ಯ ಅಕಮಂಚಿ ಅವರಿಗೆ ರಾಜ್ಯ ಸಂಸತ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ಬೆಂಗಳೂರಿನ ದ್ವೆತ ವೇದಾಂತಾಧ್ಯಯನ ಸಂಶೋಧನಾ ಪ್ರತಿಷ್ಠಾನವೂ ಶ್ರೀ ವಿದ್ಯಾಧಿಶಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದೆ.
ಉತ್ತರಾದಿ ಮಠದ ಪರಂಪರೆಯಲ್ಲಿ ಆಗಿ ಹೋಗಿರುವ ಶ್ರೀ ವಿದ್ಯಾಧಿಶತೀರ್ಥರ ಹೆಸರಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಪಂ.ಅನಂತಾಚಾರ್ಯರು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಶ್ರೇಷ್ಠ ಪುರಸ್ಕಾರ ನೀಡಿ ಅನುಗ್ರಹಿಸಿದರು.
ಭೀಮಾ ತೀರದಲ್ಲಿ ಮಣ್ಣೂರು ಗ್ರಾಮವಿದ್ದು, ಇಲ್ಲಿ ಗುರುಕುಲ ಪರಂಪರೆಯಲ್ಲಿ ವಿದ್ಯಾಪಿಠ ನಡೆಸಿಕೊಂಡು ಹೊರಟಿರುವ ಅನಂತಾಚಾರ್ಯರು ಕಳೆದ 4 ದಶಕಕ್ಕೂ ಹೆಚ್ಚು ಕಾಲದಿಂದ ಸಂಸತ ಪಾಠ&ಪ್ರವಚನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇವರ ಶಿಷ್ಯಂದಿರುವ ದೇಶಾದ್ಯಂತ ಸಂಸತ ಪಾಠಶಾಲೆ ನಡೆಸಿಕೊಂಡು ಹೊರಟಿದ್ದಾರೆ.
ದ್ವೆತ ವೇದಾಂತಾಧ್ಯಯನ ಸಂಶೋಧನಾ ಪ್ರತಿಷ್ಠಾನದ ಅಧ್ಯ ಪಂ.ಸತ್ಯಧ್ಯಾನಾಚಾರ್ಯ ಕಟ್ಟಿ ಇತರರಿದ್ದರು.