ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ
- * ಲಕ್ಷ ತುಳಸೀ ಅರ್ಚನೆ, ವೇದ ಪಾರಾಯಣ, ಶತಚಂಡೀ ಮಹಾಯಾಗ, ಗುರುವಂದನಾ ಸಭೆ
ಬೆಂಗಳೂರು: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ವರ್ಧಂತೀ ಮಹೋತ್ಸವವನ್ನು ಹರಿಹರಪುರದಲ್ಲಿ ಶನಿವಾರ (ಜು. 11) ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಲಕ್ಷ ತುಳಸೀ ಅರ್ಚನೆ, ವೇದ ಪಾರಾಯಣ, ಶತಚಂಡೀ ಮಹಾಯಾಗ, ಗುರುವಂದನಾ ಸಭೆ ಸೇರಿ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 7.30ಕ್ಕೆ ಶ್ರೀಗಳ ವಿಶೇಷ ಆಹ್ನಿಕ ದರ್ಶನ ಇರಲಿದೆ. 10.30ಕ್ಕೆ ಚಂಡಿಕಾ ಹೋಮ ಮತ್ತು ಆಯುಷ್ಯ ಹೋಮದ ಪೂರ್ಣಾಹುತಿ ನಡೆಯಲಿದೆ. 11ಕ್ಕೆ ಗುರುವಂದನಾ ಸಭೆಯಲ್ಲಿ ಶ್ರೀಗಳಿಂದ ಆಶೀರ್ವಚನ. ಮಧ್ಯಾಹ್ನ 12.30ಕ್ಕೆ ಶ್ರೀಗಳಿಗೆ ಭಕ್ತರಿಂದ ಭಿಕ್ಷಾವಂದನೆ ಸಮರ್ಪಣೆ ಇರಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ಮೂಲಕ ಯತಿವರ್ಯರ ಹಾಗೂ ಶ್ರೀ ಶಾರದಾ ಲಕ್ಷ್ಮೀನರಸಿಂಹರ ವಿಶೇಷ ಅನುಗ್ರಹಕ್ಕೆ ಪಾತ್ರಾರಾಗಬೇಕಾಗಿ ಕೋರಲಾಗಿದೆ.