ವೇಮಗಲ್ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ರಥೋತ್ಸವ ಅದ್ದೂರಿ
ವೇಮಗಲ್: ಕೋಲಾರ ತಾಲೂಕು ವೇಮಗಲ್ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ಬ್ರಹ್ಮರಥೋತ್ಸವವು ಭಾನುವಾರ ವಿಜೃಂಭಣೆಯಿಂದ ನೆರವೇರಿತು. Festival
ರಥೋತ್ಸವ ಅಂಗವಾಗಿ ಬೆಳಗ್ಗೆ ದೇವರಿಗೆ ವಿಶೇಷ ಪೂಜೆ, ಪುಷ್ಪಾಲಂಕಾರ ಮಾಡಲಾಗಿತ್ತು. ನೂರಾರು ಭಕ್ತರ ಹಷೋರ್ದ್ಘಾರ ಮತ್ತು ಜೈಕಾರಗಳ ನಡುವೆ ಶಾಸೊಕ್ತವಾಗಿ ನಡೆದ ಈ ರಥೋತ್ಸವವು ಆಧ್ಯಾತ್ಮಿಕ ಭಕ್ತಿಯ ಪರಾಕಾಷ್ಠೆ ಮೆರೆಯಿತು.
ರಥೋತ್ಸವ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ದವನ ಮತ್ತು ಬಾಳೆಹಣ್ಣು ರಥಕ್ಕೆ ಅರ್ಪಿಸಿ ಭಕ್ತಿ ಮೆರೆದರು. ಸೋಮೇಶ್ವರ ದೇವಾಲಯದ ಬಳಿ ವೀರಶೈವ ಸಂ ಹಾಗೂ ಪಟ್ಟಣದ ಗಂಗಾಮತಸ್ಥರಿಂದ ಹಳೆಯ ಸಂತೆ ಬೀದಿ ಬಳಿ ಪಾನಕ, ಹೆಸರುಬೇಳೆ ವಿತರಣೆ ಮಾಡಿದರೆ, ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಬಳಿ ಶ್ರೀರಾಮ ಕೋಟಿ ಭಕ್ತ ಮಂಡಳಿಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ರಥೋತ್ಸವದ ಪ್ರಮುಖ ಆಕರ್ಷಣೆಯಾಗಿ, ಸರಿಯಾಗಿ ರಥವನ್ನು ಎಳೆಯುವ ಮುಹೂರ್ತದ ಸಮಯದಲ್ಲಿ ಆಕಾಶದಲ್ಲಿ ಗರುಡ ಪಯು ಕಾಣಿಸಿಕೊಂಡು ರಥದ ಸುತ್ತ ಪ್ರದಣೆ ಹಾಕಿದ್ದು ಭಕ್ತರಲ್ಲಿ ರೋಮಾಂಚನ ಉಂಟುಮಾಡಿತು.
ಮಾಜಿ ಸಚಿವರಾದ ಆರ್. ವರ್ತೂರ್ ಪ್ರಕಾಶ್, ಪಟ್ಟಣ ಪಂಚಾಯಿತಿ ಉಪಾಧ್ಯ ಸಿ. ಎಸ್.ವೆಂಕಟೇಶ್, ಮುಖ್ಯ ಅಧಿಕಾರಿ ಎಸ್.ಎಂ.ವೆಂಕಟೇಶ್, ಸಮಾಜ ಸೇವಕಿ ಕುರ್ಕಿ ರಾಜೇಶ್ವರಿ, ಪ್ರಾಧಿಕಾರದ ಸದಸ್ಯ ಬಿ. ನಾಗರಾಜ್, ಸದಸ್ಯರಾದ ವಿ.ಎಂ ನಾಗೇಶ್, ಸುಜಾತಾ ಮುನಿರಾಜ್, ಶಿಲ್ಪಾ ಶಿವಶಂಕರ್, ರಾಮು, ಎಸ್ಎಫ್ಎಸ್ಸಿ ಸದಸ್ಯ ರವಿಕುಮಾರ್, ಮುಖಂಡರಾದ ಮಂಜುನಾಥ್, ವೆಂಕಟೇಶ್, ದೇವಾಲಯ ಅಭಿವೃದ್ಧಿ ಸೇವಾ ಸಮಿತಿ ಸದಸ್ಯರು ಇದ್ದರು.
ವೇಮಗಲ್ನಲ್ಲಿ ಭಾನುವಾರ ಶ್ರೀ ಲಕ್ಷಿ$್ಮನಾರಾಯಣಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.