ದೊಡ್ಡಬಳ್ಳಾಪುರ ನಗರಸಭೆ ನೂತನ ಉಪಾಧ್ಯಕ್ಷರಾಗಿ ಬಂತಿ ವೆಂಕಟೇಶ ಆಯ್ಕೆಯಾದರು. ಸಂಸದ ಡಾ.ಕೆ. ಸುಧಾಕರ್​, ಶಾಸಕ ಧೀರಜ್​ ಮುನಿರಾಜು, ನಗರಸಭೆ ಅಧ್ಯಕ್ಷೆ ಸುಮಿತ್ರಾ, ಸದಸ್ಯರು, ಜೆಡಿಎಸ್​ ಮುಖಂಡರು ಇದ್ದರು. 
ರಾಜ್ಯ

ದೊಡ್ಡಬಳ್ಳಾಪುರ ನಗರಸಭೆಗೆ ವೆಂಕಟೇಶ್​ ಉಪಾಧ್ಯಕ್ಷ / DODABALLAPUR

ದೊಡ್ಡಬಳ್ಳಾಪುರ : ನಗರಸಭೆ ಉಪಾಧ್ಯಕ್ಷರಾಗಿ ಬಿಜೆಪಿ ಸದಸ್ಯ ವೆಂಕಟೇಶ್​(ಬಂತಿ) ಅವಿರೋಧ ಆಯ್ಕೆಯಾಗಿದ್ದಾರೆ. ಮಲ್ಲೇಶ್​ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು,
ಬಿಜೆಪಿಯಿಂದ ವೆಂಕಟೇಶ್​ (ಬಂತಿ) ಉಪಾಧ್ಯಕ್ಷ ಸ್ಥಾನದ ಕಣದಲ್ಲಿದ್ದರು, 31 ಸದಸ್ಯರ ಬಲವಿರುವ ನಗರಸಭೆಯಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ವೆಂಕಟೇಶ್​ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿಯಾಗಿ ಟಿ.ಆರ್​ ಮಂಜುನಾಥ ಆಯ್ಕೆ ಘೋಷಿಸಿದರು.
ಶಾಸಕ ಧೀರಜ್​ ಮುನಿರಾಜು ಮಾತನಾಡಿ, ಎನ್​ಡಿಎ ಮೈತ್ರಿಯಂತೆ ಮುಂದಿನ ದಿನಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್​ಗೆ ಬಿಟ್ಟುಕೊಡಲಾಗುವುದು. ಪಕ್ಷದ ಸದಸ್ಯರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರದ ಮೂಲಭೂತಸೌಕರ್ಯ ಸೇರಿದಂತೆ ಜ್ವಲಂತ ಸಮಸ್ಯೆ ಬಗೆಹರಿಸಲು ಶ್ರಮಿಸಲಿ ಎಂದರು.
ಕಣದಿಂದ ಹಿಂದೆ ಸರಿದ ಕಾಂಗ್ರೆಸ್​ : ನಗರಸಭೆಯಲ್ಲಿ 9 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್​ ಇದೇ ಮೊದಲ ಬಾರಿಗೆ ಸ್ಪರ್ಧಾ ಕಣದಿಂದಲೇ ಹಿಂದೆ ಸರಿಯಿತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಗಳಲ್ಲಿ ಪಕ್ಷೇತರರು ಬೆಂಬಲದೊಂದಿಗೆ ಸ್ಪರ್ಧೆಗೆ ಇಳಿದಿತ್ತು. ಈ ಬಾರಿ ಕಣದಿಂದ ಹಿಂದೆ ಸರಿದಿರುವುದು ಆಶ್ಚರ್ಯ ಮೂಡಿಸಿದೆ.