ಹಸುಗಳನ್ನು ಟಾಟಾ ಎಸ್ಸಿಯಲ್ಲಿ ತುಂಬಿರುವುದು. cows
ಶ್ರೀನಿವಾಸಪುರ: ಪಟ್ಟಣದ ಹೊರವಲಯದಲ್ಲಿ ಗೋವುಗಳನ್ನು ತುಂಬಿಕೊಂಡು cows ಸಾಗುತ್ತಿದ್ದ ಟಾಟಾ ಎಸ್ಸಿ ಅಡ್ಡಗಟ್ಟಿದ ಪೊಲೀಸರು ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಟ್ಟಣ ಹೊರವಲಯದ ಮುಳಬಾಗಿಲು ರಸ್ತೆ ಮಾರ್ಗವಾಗಿ ಬರುತ್ತಿದ್ದ ಟಾಟಾ ಎಸ್ಸಿ ವಾಹನದಲ್ಲಿ 5 ಕರು ಮತ್ತು ಎತ್ತುಗಳನ್ನು ಸಾಗಿಸಲಾಗುತ್ತಿತ್ತು. ಬಾರ್ ಸಮೀಪ ವಾಹನವನ್ನು ನಿಲ್ಲಿಸಿ ಮದ್ಯಪಾನಕ್ಕೆ ತೆರಳಿದ ಸಂದರ್ಭದಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಚಾಲಕನ ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದು, ತನಿಖೇ ಕೈಗೊಂಡಿದ್ದಾರೆ.