ನಿರಂತರ ಶ್ರಮದಿಂದ ಗೆಲುವು ನಿಶ್ಚಿತ Victory 
ರಾಜ್ಯ

ನಿರಂತರ ಶ್ರಮದಿಂದ ಗೆಲುವು ನಿಶ್ಚಿತ Victory

ಕೋಲಾರ ಡೆಸ್ಕ್
ಕೆಜಿಎಫ್​: ಗ್ರಾಮೀಣ ಯುವ ಪ್ರತಿಭೆಗಳು ಸಮಾಜದ ಮುಖ್ಯವಾಹಿನಿಗೆ ಕ್ರೀಡಾಕೂಟಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಆರ್​ಕೆ ಫೌಂಡೇಶನ್​ ಸಂಸ್ಥಾಪಕ ಅಧ್ಯಕ್ಷ ವಿ.ಮೋಹನ್​ಕೃಷ್ಣ ತಿಳಿಸಿದರು.Victory
ತಾಲೂಕಿನ ಉರಿಗಾಂಪೇಟೆಯಲ್ಲಿ ಆಯೋಜಿಸಿದ್ದ ಮಿನಿ ಐಪಿಎಲ್​ ಸೀಸನ್​ ಒನ್​ ರೋಕೋ ಟ್ರೋಫಿ ಕ್ರಿಕೆಟ್​ ಟೂರ್ನಮೆಂಟ್​ನಲ್ಲಿ ಮಾತನಾಡಿ, ಯುವ ಪ್ರತಿಭೆಗಳು ನಿರಂತರವಾಗಿ ಶ್ರಮಿಸಿದರೆ ಸಾಧಕರಾಗಬಹುದು. ನಿರಂತರ ಶ್ರಮದಿಂದ ಗೆಲುವು ನಿಶ್ಚಿತ. ನಿರಂತರವಾಗಿ ಶ್ರಮವಹಿಸುತ್ತಿದ್ದರೆ, ಯಾವುದೂ ಅಸಾಧ್ಯವಲ್ಲ. ವೃತ್ತಿಪರ ಕ್ರಿಕೆಟ್​ ದೈಹಿಕವಾಗಿ ಕಠಿಣ ಮತ್ತು ಸ್ಪರ್ಧಾತ್ಮಕ ಕ್ರೀಡೆಯಾಗಿದೆ. ಇದರಲ್ಲಿ ಕೆಲವೇ ಪ್ರತಿಭಾನ್ವಿತರು ಸಾಧಕರಾಗುತ್ತಾರೆ ಎಂದರು.