ಹುಣಸಗಿ ಪಟ್ಟಣದ ಆರಾಧ್ಯ ದೈವ, ಇತಿಹಾಸ ಪ್ರಸಿದ್ಧ ಶ್ರೀ ನೀಲಕಂಠೇಶ್ವರ ಜಾತ್ರೆಯ ನಿಮಿತ್ಯ ಅಲಂಕೃತಗೊಂಡಿರುವುದು. 
ರಾಜ್ಯ

ಶ್ರೀ ನೀಲಕಂಠೇಶ್ವರ ಮಹಾರಾಜಕಿ ಜೈ

ಪ್ರಮುಖ ಮುಖ್ಯಾಂಶಗಳು

  • ಆರಾಧ್ಯ ದೈವ ಇತಿಹಾಸ ಪ್ರಸಿದ್ಧ ಶ್ರೀ ನೀಲಕಂಠೇಶ್ವರ
ಹುಣಸಗಿ: ಪಟ್ಟಣದ ಆರಾಧ್ಯ ದೈವ ಇತಿಹಾಸ ಪ್ರಸಿದ್ಧ ಶ್ರೀ ನೀಲಕಂಠೇಶ್ವರ ದೇವರ ಜಾತ್ರಾ ಮಹೋತ್ಸವ ಸೋಮವಾರ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು. ಬೆಳಗ್ಗೆ ಬಲಶೆಟ್ಟಿಹಾಳ ವಿರಕ್ತಮಠದ ಶ್ರೀ ಸಿದ್ಧಲಿಂಗಯ್ಯ ಸ್ವಾಮಿಗಳ ನೇತೃತ್ವದಲ್ಲಿ ಕಳಸದ ಗಂಗಾಸ್ನಾನ ಜರುಗಿತು. ಆ ಬಳಿಕ ಹಿರೇಹಳ್ಳದಿಂದ ದೇವಸ್ಥಾನವರೆಗೂ ಸುಮಂಗಲೆಯರು ಪೂರ್ಣ ಕುಂಭ ಕಳಶದೊಂದಿಗೆ ಮೆರವಣಿಗೆ ನಡೆಯಿತು.
ವಿವಿಧ ಕಲಾ ತಂಡಗಳ ಡೊಳ್ಳು ಕುಣಿತ ಆಕರ್ಷಿಕವಾಗಿತ್ತು. ಜಾತ್ರೆ ನಿಮಿತ್ತ ಸಪ್ತ ಭಜನೆ, ಬಿಲ್ವಾರ್ಚನೆ, ರುದ್ರಾಭಿಶೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ದೇವಸ್ಥಾನದ ಅರ್ಚಕರಾದ ವೀರೇಶಸ್ವಾಮಿ ಅವರ ನೇತೃತ್ವದಲ್ಲಿ ಜರುಗಿದವು.
ಸಾಯಂಕಾಲ ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ಮಲ್ಲಯ್ಯ ಗುಡಿವರೆಗೂ ಪಲ್ಲಕ್ಕಿ ಉತ್ಸವ ನಡೆಯಿತು. ಈ ಪಲ್ಲಕ್ಕಿ ಉತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ಜಾತ್ರೆಯಲ್ಲಿ ಪಟ್ಟಣದ ಹಿರಿಯರು, ಮಹಿಳೆಯರು, ಮಕ್ಕಳು ಪಾಲ್ಗೊಂಡು ದೇವರ ದರ್ಶನ ಪಡೆದರು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ದೇವಸ್ಥಾನವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಒಂದು ತಿಂಗಳಿನಿಂದ ನಡೆದುಕೊಂಡು ಬಂದಿರುವ ಹುಬ್ಬಳ್ಳಿಯ ಸಿದ್ಧಾರೂಢರ ಪುರಾಣ ಮಂಗಳ ಕಾರ್ಯಕ್ರಮ ಕೂಡ ನಡೆಯಿತು.