ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಒಂದುಕಾಲಕ್ಕೆ ರಾಜ್ಯದ 224ಶಾಸಕರಲ್ಲಿಕನಿಷ್ಟ 100ಶಾಸಕರುವೀರಶೈವ ಲಿಂಗಾಯತರು ಇರುತ್ತಿದ್ದರು.ಆದರೆಈಗ 50ಕ್ಕಿಂತಕಡಿಮೆಯಾಗಿದೆ.ಸಮುದಾಯದಲ್ಲಿನಒಗ್ಗಟ್ಟಿನ ಕೊರತೆಯಿಂದ ಸಮಾಜದಶಕ್ತಿ ಕುಂದುತ್ತಿದೆ ಎಂದು ಮಾಜಿಸಚಿವ ಮುರುಗೇಶ ನಿರಾಣಿ ಅಸಮಾಧಾನಹೊರ ಹಾಕಿದ್ದಾರೆ.
ಅರಮನೆಮೈದಾನದದಲ್ಲಿ ಇಂಟರ್‌ನ್ಯಾಷನಲ್ಲಿಂಗಾಯತ್ ಯೂತ್ ಫೋರಂ (ಐಲೈಫ್)ಹಮ್ಮಿಕೊಂಡಿದ್ದ4ದಿನಗಳ ವೀರಶೈವ ಲಿಂಗಾಯತ ಬ್ಯುಸಿನೆಸ್ಕಾನ್‌ಕ್ಲೇವ್‌ನ ಸಮಾರೋಪಸಮಾರಂಭದಲ್ಲಿ ಮಾತನಾಡಿದರು.
ಬೀದರ್‌ನಿಂದಚಾಮರಾಜನಗರದವರೆಗೆ ಎಲ್ಲ ಸಮುದಾಯಕ್ಕೆಅನ್ನ,ಅಕ್ಷರನೀಡುತ್ತಿರುವುದು ವೀರಶೈವ ಸಮಾಜದಮಠಗಳು.ವೀರಶೈವಸಮಾಜಕ್ಕೆ ಬೇರೆಲ್ಲಾ ಸಮಾಜಕ್ಕಿಂತಹೆಚ್ಚಿನ ಶಕ್ತಿ ಇದೆ.ನಮ್ಮಹಿರಿಯರ ಆದರ್ಶವನ್ನು ಅಳವಡಿಸಿಕೊಂಡು,ಸರ್ಕಾರದಕೈಗಾರಿಕಾ ನೀತಿಯನ್ನು ಸರಿಯಾಗಿಅರ್ಥಮಾಡಿಕೊಂಡು,ಇರುವಸೌಲಭ್ಯವನ್ನು ಬಳಸಿಕೊಂಡುಹೆಚ್ಚೆಚ್ಚು ಸಮುದಾಯದ ಯುವಕರುಉದ್ಯಮಗಳನ್ನು ಆರಂಭಿಸಬೇಕು.ಕೇವಲ25ವರ್ಷಗಳಹಿಂದೆ 10ಲಕ್ಷಬಂಡವಾಳದೊಂದಿಗೆ ಆರಂಭವಾದ ನಿರಾಣಿಗ್ರೂಪ್ ಇಂದು 12ಸಾವಿರಕೋಟಿ ವಹಿವಾಟು ನಡೆಸುವ ಮೂಲಕ 72ಸಾವಿರಜನರಿಗೆ ಉದ್ಯೋಗ ನೀಡಿದೆ. ಐಲೈಫ್ ಸಂಸ್ಥೆ ಸಮುದಾಯದವರಿಗೆ ಈಕಾನ್‌ಕ್ಲೇವ್ ಮೂಲಕ ಉತ್ತಮ ವೇದಿಕೆಕಲ್ಪಿಸಿಕೊಟ್ಟಿದ್ದು,ಮುಂದಿನದಿನಗಳಲ್ಲಿ ಸಮುದಾಯದ ವಿದ್ಯಾವಂತಯುವಕರಿಗೆ ಕಾರ್ಯಾಗಾರವನ್ನುಮಾಡಿ ಮಾರ್ಗದರ್ಶನ ಮಾಡುವ ಕೆಲಸಮಾಡಲಿ ಎಂದು ನಿರಾಣಿ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿಶಿವಮೊಗ್ಗದ ಬಸವತತ್ವ ಪೀಠದ ಡಾ.ಬಸವಮರುಳಸಿದ್ದ ಸ್ವಾಮೀಜಿ,ನೆಲಮಂಗಲದಪವಾಡ ಬಸವಣ್ಣದೇವರ ಮಠದ ಶ್ರೀಸಿದ್ಧಲಿಂಗಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಮಾಜಿಸಚಿವೆ ರಾಣಿ ಸತೀಶ್,ಎಂಎಲ್‌ಸಿಕೆ.ಎಸ್.ನವೀನ್,ಉದ್ಯಮಿಜಯಂತ್ ಹುಂಬರವಾಡಿ,ಡಿ.ಎಸ್.ಮ್ಯಾಕ್ಸ್ಸಿಇಓ ಡಾ.ಎಸ್.ಪಿ.ದಯಾನಂದ,ಪ್ರಭುದೇವಚಿಗಟೇರಿ,ಐಲ್ೈಅಧ್ಯಕ್ಷ ಸಂತೋಷ್ ಕೆಂಚಾಂಬ,ಸದಸ್ಯರಾದಸತೀಶ್ ಮೂಡಿ,ಪ್ರತಾಪ್ಆರಾಧ್ಯ ಮತ್ತಿತರರಿದ್ದರು.
ವೀರಶೈವ ಲಿಂಗಾಯತ ಸಮುದಾಯದಲ್ಲಿ 100ಕ್ಕೂ ಹೆಚ್ಚು ಕಸುಬುಗಳನ್ನು ಮಾಡುವ ಉಪ ಪಂಗಡಗಳಿವೆ. ಆ ಎಲ್ಲರನ್ನು ಒಂದೇ ವೇದಿಕೆಗೆ ಕರೆತರುವ ಅಗತ್ಯವಿದೆ. ಲಿಂಗಾಯತರೆಂದರೆ ಪರಿಶ್ರಮಿಗಳು, ಪ್ರಾಮಾಣಿಕರು, ನಿಷ್ಠಾವಂತರು ಎಂಬ ಭಾವನೆ ಸಮಾಜದಲ್ಲಿದೆ. ಅದನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಸಮುದಾಯದ ಮೇಲಿದೆ.