ವಾಸ್ತು ಪ್ರಕಾರ ನಿರ್ಮಿಸಿರುವ ಮನೆಯ ಹೊರಾಂಗಣ ದೃಶ್ಯ. 
ರಾಜ್ಯ

ಮನೆಯನ್ನು ಮಂತ್ರಾಲಯವಾಗಿಸುವ ಸರಳ ವಿಧಾನ ವಾಸ್ತು

ಮನೆ ನಿರ್ಮಿಸುವಾಗ ವಾಸ್ತು ವಿಜ್ಞಾನದ ಅರಿವು ಅಗತ್ಯ

ಬೆಂಗಳೂರು : ಸಾಮಾನ್ಯವಾಗಿ ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಅತಿಹೆಚ್ಚು ಕಾಲ ಕಳೆಯುವ ಮತ್ತು ತನ್ನ ಬದುಕಿನೊಂದಿಗೆ ಬೆಸೆದುಕೊಂಡಿರುವ ಸ್ಥಳ ಮನೆ. ಈ ಮನೆಯನ್ನು ಮಂತ್ರಾಲಯವಾಗಿಸಬೇಕೆಂದರೆ ಸರಳವಾದ ವಾಸ್ತು ಅರಿವು ಅಗತ್ಯ ಎಂಬುದು ತಜ್ಞರ ಅಭಿಮತ. ವಾಸ್ತು ಎಂಬ ಶಬ್ದ ಹೇಳಿದ ತಕ್ಷಣ ಅದೊಂದು ಸಂಪ್ರದಾಯ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ವಾಸ್ತು ಪದದ ಇಂಗ್ಲಿಷ ಶಬ್ದವಾದ ಆರ್ಕಿಟೆಕ್ಚರ್ ಎಂಬ ಪದವನ್ನು ವೈಜ್ಞಾನಿಕವಾಗಿ ಸ್ವೀಕರಿಸುತ್ತಾರೆ. ವಾಸ್ತವದಲ್ಲಿ ವಾಸ್ತು ಅಥವಾ ಆರ್ಕಿಟೆಕ್ಚರ್ ಯಾವುದೇ ಶಬ್ದದಿಂದ ಕರೆದರೂ ಇದೊಂದು ಶುದ್ಧ ವಿಜ್ಞಾನ ಎಂಬುದನ್ನು ಮರೆಯುವಂತಿಲ್ಲ.

ವಾಸ್ತುವಿನ್ಯಾಸ ಎಂಬುದು ಕೇವಲ ಒಂದು ಕಟ್ಟಡದ ನಕ್ಷೆಯಲ್ಲ. ಬದಲಾಗಿ ಪಂಚಭೂತಗಳೊಂದಿಗೆ ಮನುಷ್ಯನ ಬದುಕನ್ನು ಬೆಸೆಯುವ ಶ್ರೇಷ್ಠ ವಿದ್ಯೆ. ಪ್ರಕೃತಿ, ಮನುಷ್ಯ ಮತ್ತು ಕಟ್ಟಡ ಈ ಮೂರರ ನಡುವೆ ಇರುವ ಸಂಬಂಧವನ್ನು ಕ್ರಮಬದ್ಧವಾಗಿ ಕಟ್ಟಿಕೊಡುವ ಪ್ರಾಚೀನ ಪರಿಪಾಠವೇ ವಾಸ್ತುವಿನ್ಯಾಸ. ಈ ಬಗ್ಗೆ ಅರ್ಥೈಸಿಕೊಂಡು ಹೊಸದಾಗಿ ಮನೆ ನಿರ್ಮಿಸುವವರು ವಾಸ್ತು ಅಳವಡಿಸಿಕೊಂಡು ಕಟ್ಟುವುದರಿಂದ ಆ ಮನೆ ನಿಜಕ್ಕೂ ಮಂತ್ರಾಲಯವಾಗಲು ಸಾಧ್ಯ ಎಂದು ಹಲವು ವಾಸ್ತು ತಜ್ಞರು ಪ್ರತಿಪಾದಿಸಿದ್ದಾರೆ.

ಒಂದು ಮನೆಯಲ್ಲಿ ಬಹುತೇಕ ಸದಸ್ಯರು ಹೆಚ್ಚು ಸಮಯ ಕಳೆಯುವ ಸ್ಥಳ ಮನೆಯದ್ದಾರಿಂದ ಅವರ ಆರೋಗ್ಯ, ಮನಸ್ಸು, ಕಾರ್ಯಪ್ರಗತಿ, ವಿದ್ಯಾರ್ಜನೆ ಪ್ರತಿಯೊಂದಕ್ಕೂ ಆ ಮನೆಯ ಒಳಗಿನ ಶಕ್ತಿ ಸಂಚಯ ಪ್ರಮುಖ ಪ್ರಭಾವ ಬೀರುತ್ತದೆ. ಅಂತಹ ಶಕ್ತಿ ಸಂಚಯವನ್ನು ನಿರ್ಣಯಿಸುವು ಆ ಕಟ್ಟಡದ ವಾಸ್ತು ವಿನ್ಯಾಸ. ಯಾವ ದಿಕ್ಕಿನಿಂದ ಸೂರ್ಯನ ಕಿರಣಗಳು ಸೇರಿದಂತೆ ಪಂಚಭೂತಗಳ ಪರಿಚಲನೆಗೆ ಅವಕಾಶವಿರುತ್ತದೆ ಎಂಬುದು ಬಹಳ ಮುಖ್ಯ. ಈ ಕಾರಣದಿಂದ ಹೊಸ ಮನೆ ನಿರ್ಮಿಸುವವರು ತಜ್ಞರಿಂದ ವಾಸ್ತು ಸಲಹೆ ಮತ್ತು ಅಳವಡಿಕೆಯನ್ನು ಅನುಸರಿಸುವುದು ಸೂಕ್ತ.

ವಾಸ್ತು ಪ್ರಕಾಶರ ಮನೆಯ ಒಳಾಂಗಣ ವಿನ್ಯಾಸ ಮಾಡಿರುವ ದೃಶ್ಯ.

ತಪ್ಪು ಸಲಹೆಗಳ ಬಗ್ಗೆ ಇರಲಿ ಎಚ್ಚರಿಕೆ

ವಾಸ್ತು ವಿನ್ಯಾಸದ ಬಗ್ಗೆ ಸರಿಯಾದ ಮಾಹಿತಿಗಿಂತಲೂ ತಪ್ಪು ಸಲಹೆ ನೀಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಅಂತಹ ತಪ್ಪು ಸಲಹೆ ಕೊಡುವವರ ಬಗ್ಗೆ ಎಚ್ಚರಿಕೆ ವಹಿಸಬೇಕು. ಸ್ವಯಂೋಷಿತ ವಾಸ್ತು ತಜ್ಞರೆನಿಸಿಕೊಂಡಿರುವವರು ಕೇವಲ ಮನೆಯ ಸೌಂದರ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆಯೇ ಹೊರತು ನೈಜ ವಾಸ್ತು ಉಪಯೋಗಕ್ಕೆ ಅನುಗುಣವಾದ ವಿನ್ಯಾಸವನ್ನು ಮಾಡುವ ಪರಿಣತಿ ಹೊಂದಿರುವುದಿಲ್ಲ.

ಹೊಸ ಮನೆಯನ್ನು ನಿರ್ಮಿಸುವಾಗ ನಿಗದಿತವಾಗಿ ವಿನ್ಯಾಸಗೊಳಿಸಿ ಕಟ್ಟಡದಿಂದ ಕಟ್ಟಡಕ್ಕೆ ಕೇವಲ ಒಳಾಂಗಣ ಮತ್ತು ಹೊರಾಂಗಣ ಅಲಂಕಾರವನ್ನು ಮಾತ್ರ ಬದಲಿಸಿ ವಾಸ್ತು ವಿನ್ಯಾಸದಲ್ಲೂ ರೆಡಿಮೇಡ್ ಮಾದರಿ ಅನುಸರಿಸುತ್ತಿರುವುದರಿಂದ ವಾಸ್ತು ಉದ್ದೇಶ ಸಲವಾಗುತ್ತಿಲ್ಲ.

ವಾಸ್ತು ವಿನ್ಯಾಸವನ್ನು ತಾಂತ್ರಿಕ ವಿಷಯವೆಂಬಂತೆ ಪರಿಗಣಿಸಿ ಎಷ್ಟೋ ಇಂಜಿನಿರ್‌ಗಳು ಮನೆಯ ವಾಸ್ತು ವಿನ್ಯಾಸವನ್ನು ರಚಿಸುತ್ತಿರುವುದು ಹಲವು ಅಚಾತುರ್ಯಕ್ಕೆ ಕಾರಣವಾಗುತ್ತಿದೆ. ಈ ಎಲ್ಲವುಗಳ ಬಗ್ಗೆ ಗಮನವಿಟ್ಟು, ನೈಜ ವಾಸ್ತುತಜ್ಞರಿಂದ ಮಾತ್ರ ಮನೆಯ ವಿನ್ಯಾಸವನ್ನು ಮಾಡಿಸಿ ಮನೆ ಕಟ್ಟಿಸಿದರೆ, ಆಗ ಆ ಮನೆಗೆ ವಾಸ್ತು ಪ್ರಯೋಜನ ದೊರೆಯಲು ಸಾಧ್ಯ.