ಯಡತೊರೆ ಶ್ರೀ ಶಂಕರ ಭಾರತಿ ಸ್ವಾಮೀಜಿ ಮತ್ತು ಶ್ರೀ ಬ್ರಹ್ಮಾನಂದ ಸ್ವಾಮೀಜಿ ಕಾರ್ಯಕ್ರಮದ ವಿವರಣೆ ನೀಡಿದರು.  
ರಾಜ್ಯ

ಜ.29 ರಿಂದ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ವಿವೇಕ ದೀಪ್ತಿ ಆಯೋಜನೆ

ಪ್ರಮುಖ ಮುಖ್ಯಾಂಶಗಳು

  • ವೇದಾಂತ ಭಾರತಿ ವಿವೇಕ ದೀಪ್ತಿ ಎಂಬ ರಾಷ್ಟ್ರಮಟ್ಟದ ಕಾರ್ಯಕ್ರಮವು
  • ಜ.29ರಿಂದ ಫೆ.1ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆ
  • ಶೃಂಗೇರಿ ಜಗದ್ಗುರುಗಳು ಸಾನಿಧ್ಯ, ಯಡತೊರೆ ಶ್ರೀಗಳ ನೇತೃತ್ವ

ಬೆಂಗಳೂರು:ಅಧ್ಯಯನ ಮತ್ತುಸಂಶೋಧನೆಗೆ ಸಮರ್ಪಿತವಾಗಿ ವೇದಾಂತಭಾರತಿ ವಿವೇಕ ದೀಪ್ತಿ ಎಂಬರಾಷ್ಟ್ರಮಟ್ಟದ,ಅನುಸಂಧಾನಾಧಾರಿತಶೈಕ್ಷಣಿಕ ಕಾರ್ಯಕ್ರಮವು ಜ.29ರಿಂದಫೆ.1ರವರೆಗೆಬೆಂಗಳೂರಿನ ಅರಮನೆ ಮೈದಾನದಲ್ಲಿನಡೆಯಲಿದೆ ಎಂದು ಯಡತೊರೆ ಶ್ರೀಶಂಕರಭಾರತಿ ಸ್ವಾಮಿಗಳು ತಿಳಿಸಿದ್ದಾರೆ.

ಭಾರತದಜ್ಞಾನ ಪರಂಪರೆಯ ಆಧಾರದ ಮೇಲೆಅನುಭವಾತ್ಮಕ ಕಲಿಕೆ,ವೈಜ್ಞಾನಿಕಅನ್ವೇಷಣೆ ಹಾಗೂ ಸಮೂಹ ಚಿಂತನೆಗಳನ್ನುಒಂದೇ ವೇದಿಕೆಯಲ್ಲಿ ಒಗ್ಗೂಡಿಸುವನಾಲ್ಕು ದಿನಗಳ ಕಾರ್ಯಕ್ರಮದಸಾನ್ನಿಧ್ಯವನ್ನು ಶೃಂಗೇರಿಜಗದ್ಗುರು ಶ್ರೀ ಭಾರತೀ ತೀರ್ಥಮಹಾಸ್ವಾಮಿಗಳು ಹಾಗೂ ವಿಧುಶೇಖರಭಾರತಿ ಸ್ವಾಮೀಜಿ ವಹಿಸಲಿದ್ದು,ಯಡತೊರೆ ಮಠದಡಾ.ಶಂಕರಭಾರತಿ ಸ್ವಾಮೀಜಿ ಮತ್ತುಶ್ರೀಬ್ರಹ್ಮಾನಂದ ಭಾರತಿ ಸ್ವಾಮೀಜಿನೇತೃತ್ವ ವಹಿಸಲಿದ್ದಾರೆ.

ವಿದ್ಯಾರ್ಥಿಗಳನೇತೃತ್ವದ ಅನುಭವಾತ್ಮಕ ಪ್ರದರ್ಶನವಾದದಕ್ಷಿಣಾಸ್ಯ ದರ್ಶಿನಿ ಹಾಗೂಮೂರನೇ ದಿನ ನಡೆಯುವ ಆದಿಶಂಕರಾಚಾರ್ಯರುರಚಿಸಿದ ದಕ್ಷಿಣಾಮೂರ್ತಿ ಅಷ್ಟಕದಸಮೂಹ ಮಹಾಸಮರ್ಪಣೆ ಕಾರ್ಯಕ್ರಮದಪ್ರಮುಖ ಆಕರ್ಷಣೆಗಳಾಗಿವೆ.

ಭಾರತೀಯಜ್ಞಾನ ವ್ಯವಸ್ಥೆಗಳನ್ನು ಆಧುನಿಕವೈಜ್ಞಾನಿಕ ಅನ್ವೇಷಣೆ ಮತ್ತುಶಿಕ್ಷಣ ಪದ್ಧತಿಗಳೊಂದಿಗೆಸಂಯೋಜಿಸುವ ಮೂಲಕ ಯುವ ಸಮೂಹದಲ್ಲಿಚಿಂತನಾ ಸ್ಪಷ್ಟತೆ,ವಿವೇಕ ಹಾಗೂಆಳವಾದ ಅನುಸಂಧಾನ ಮನೋಭಾವವನ್ನುಬೆಳೆಸುವ ಮುಖ್ಯ ಉದ್ದೇಶವಾಗಿದೆ.ನಾಲ್ಕು ದಿನಗಳಕಾಲ ನಡೆಯುವ ಪ್ರದರ್ಶನ ಮತ್ತುಸಂಬಂಧಿತ ಕಾರ್ಯಕ್ರಮಗಳು ಜ್ಞಾನ,ಅನುಸಂಧಾನ ಮತ್ತುಸಂವಾದದ ಮೂಲಕ ರಾಷ್ಟ್ರದ ಏಕತೆಯಭಾವನೆಯನ್ನು ಬಲಪಡಿಸುವ ನಿರೀಕ್ಷೆಇದೆ.