ಮುದಗಲ್ ಹೊರವಲಯದಲ್ಲಿರುವ ವಾಸುಕಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಪಂಚ ವಾರ್ಷಿಕೋತ್ಸವ ಶನಿವಾರ ಸಂಪನ್ನಗೊಂಡಿತು. ಪ್ರಮುಖರಾದ ಹೊಳೆಯಪ್ಪ ಬಂಕದ, ಹನುಮೇಶ ಪಟವಾರಿ, ರಮೇಶ ಗೂಳಿ, ಚನ್ನಮ್ಮ ಸುಂಕದ, ಸಂಜಯ್ ಬಾಸುತ್ಕರ್ ಇದ್ದರು.
ಮುದಗಲ್: ಪಟ್ಟಣ ಹೊರವಲಯದಲ್ಲಿರುವ ವಾಸುಕಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪಂಚವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಶ್ರದ್ಧೆ, ಭಕ್ತಿಯಿಂದ ಜರುಗಿತು.
ವಿಗ್ರಹಗಳಿಗೆ ವಿಶೇಷ ಅಲಂಕಾರ ಸೇವೆ, ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಧೀರೇಂದ್ರಾಚಾರ್ಯ ಅವರು, ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ, ಗಂಧ ಲೇಪನ, ನೈವೇದ್ಯ ಹಾಗೂ ಮಹಾ ಮಂಗಳಾರತಿ ನೆರವೇರಿಸಿದರು.
ಅನ್ನಸಂತರ್ಪಣೆ ಮೂಲಕ ಪಂಚ ವಾರ್ಷಿಕೋತ್ಸವ ಸಂಪನ್ನಗೊಂಡಿತು. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಮುಡುಪು ಸಮರ್ಪಣೆ ಮಾಡಿ ಹರಕೆ ತೀರಿಸಿದರು.
ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಹೊಳೆಯಪ್ಪ ಬಂಕದ, ಹನುಮೇಶ ಪಟವಾರಿ, ಎಲ್.ಟಿ. ನಾಯ್ಕ, ವೆಂಕಟೇಶ ಕುಲಕರ್ಣಿ, ರಮೇಶ ಗೂಳಿ, ಶಂಕರಗೌಡ ಕಿಡದೂರು, ಮಹೇಶ ವಸ್ತ್ರದ, ಬಾಳಪ್ಪ ಸುರಪುರ, ರಾಜಕುಮಾರ್ ಮಾಲಿಪಾಟೀಲ್, ಬಾಲಣ್ಣ ಶೆಟ್ಟಿ ಇತರರಿದ್ದರು.