ಚಿಕ್ಕೋಡಿಲಿ ವಿಬಿಜಿ ರಾಮ್ ಜಿ ಯೋಜನೆ ಸಭೆ
- ವಿಬಿಜಿ ರಾಮ್ ಜಿ ಯೋಜನೆ ಸಭೆ
- ಚಿಕ್ಕೋಡಿ ತಾ.ಪಂ ಸಭಾಂಗಣ ನಡೆದ ಸಭೆ
- ಯೋಜನೆ ಅನುಷ್ಠಾನಕ್ಕೆ ಶ್ರಮಿಸುವಂತೆ ಸೂಚನೆ
ವಿಬಿಜಿ ರಾಮ್ ಜಿ ಯೋಜನೆ ಪ್ರಗತಿ ಪರಿನಾ ಸಬೆ
ಚಿಕ್ಕೋಡಿ :-ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ ಅಂಡ್ ಅಜೀವಿಕಾ ಮಿಷನ್ ಯೋಜನೆ ಜುಲೈ.1 ರಿಂದ ಅಧಿಕೃತವಾಗಿ ಜಾರಿಯಲ್ಲಿದೆ.ಉದ್ಯೋಗ ಖಾತರಿ ಯೋಜನೆ ವ್ಯಾಪ್ತಿ ವಿಸ್ತರಿಸಿರುವ ಸರ್ಕಾರ ಗ್ರಾಮೀಣ ಕುಟುಂಬಗಳಿಗೆ 100 ದಿನಗಳು ಬದಲಾಗಿ 125 ದಿನಗಳ ಉದ್ಯೋಗ ಭರವಸೆ ನೀಡುವ ಮೂಲಕ ಬಡ ಕಾರ್ಮಿಕರ ಬದುಕಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ, ದಿನಗೂಲಿ ₹370 ರಿಂದ ₹382ಕ್ಕೆ ಹೆಚ್ಚಿಸಲಾಗಿದೆ .ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ಬಿ ಡಿ ನಾಯಕವಾಡಿ ಹೇಳಿದರು .
ಚಿಕ್ಕೋಡಿ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಬಿ-ಜಿ ರಾಮ್ ಜಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಈ ಯೋಜನೆಯಲ್ಲಿ ಸಮರ್ಪಕ ಅನುಷ್ಠಾನಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಗ್ರಾಪಂನಿಂದ ತಾಲೂಕು ಮಟ್ಟದವರೆಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ, ಯೋಜನೆ ಅನುಷ್ಠಾನಕ್ಕೆ ಬೇಕಾದಾತ್ಮಕ ವ್ಯವಸ್ಥೆ ಸಮರ್ಥವಾಗಿದೆ. 36 ಗ್ರಾಮ ಪಂಚಾಯತ ಮಟ್ಟದಲ್ಲಿ ವಿಬಿ-ಜಿ ರಾಮ್ ಜಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸಹಾಯಕ ನಿರ್ದೇಶಕರಾದ ಶಿವಾನಂದ ಶಿರಗಾಂವಿ , ಗ್ರಾಮ ಪಂಚಾಯತ ಆಡಳಿತ ಅಧಿಕಾರಿಗಳು, ಪಿಡಿಓಗಳು , ಎಮ್.ಐ.ಎಸ್, ಐ.ಐ.ಸಿ, ಆಡಳಿತ ಸಹಾಯಕ, ತಾಂತ್ರಿಕ ಸಂಯೋಜಕ, ತಾಂತ್ರಿಕ ಸಹಾಯಕರು ಡಿಐಒಗಳು ಇತರರಿದ್ದರು.