census ವೇಮಗಲ್ನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಜನಗಣತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಂ.ವೆಂಕಟೇಶ್, ಸ್ಥಾಯಿ ಸಮಿತಿ ಅಧ್ಯ ವಿ.ಎಂ. ನಾಗೇಶ್ ಇದ್ದರು.
ವೇಮಗಲ್: ಜಿಲ್ಲೆಯ ಜನಗಣತಿ ಕಾರ್ಯವು ಅತ್ಯಂತ ಮಹತ್ವದ ಟ್ಟದಲ್ಲಿದ್ದು, ಈ ನಿಟ್ಟಿನಲ್ಲಿ ವೇಮಗಲ್& ಕುರುಗಲ್ ಪಟ್ಟಣ ಪಂಚಾಯಿತಿಯು ಇಡೀ ಕೋಲಾರ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಕಾಯ್ದುಕೊಳ್ಳುವ ಮೂಲಕ ಮಾದರಿಯಾಗಿದೆ ಎಂದು ಜಿಲ್ಲಾ ಜನಗಣತಿ ಅಧಿಕಾರಿಹಾಗೂ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ ಹರ್ಷ ವ್ಯಕ್ತಪಡಿಸಿದರು.
ವೇಮಗಲ್ನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಗಣತಿ&2027ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಜನಗಣತಿ ಪ್ರಗತಿಯಲ್ಲಿ ಇಲ್ಲಿನ ಅಂಕಿ&ಅಂಶಗಳನ್ನು ಪರಿಶೀಲಿಸಿದಾಗ ಯಾವುದೇ ತಪ್ಪುಗಳಿಲ್ಲದೆ ನಿಖರವಾಗಿರುವುದು ಕಂಡುಬಂದಿದೆ. ತರಬೇತಿ ಅವಧಿಯಲ್ಲೂ ಸಹ ಇಲ್ಲಿನ ತಂಡವು ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡಿದ್ದು, ಈಗ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಶ್ಲಾಸಿದರು. ಈ ಜನಗಣತಿಯಲ್ಲಿ ಗಣತಿದಾರರು ನೀಡುವ ಪ್ರತಿಯೊಂದು ಮಾಹಿತಿಯೂ ದೇಶದ ಪ್ರಗತಿಗೆ census ಪೂರಕವಾಗಲಿದೆ ಎಂದರು.
ಕೆಲಸದ ವೇಳೆ ತಾಂತ್ರಿಕ ಸಮಸ್ಯೆ ಎದುರಾದರೆ ತಣವೇ ತಾಂತ್ರಿಕ ಸಿಬ್ಬಂದಿ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.
ಗಣತಿದಾರರ ಆರೋಗ್ಯದ ದೃಷ್ಟಿಯಿಂದ ಕ್ಯಾಪ್ಗಳನ್ನು ವಿತರಿಸಲಾಯಿತು. ತಾಲೂಕು ವೈದ್ಯಾಧಿಕಾರಿ ನಾರಾಯಣಸ್ವಾಮಿ ಅವರು ಬಿಸಿಲಿನಿಂದ ಉಂಟಾಗುವ ರ್ನಿಜಲೀಕರಣ ತಡೆಗಟ್ಟಲು ಎಲ್ಲ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಒ.ಆರ್.ಎಸ್ ಪ್ಯಾಕೆಟ್ಗಳನ್ನು ವಿತರಿಸಿ, ಆರೋಗ್ಯದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಿದರು.
ವಿವಿಧ ಇಲಾಖೆಯ ಅಧಿಕಾರಿಗಳು, ಗಣತಿದಾರರು, ಮೇಲ್ವಿಚಾರಕರು ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.