ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ಕೃಷ್ಣಪ್ಪ ಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಬೂತ್​ಮಟ್ಟದ ಹಾಗೂ ಎಸ್​ಐಆರ್​ ಕಾರ್ಯಗಾರದಲ್ಲಿ ಗ್ರಾಮಾಂತರ ಬಿಜೆಪಿ ಘಟಕದ ಕಾರ್ಯದರ್ಶಿ ಪ್ರತಾಪ್​ ಮಾತನಾಡಿದರು. ದೇವನಹಳ್ಳಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಅಂಬರೀಶ್​ಗೌಡ, ತಾಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಉಪಾಧ್ಯಕ್ಷ ವಾಸುದೇವ್​, ಹಿರೇಮುದೇನಹಳ್ಳಿ ಕಾಂತರಾಜು, ಬಿಜೆಪಿ ಮುಖಂಡರಾದ ಕೇಬಲ್​ ಮಂಜು, ಮಲ್ಲೇಶ್​ ಎನ್​.ಎನ್​.ನಾಗರಾಜ್​, ಆರ್​.ಜಿ.ಪಿ.ಗಂಗಾಧರ್​ ಇದ್ದರು.  
ರಾಜ್ಯ

ಬೂತ್​ಮಟ್ಟದಲ್ಲಿ ಗೆಲುವು ಅತ್ಯವಶ್ಯ / TUBAGERE

ತೂಬಗೆರೆ : ಯಾವುದೇ ಒಂದು ರಾಜಕೀಯ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಾದಲ್ಲಿ ಬೂತ್​ಮಟ್ಟದಲ್ಲಿ ಸಂಘಟನೆಯಾಗಬೇಕು. ಬೂತ್​ನಲ್ಲಿ ಗೆದ್ದರೆ ಮಾತ್ರ ಪಕ್ಷ ಗೆಲ್ಲಲು ಸಾಧ್ಯ ಎಂದು ಬೆಂಗಳೂರು ಗ್ರಾಮಾಂತರ ಬಿಜೆಪಿ ಘಟಕದ ಕಾರ್ಯದರ್ಶಿ ಹಾಗೂ ವಕೀಲ ಪ್ರತಾಪ್​ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ಕೃಷ್ಣಪ್ಪ ಮನೆಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಬೂತ್​ಮಟ್ಟದ ಹಾಗೂ ಎಸ್​ಐಆರ್​ ಕಾರ್ಯಾಗಾರದಲ್ಲಿ ಮಾತನಾಡಿದರು. ಕೇಂದ್ರವು ಮತದಾರರ ಪಟ್ಟಿ ಪರಿಷ್ಕರಣೆ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಬೂತ್​ಮಟ್ಟದ ಬಿ.ಎಲ್​.ಎ-2 ಕಾರ್ಯಕರ್ತರು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಹೊರಗಿನಿಂದ ಬಂದವರು ಎರಡ್ಮೂರು ಕಡೆ ಮತದಾನದ ಹಕ್ಕು ಹೊಂದಿರುವವರನ್ನು ಪತ್ತೆ ಹಚ್ಚಬೇಕು. ಈಗಾಗಲೇ ಬಿ.ಎಲ್​.ಎ- 2 ಕಾರ್ಯಕರ್ತರಿಗೆ ತಲುಪಿಅನಧಿಕೃತ ಹೆಸರು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ತೂಬಗೆರೆ ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಶೀಘ್ರತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಬರಲಿದೆ. ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಬೇಕು ಹಾಗೂ ಪ್ರತಿ ಗ್ರಾಮಕ್ಕೆ ತೆರಳಿ ಯುವಕರನ್ನು ಪ್ರೋತ್ಸಾಹಿಸಿ ಪಕ್ಷದಲ್ಲಿ ಕೆಲಸ ಮಾಡುವಂತೆ ಹೇಳಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ ಎಂದರು.