ಹುನುಕುಂದ ಗ್ರಾಮದಲ್ಲಿ ವೀರಗಲ್ಲು ಪಾರ್ಕ್ Veeragallu Park
- ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ
- ದೀಪ, ನೀರಿನ ವ್ಯವಸ್ಥೆಗೆ ಸೂಚನೆ
ಬಂಗಾರಪೇಟೆ: ಕೋಲಾರ ಜಿಲ್ಲೆಗೆ ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆ ಇದ್ದು, ಇದಕ್ಕೆ ಪೂರಕವಾಗಿ ಹಲವು ರೋಚಕ ಕುರುಹುಗಳಿವೆ. ಪುರಾತನ ಕಾಲದಲ್ಲಿ ಕದನದಲ್ಲಿ ಹೋರಾಡಿ ಮಡಿದ ವೀರ ಯೋಧರ ಸಾಹಸಗಾಥೆ ನೆನಪಿಸುವ ವೀರಗಲ್ಲು ನೂರಾರಿದ್ದು, ಅವುಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ಮುಂದಾದ ಜಿಲ್ಲಾಡಳಿತ ತಾಲೂಕಿನ ಹುನಕುಂದ ಗ್ರಾಮದಲ್ಲಿ ವೀರಗಲ್ಲು ಪಾರ್ಕ್ ನಿರ್ಮಿಸಿ, ಇತಿಹಾಸ ಸಂಗ್ರಹಣೆಗೆ ಹೆಜ್ಜೆ ಇರಿಸಿದೆ.Veeragallu Park
ಹತ್ತಾರು ವೀರ ಯೋಧರ ನೆನಪಿನಲ್ಲಿ ನಿಮಾರ್ಣವಾದ ಅಪರೂಪದ ಪಾರ್ಕ್ ಇದಾಗಿದ್ದು, ಬಗೆ ಬಗೆಯ ವೀರಗಲ್ಲುಗಳು ಹಲವು ಸಂಸ್ಥಾನಗಳ ಮತ್ತು ರಾಜ ಮನೆತನಗಳ ಇತಿಹಾಸ ನೆನಪಿಸುತ್ತದೆ. ಜಿಲ್ಲೆಯಲ್ಲಿ ಚೋಳರು, ಗಂಗರು, ಚಾಲುಕ್ಯರು ಆಡಳಿತ ನಡೆಸಿದ ಕುರುಹುಗಳೂ ದೊರೆಯುತ್ತವೆ.
ಕೋಲಾರ ಜಿಲ್ಲಾ ಪಂಚಾಯಿತಿ ಮಹತ್ವದ ಯೋಜನೆಯೊಂದನ್ನು ರೂಪಿಸಿದ್ದು, ಇತಿಹಾಸಕ್ಕೆ ಸಾಕ್ಷಿಯಾಗಿ ನಿಲ್ಲುವ ನೂರಾರು ವೀರಗಲ್ಲುಗಳನ್ನು ಸಂರಕ್ಷಿಸುವ ಹಾಗೂ ಅವುಗಳನ್ನು ಒಂದೆಡೆ ಸುರಕ್ಷಿತವಾಗಿಸುವ ಮೂಲಕ ಮುಂದಿನ ತಲೆಮಾರಿಗೆ ಭವ್ಯ ಇತಿಹಾಸ ತಿಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ.
ಆ ನಿಟ್ಟಿನಲ್ಲಿ ಹುನುಕುಂದದಲ್ಲಿ ವೀರಗಲ್ಲು ಪಾರ್ಕ್ ನಿಮಾರ್ಣ ಮಾಡಿ ಹಲವು ಭಾಗಗಳಲ್ಲಿ ಹಾಳಾಗುತ್ತಿದ್ದ ವೀರಗಲ್ಲು ಸುರಕ್ಷಿಸಿ ಮಾಹಿತಿ ಕೇಂದ್ರವನ್ನಾಗಿ ಮಾಡುತ್ತಿದೆ. ನೂರಾರು ವೀರಗಲ್ಲುಗಳನ್ನ ಸಂರಕ್ಷಿಸುವ ಶಿಲೋಧ್ಯಾನ ರಕ್ಷಣಾ ಕಾರ್ಯಕ್ಕೆ ಇತಿಹಾಸಕಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ತಾಲೂಕಿನ ಹುನುಕುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವೀರಗಲ್ಲು ಪಾರ್ಕ್ ನಿಮಾರ್ಣ ಮಾಡಲಾಗುತ್ತಿದೆ. ವೀರಗಲ್ಲುಗಳಷ್ಟೇ ಅಲ್ಲದೆ ಗ್ರಾಮಗಳ ಸುತ್ತಮುತ್ತ ಸಿಗುವ ಐತಿಹಾಸಿಕ ಶಿಲಾ ಶಾಸನಗಳನ್ನು ಪಾರ್ಕ್ನಲ್ಲಿ ಸಂರಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಈ ಪಾರ್ಕ್ ಅನ್ನು ಬೋಧನಾ ಕೇಂದ್ರವನ್ನಾಗಿಯೂ ಮಾಡುವ ಸ್ಥಳವಾಗಿಸುತ್ತಿದೆ. ಸದ್ಯ ಜಿಲ್ಲೆಯಲ್ಲಿ 3 ಸ್ಥಳಗಳಲ್ಲಿ ಇಂಥದ್ದೊಂದು ಪಾರ್ಕ್ ನಿಮಾರ್ಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹಲವು ತಾಲೂಕುಗಳಲ್ಲಿ ವೀರಗಲ್ಲು ಪಾರ್ಕ್ ನಿಮಾರ್ಣ ಮಾಡುವ ಗುರಿ ಹೊಂದಲಾಗಿದೆ.
ಜಿಲ್ಲಾಧಿಕಾರಿ ಸೂಚನೆ: ಜಿಲ್ಲಾಧಿಕಾರಿ ವೀರಗಲ್ಲು ಉದ್ಯಾನವನಕ್ಕೆ ಭೇಟಿ ನೀಡಿ ಉದ್ಯಾನವನದಲ್ಲಿ ದೀಪ ಮತ್ತು ನೀರಿನ ವ್ಯವಸ್ಥೆ ಮಾಡಬೇಕು. ಸರ್ವೇ ನಂ.69ರಲ್ಲಿರುವ ಸರ್ಕಾರಿ ಜಮೀನಿನಲ್ಲಿ 4 ಗುಂಟೆ ಪ್ರದೇಶ ವೀರಗಲ್ಲು ಪಾರ್ಕ್ಗೆ ಮೀಸಲಿಟ್ಟು ಪ್ರತ್ಯೇಕ ಪಹಣಿ ಮಾಡಬೇಕು. ಪ್ರತಿ ವೀರಗಲ್ಲಿಗೆ ನಂಬರ್ ಕೊಟ್ಟು ಅದರ ಚರಿತ್ರೆ ಬರೆಸಬೇಕು ಎಂದು ಹುನುಕುಂದ ಗ್ರಾಮದ ಪಿಡಿಒ ಚಂದ್ರಪ್ಪಗೆ ಸೂಚಿಸಿದರು.