ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಶ್ರಾವಣಮಾಸ ಬಂತೆಂದರೆ ನೂತನ ಸಂವತ್ಸರದಸಾಲು ಸಾಲು ವ್ರತ,ಪೂಜೆ,ಹಬ್ಬಗಳುಆರಂಭವಾಗುತ್ತವೆ.ನಾಗರಪಂಚಮಿಯಿಂದಆರಂಭವಾಗುವ ಮಹಿಳೆಯರ ಸಂಭ್ರಮವನ್ನುಮತ್ತಷ್ಟು ಹೆಚ್ಚಿಸುವ ಪರ್ವಕಾಲವರಮಹಾಲಕ್ಷ್ಮಿ ಹಬ್ಬ.
ಶ್ರಾವಣ ಮಾಸದಶುಕ್ಲಪಕ್ಷದ ಎರಡನೇ ಶುಕ್ರವಾರದಂದು(ಈಬಾರಿ ಆ.21)ಹಿಂದೂಸಂಪ್ರದಾಯದಲ್ಲಿ ವರಮಹಾಲಕ್ಷ್ಮಿಹಬ್ಬವನ್ನು ಆಚರಿಸಲಾಗುತ್ತದೆ.ಭಾರತೀಯಸಂಪ್ರದಾಯಗಳಲ್ಲಿ ತತ್ವಭೇದಗಳೇನೇಇದ್ದರೂ ಲಕ್ಷ್ಮಿಯ ಆರಾಧನೆಗೆವಿಶೇಷ ಸ್ಥಾನವಿದೆ.ಐಶ್ವರ್ಯದಅಧಿದೇವತೆಯಾದ ಮಹಾಲಕ್ಷ್ಮಿಯಕೃಪೆ ಎಲ್ಲರಿಗೂ ಬೇಕು.ಅದರಲ್ಲೂಮಹಾಲಕ್ಷ್ಮಿಯ ದಯೆ ಇಲ್ಲದೆದಾರಿದ್ರ್ಯ ನಾಶವಾಗುವುದಿಲ್ಲಎಂಬ ನಂಬಿಕೆ ಇದೆ.ಈ ಎಲ್ಲಹಿನ್ನೆಲೆಯಲ್ಲಿ ವರಮಹಾಲಕ್ಷ್ಮಿಹಬ್ಬಕ್ಕೆ ಸುಮಂಗಲೆಯರು ವಿಶೇಷಪ್ರಾಧಾನ್ಯತೆ ನೀಡುತ್ತಾರೆ.ಪ್ರತಿನಿತ್ಯವೂಲಕ್ಷ್ಮಿಯನ್ನು ಪೂಜಿಸುವವರಿದ್ದಾರೆ.ಆದರೆಶ್ರಾವಣ ಮಾಸದ ಶುಕ್ಲಪಕ್ಷದ ಎರಡನೇಶುಕ್ರವಾರದಂದು ಪೂಜಿಸುವ ಮಹಾಲಕ್ಷ್ಮಿಪೂಜೆಗೆ ಹೆಚ್ಚಿನ ಲವಿದೆ. ಶೀಘ್ರವರಪ್ರದಾಯಿನಿಯಾದ ಮಹಾಲಕ್ಷ್ಮಿಯುಭಕ್ತರ ಭಕ್ತಿ ಸೇವೆಗೆ ಸಂತುಷ್ಟಳಾಗಿಬೇಡಿದ ವರಗಳನ್ನು ನೀಡುತ್ತಾಳೆಎಂಬ ನಂಬಿಕೆ ಭಕ್ತರಲ್ಲಿದೆ.ಈಹಿನ್ನೆಲೆಯಲ್ಲಿ ಕ್ಷೀರ ಸಮುದ್ರವಾಸಿನಿಯಾದ ಮಹಾಕ್ಷ್ಮಿಯನ್ನುವರಮಹಾಲಕ್ಷ್ಮಿ ಎಂದು ಕರೆಯಲಾಗುತ್ತದೆ.ವರಮಹಾಲಕ್ಷ್ಮಿವ್ರತವು ಕರ್ನಾಟಕ ಸೇರಿದಂತೆದಕ್ಷಿಣ ಭಾರತದ ಹಲವು ಭಾಗಗಳಲ್ಲಿಶ್ರದ್ಧೆ,ಭಕ್ತಿಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ.ಅದರಲ್ಲೂರಾಜಧಾನಿ ಬೆಂಗಳೂರಿನ ಅದ್ಧೂರಿಹಬ್ಬಗಳಲ್ಲಿ ವರಮಹಾಲಕ್ಷ್ಮಿಪ್ರಮುಖವಾಗಿದೆ.ಮನೆಗೆಲಕ್ಷ್ಮೀದೇವಿಯ ಆಗಮನವಾಗಲಿ,ಕುಟುಂಬದಲ್ಲಿಸುಖ-ಶಾಂತಿ,ಆರೋಗ್ಯ,ಐಶ್ವರ್ಯನೆಲೆಸಲಿ ಎಂಬ ಆಶಯದಿಂದ ಮಹಿಳೆಯರುವ್ರತಾಚರಣೆ ಕೈಗೊಳ್ಳುತ್ತಾರೆ.
ಅಷ್ಟೈಶ್ವರ್ಯದಅಧಿನಾಯಕಿ ಮಹಾಲಕ್ಷ್ಮಿ
ಸಾಮಾನ್ಯವಾಗಿಸಂಪತ್ತು ಅಥವಾ ಐಶ್ವರ್ಯ ಎಂದರೆಕೇವಲ ಹಣ,ಬಂಗಾರಎಂಬ ಕಲ್ಪನೆ ಬಹುತೇಕರಲ್ಲಿಇರುತ್ತದೆ.ಆದರೆಒಟ್ಟು 8ಬಗೆಯಐಶ್ವರ್ಯಗಳನ್ನು ಶಾಸದಲ್ಲಿಉಲ್ಲೇಖಿಸಲಾಗಿದೆ.ಧನ,ಧಾನ್ಯ,ವಿದ್ಯೆ,ಧೈರ್ಯ,ಸಂತಾನ,ವಿಜಯ,ಆರೋಗ್ಯ,ಸೌಭಾಗ್ಯಹೀಗೆ 8ವಿಧದಸಂಪತ್ತುಗಳಿಗೂ ಮಹಾಲಕ್ಷ್ಮಿಯೇಅಧಿನಾಯಕಿಯಾಗಿದ್ದು,ಅಷ್ಟಲಕ್ಷ್ಮಿಸ್ವರೂಪದಲ್ಲಿ ಆಕೆಯನ್ನುಪೂಜಿಸಲಾಗುತ್ತದೆ.ಅಂತೆಯೇವರಮಹಾಲಕ್ಷ್ಮಿ ವ್ರತವನ್ನುಆಚರಿಸುವುದರಿಂದ ಅಷ್ಟ ಐಶ್ವರ್ಯಗಳುವೃದ್ಧಿಯಾಗುತ್ತವೆ ಎಂಬ ನಂಬಿಕೆಇದೆ.ಹೀಗಾಗಿಈ ವರಮಹಾಲಕ್ಷ್ಮಿ ಹಬ್ಬ ಕೇವಲಸಂಪತ್ತಿನ ಆರಾಧನೆಗೆ ಸೀಮಿತವಾಗದೆ,ಕುಟುಂಬದಸಮೃದ್ಧಿ ಮತ್ತು ಕ್ಷೇಮಕ್ಕಾಗಿಪ್ರಾರ್ಥಿಸುವ ಪರ್ವವಾಗಿದೆ.
ಪುರಾಣ ಪರಂಪರೆಯಪ್ರಕಾರ,ಚಾರುಮತಿಎಂಬ ಮಹಿಳೆಗೆ ಲಕ್ಷ್ಮೀದೇವಿಕನಸಿನಲ್ಲಿ ಕಾಣಿಸಿಕೊಂಡು ವ್ರತಆಚರಿಸುವಂತೆ ಸೂಚಿಸಿದಳು ಎಂಬಕಥೆ ಪ್ರಚಲಿತದಲ್ಲಿದೆ.ಅದರಂತೆವ್ರತ ಆಚರಿಸಿದ ಚಾರುಮತಿ ಹಾಗೂಇತರ ಸುಮಂಗಲೆಯರಿಗೆ ದೇವಿಯಅನುಗ್ರಹ ದೊರೆಯಿತು ಎಂಬ ಪ್ರತೀತಿಇದ್ದು,ಅಂದಿನಿಂದವರಮಹಾಲಕ್ಷ್ಮಿ ವ್ರತವು ಪ್ರಚಲಿತಕ್ಕೆಬಂದಿದೆ.
ಹಬ್ಬದ ದಿನಬೆಳಗ್ಗೆಯೇ ಮನೆಯನ್ನು ಸ್ವಚ್ಛಗೊಳಿಸಿ,ಮನೆಯಮುಂದೆ ರಂಗೋಲಿ ಹಾಕಿ,ಬಾಗಿಲಿಗೆಮಾವಿನ ಎಲೆ ಮತ್ತು ಬಾಳೆಕಂಬಗಳಿಂದಅಲಂಕಾರ ಮಾಡಬೇಕು.ಮಹಾಲಕ್ಷ್ಮಿಯನ್ನುಪೂಜಿಸುವ ಸ್ಥಳದಲ್ಲಿ ಅವರವರಶಕ್ತ್ಯಾನುಸಾರ ಮಂಟಪ ನಿರ್ಮಿಸಿ,ಕಲಶಪ್ರತಿಷ್ಠಾಪಿಸಬೇಕು. ಕಲಶದಲ್ಲಿನೀರು,ಅಕ್ಕಿ,ನಾಣ್ಯಮತ್ತಿತರ ಮಂಗಳದ್ರವ್ಯಗಳನ್ನುಹಾಕಿ,ಮೇಲ್ಭಾಗದಲ್ಲಿತೆಂಗಿನಕಾಯಿ ಇಟ್ಟು ಅಲಂಕರಿಸಬೇಕು.ವಾಸ್ತವದಲ್ಲಿಕಲಶವನ್ನೇ ದೇವಿಯ ಸ್ವರೂಪವೆಂದುಆವಾಹನೆ ಮಾಡಿ ಪೂಜಿಸುವ ಪದ್ಧತಿಇದೆಯಾದರೂ,ಬಹುತೇಕರುಮಹಾಲಕ್ಷ್ಮಿಯ ಬೆಳ್ಳಿಯ ಮುಖವಾಡಅಥವಾ ಮೂರ್ತಿ ಅಥವಾ ಫೋಟೋವನ್ನುಇಟ್ಟು ಪೂಜಿಸುತ್ತಾರೆ.ಲಕ್ಷ್ಮಿಮೂರ್ತಿಗೆ ಹಾಲು,ತುಪ್ಪ,ಜೇನುತುಪ್ಪವಿಶೇಷವಾಗಿ ಮೊಸರಿನಿಂದ ಅಭಿಷೇಕಮಾಡುವುದು ಶ್ರೇಷ್ಠ.ನಂತರದೇವಿಯ ಮೂರ್ತಿಗೆ ತಮ್ಮಲ್ಲಿರುವಒಡವೆ,ವಸವನ್ನುತೊಡಿಸಿ,ಹೊಸಸೀರೆಯನ್ನು ಉಡಿಸಬೇಕು.ಅರಿಶಿನ,ಕುಂಕುಮ,ಹೂವು,ಗಂಧ,ಅಕ್ಷತೆ,ವಿವಿಧನೈವೇದ್ಯಗಳಿಂದ ದೇವಿಗೆ ಪೂಜೆಸಲ್ಲಿಸಬೇಕು.ವಿಳ್ಯೆದೆಲೆಯಲ್ಲಿಲಕ್ಷ್ಮಿಯ ಸ್ವರೂಪವಿದ್ದು,ಎಲೆಯಮೇಲೆ ಕುಂಕುಮಾರ್ಚನೆ ಮಾಡಬೇಕು.
ವರಮಹಾಲಕ್ಷ್ಮಿಪೂಜೆಯಲ್ಲಿ ಕಂಕಣ ದಾರಕ್ಕೆ ವಿಶೇಷಸ್ಥಾನವಿದ್ದು,ಹಳದಿಬಣ್ಣದ ದಾರಕ್ಕೆ ನಿರ್ದಿಷ್ಟಸಂಖ್ಯೆಯ ಗಂಟುಗಳನ್ನು ಹಾಕಿ,ಪೂಜೆಸಲ್ಲಿಸಿದ ಬಳಿಕ ಮಹಿಳೆಯರು ಪರಸ್ಪರಅದನ್ನು ಕೈಗೆ ಕಟ್ಟಿಕೊಳ್ಳಬೇಕು.ಇದುದೇವಿಯ ಅನುಗ್ರಹ,ಸೌಭಾಗ್ಯಹಾಗೂ ರಕ್ಷೆಯ ಸಂಕೇತವೆಂದುಭಾವಿಸಲಾಗುತ್ತದೆ.ಪೂಜೆಯಬಳಿಕ ಸುಮಂಗಲಿಯರನ್ನು ಮನೆಗೆಆಹ್ವಾನಿಸಿ ಅರಿಶಿನ,ಕುಂಕುಮ,ಹೂವು,ಬಳೆ,ತಾಂಬೂಲಮತ್ತಿತರ ಮಂಗಳದ್ರವ್ಯಗಳೊಂದಿಗೆಬಾಗೀನವನ್ನು ನೀಡಿ ಗೌರವಿಸಬೇಕು.
ಪೂಜೆ ಪೂರ್ಣವಾದನಂತರ ಮಹಾಲಕ್ಷ್ಮಿಗೆ ಸಿಹಿಪದಾರ್ಥಗಳನ್ನು ಮಾಡಿ ನೈವೇದ್ಯಮಾಡಬೇಕು.ಆಯಾಪ್ರದೇಶ ಹಾಗೂ ಕುಟುಂಬದ ಸಂಪ್ರದಾಯಕ್ಕೆಅನುಗುಣವಾಗಿ ನೈವೇದ್ಯದಲ್ಲೂವೈವಿಧ್ಯತೆ ಸಹಜ.ಪಾಯಸ,ಹೋಳಿಗೆ,ಕಡುಬು,ಕೋಸಂಬರಿಹೀಗೆ ವಿವಿಧ ಬಗೆಯ ಸಿಹಿ ಮತ್ತುಖಾರದ ತಿಂಡಿಗಳು ಸೇರಿದಂತೆಮನೆಯಲ್ಲಿಯೇ ಸಿದ್ಧಪಡಿಸಿದವಿವಿಧ ಬಗೆಯ ಖಾದ್ಯಗಳನ್ನು ದೇವಿಗೆಅರ್ಪಿಸಲಾಗುತ್ತದೆ.ಕೆಲವೆಡೆಹಬ್ಬದ ವಿಶೇಷವಾಗಿ ಅಕ್ಕಿ,ಬೆಲ್ಲ,ಬೇಳೆ,ತೆಂಗಿನಕಾಯಿಮುಂತಾದವುಗಳಿಂದ ಪ್ರಸಾದ ತಯಾರಿಸುವರೂಢಿಯೂ ಇದೆ.
ವರಮಹಾಲಕ್ಷ್ಮಿಹಬ್ಬವು ಧಾರ್ಮಿಕ ಆಚರಣೆಯ ಜತೆಗೆಸಂಬಂಧಗಳನ್ನು ಗಟ್ಟಿಗೊಳಿಸುವಸಂದರ್ಭವೂ ಹೌದು.ತಲೆತಲಾಂತರಗಳಿಂದಬಂದಿರುವ ಪೂಜಾ ವಿಧಾನಗಳು,ವ್ರತದಕಥೆ,ಮಂಗಳದ್ರವ್ಯಗಳವಿನಿಮಯ ಹಾಗೂ ಸುಮಂಗಲಿಯರಿಗೆಸತ್ಕಾರ ಮಾಡುವುದರಿಂದ ಪರಸ್ಪರಸಂಬಂಧಗಳು ಗಟ್ಟಿಗೊಳ್ಳುತ್ತವೆ.ಆಧುನಿಕಜೀವನಶೈಲಿಯ ನಡುವೆಯೂ ಸಂಪ್ರದಾಯವನ್ನುಉಳಿಸಿಕೊಂಡು,ಪರಿಸರಸ್ನೇಹಿಅಲಂಕಾರ,ಸರಳಪೂಜೆ ಹಾಗೂ ಮನೆಯಲ್ಲೇ ಸಿದ್ಧಪಡಿಸಿದಪ್ರಸಾದದ ಮೂಲಕ ಹಬ್ಬ ಆಚರಿಸಬೇಕು.ಹೀಗೆಭಕ್ತಿ,ಸೌಭಾಗ್ಯ,ಕುಟುಂಬದಕ್ಷೇಮ ಮತ್ತು ಪರಂಪರೆಯ ಸಮ್ಮಿಲನವಾಗಿವರಮಹಾಲಕ್ಷ್ಮಿ ಹಬ್ಬ ಪ್ರತಿವರ್ಷ ಮನೆ-ಮನಗಳಲ್ಲಿಹೊಸ ಉತ್ಸಾಹ ಮೂಡಿಸುತ್ತದೆ.