2.91 ಲಕ್ಷ ರೂ.ಗೆ ವೇಮಗಲ್​ ಸಂತೆ ಹರಾಜು 
ರಾಜ್ಯ

2.91 ಲಕ್ಷ ರೂ.ಗೆ ವೇಮಗಲ್​ ಸಂತೆ ಹರಾಜು

ವೇಮಗಲ್​ : ವೇಮಗಲ್​-&ಕುರುಗಲ್​ ಪಟ್ಟಣ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷೆ ಅನುಷಾ ಅಧ್ಯಕ್ಷತೆಯಲ್ಲಿ ವಿವಿಧ ಸಾರ್ವಜನಿಕ ಸೌಲಭ್ಯಗಳ ಬಹಿರಂಗ ಹರಾಜು ಪ್ರಕ್ರಿಯೆ ಮಂಗಳವಾರ ನಡೆಯಿತು. lakh
ಕೋಲಾರ ತಾಲೂಕು ವೇಮಗಲ್​&ಕುರುಗಲ್​ ಪಟ್ಟಣ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಬಹಿರಂಗ ಹರಾಜಿನಲ್ಲಿ ಸಂತೆ ಹರಾಜಿಗೆ 11 ಮಂದಿ 50,000 ಸಾವಿರ ರೂ. ಠೇವಣಿ ಕಟ್ಟಿದ್ದರು. ಇದರಲ್ಲಿ ಅಂತಿಮವಾಗಿ ಕುರುಗಲ್​ ರಾಘವೇಂದ್ರ ಅವರು 2.91 ಲಕ್ಷ ರೂ.ಗೆ ಸಂತೆ ತಮ್ಮದಾಗಿಸಿಕೊಂಡರು. ದಿನವಹಿ ಸುಂಕ ವಸೂಲಿಗೂ 50,000 ಸಾವಿರ ರೂ. ಠೇವಣಿ ನಿಗದಿ ಮಾಡಲಾಗಿದ್ದು, ಇದರಲ್ಲೂ ರಾಘವೇಂದ್ರ ಹರಾಜು ಗಿಟ್ಟಿಸಿಕೊಂಡರು.
ವೇಮಗಲ್​&ಕುರುಗಲ್​ನ 2 ಶೌಚಗೃಹಗಳನ್ನು ಹರಾಜಿಗಿಡಲಾಗಿತ್ತು ಆದರೆ ಯಾರೂ ಆಸಕ್ತಿ ತೋರಲಿಲ್ಲ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ 14 ಶುದ್ಧ ಕುಡಿಯುವ ನೀರಿನ ಘಟಕಗಳನ್ನು 2 ವರ್ಷದ ಅವಧಿಗೆ ಹರಾಜು ಮಾಡಲಾಯಿತು. ಪ್ರತಿ ತಿಂಗಳಿಗೆ 14 ನೀರಿನ ಘಟಕಕ್ಕೆ 53 ಸಾವಿರದಂತೆ ಚಿಂತಾಮಣಿಯ ನಂದೀಶ್​ ಹರಾಜು ಪಡೆದುಕೊಂಡರು.
ಹುಣಸೆಮರದ ಫಸಲನ್ನು ವೇಮಗಲ್​ನ ಗೋವಿಂದರಾಜು ಹರಾಜಿನಲ್ಲಿ 5,000 ರೂ.ಗೆ ಪಡೆದುಕೊಂರೆ, ಪಪಂ ಮೋಟಾರ್​, ಪೈಪ್​, ಕೇಬಲ್​ ಇತರ ವಸ್ತುಗಳನ್ನು ರಾಮಸ್ವಾಮಿ 1.66 ಲಕ್ಷ ರೂ.ಗೆ ತಮ್ಮದಾಗಿಸಿಕೊಂಡರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹಿಸಿದ್ದ ಕಸದಲ್ಲಿ ವಿಂಗಡಣೆ ಮಾಡಿದ್ದ ಪ್ಲಾಸ್ಟಿಕ್​ ಕಬ್ಬಿಣ, ಇತರೆ ವಸ್ತುಗಳನ್ನು 20 ಸಾವಿರ ರೂ.ಗೆ ವೇಮಗಲ್​ ವಜೀರ್​ ಹರಾಜಿನಲ್ಲಿ ಪಡೆದರು.
ಉಪಾಧ್ಯಕ್ಷ ಸಿ.ಎಸ್​.ವೆಂಕಟೇಶ್​ ಅವರು ಹರಾಜು ಪ್ರಕ್ರಿಯೆ ನಡೆಸಿಕೊಟ್ಟರೆ, ಮುಖ್ಯಅಧಿಕಾರಿ ಎಸ್​.ಎಂ.ವೆಂಕಟೇಶ್​ ಪ್ಲಾಸ್ಟಿಕ್​ ಬಳಕೆಯ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಕುಡಿಯುವ ನೀರಿನ ಘಟಕಗಳ ಗುಣಮಟ್ಟವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.