ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ 
ರಾಜ್ಯ

ವಿಭೂತಿ, ನಾಮದಲ್ಲೇ 100 ದಿನ ಪೂರ್ಣ

ಬೆಂಗಳೂರು: ಆಧುನಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದಾರೆ. ದೇವಸ್ಥಾನ, ವಿಭೂತಿ, ನಾಮದಲ್ಲೇ 100 ದಿನ ಕಳೆದಿರುವುದೇ ಸಾಧನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳಪೆ ಸಾಧನೆ ಮೂಲಕ 100 ದಿನ ಪೂರೈಸಿದೆ. ಜನರಿಗೆ ಸಿಕ್ಕಿದ್ದು ಕೇವಲ ಮೂರು ದಿನ. ಇದೊಂದು ಯು ಟರ್ನ್ ಸರ್ಕಾರ ಎಂದು ಟೀಕಿಸಿದರು.
ನೂರು ದಿನದ ಗೊಂದಲ ನಿವಾರಣೆಗೆ ಡಿ.ಕೆ.ಶಿವಕುಮಾರ್, ದೆಹಲಿ ಯಾತ್ರೆ, ರಿಯಲ್ ಎಸ್ಟೇಟ್ ದಂಧೆಗಾಗಿ ಲಾಲ್ಬಾಗ್, ಸ್ಯಾಂಕಿ ಟ್ಯಾಂಕ್, ಹೆಬ್ಬಾಳ ಕೆರೆ, ಬಿಡದಿ ಟೌನ್‌ಶಿಪ್‌ನಲ್ಲಿ 9 ಸಾವಿರ ಎಕರೆ, ಆನೇಕಲ್ನಲ್ಲಿ ಕೆಐಎಡಿಬಿ ಹೆಸರಲ್ಲಿ 3 ಸಾವಿರ ಎಕರೆ ಮುಂದಾಗಿದ್ದು, ಇವರ ಸಾಧನೆಗಳು. ರಾಜ್ಯದಲ್ಲಿ ಭೀಕರ ಬರ ಇದ್ದರೂ 4 ತಿಂಗಳಲ್ಲಿ ಒಬ್ಬರಿಗೂ ಪರಿಹಾರ
ನೀಡಲಿಲ್ಲ. ಈವರೆಗೆ ಬರಕ್ಕೆ ಹಣ ಬಿಡುಗಡೆ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ 2500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಸ್ತೆ ಗುಂಡಿಗೆ ಜನ ಬಿದ್ದು ಸತ್ತರು. ಒಂದೊಂದು ಗುಂಡಿ ಮುಚ್ಚಲು 1 ಲಕ್ಷ ರೂ. ಪಡೆದು 25 ಸಾವಿರವೂ ಖರ್ಚು ಮಾಡುತ್ತಿಲ್ಲ ಎಂದು ಆರ್.ಅಶೋಕ್ ಆರೋಪಿಸಿದರು.