ಶಹಾಪುರ ಸಮೀಪದ ಭೀಮರಾಯನ ಗುಡಿಯ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ ಬಂಜರಾ ಸಮುದಾಯದ ತಾಲೂಕು ಮಟ್ಟದ ಸಭೆಯಲ್ಲಿ ಆಲ್ ಇಂಡಿಯಾ ಬಂಜÁರ ಸಮಿತಿಯ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಮಾನಸಿಂಗ್ ಚವ್ಹಾಣ್ ಮಾತನಾಡಿದರು. ಕಿಸಾನ್ ರಾಠೋಡ, ರಾಮು ರಾಠೋಡ್, ಚನ್ನಪ್ಪ ಚಿನ್ನಾ ರಾಠೋಡ್, ಅಂಬು ಜಾಧವ್, ವಾಲು ರಾಠೋಡ್, ಶರಣಪ್ಪ ಚವ್ಹಾಣ್ ಇತರರಿದ್ದರು. 
ರಾಜ್ಯ

ವರದಕ್ಷಿಣೆ ಪದ್ಧತಿ ನಿರ್ಮೂಲನೆಗೆ ಪಣ

ಪ್ರಮುಖ ಮುಖ್ಯಾಂಶಗಳು

  • ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಮಾನಸಿಂಗ್ ಚವ್ಹಾಣ್ ಹೇಳಿಕೆ
  • ಯಾದಗಿರಿಯಲ್ಲಿ ೧೨ರಂದು ಸಭೆ
ಶಹಾಪುರ: ವರದÀಕ್ಷಿಣೆ ಎಂಬ ಅನಿಷ್ಟ ಪದ್ಧತಿ ತೊಡೆದು ಹಾಕಲು ಗಿರಿ ಜಿಲ್ಲೆಯ ಬಂಜಾರ ಸಮುದಾಯ ಪಣತೊಟ್ಟಿದೆ ಎಂದು ಆಲ್ ಇಂಡಿಯಾ ಬಂಜÁರ ಸಮಿತಿಯ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಮಾನಸಿಂಗ್ ಚವ್ಹಾಣ್ ಹೇಳಿದರು.
ಇಲ್ಲಿಗೆ ಸಮೀಪದ ಭೀಮರಾಯನಗುಡಿ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ ವರದಕ್ಷಿಣೆ ರಹಿತ ಮದುವೆ ಹಮ್ಮಿಕೊಳ್ಳುವ ಕುರಿತಾದ ತಾಲೂಕು ಮಟ್ಟದ ಸಭೆಯಲ್ಲಿ ಅವರು ಮಾತನಾಡಿ, ವರದಕ್ಷಿಣೆ ನಿಷೇಧ ಕಾನೂನು ಜÁರಿಯಾಗಿ ೬೫ ವಸಂತಗಳು ಕಳೆದರೂ ಸಹ ನಮ್ಮ ಬಂಜÁರ ಸಮುದಾಯದಲ್ಲಿ ವರದಕ್ಷಿಣೆ ಪಿಡುಗಿನಿಂದ ತುಂಬಾ ಕುಟುಂಬಗಳು ಜರ್ಜಿತಗೊಂಡಿವೆ. ಇಂತಹ ಅನಿಷ್ಟ ಪದ್ಧತಿಯ ಪರಿಣಾಮ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಿ ವರದಕ್ಷಿಣೆ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಲು ಜಿಲ್ಲೆಯ ಆರು ತಾಲೂಕುಗಳ ಸಮುದಾಯದ ಧಾರ್ಮಿಕ ಗುರುಗಳ ಹಾಗೂ ಮುಖಂಡರುಗಳ ಮಾರ್ಗದರ್ಶನದಲ್ಲಿ ನಿರ್ಧರಿಸಲಾಗಿದೆ ಎಂದರು.
ಇAತಹ ಮಹತ್ವದ ಸಾಮಾಜಿಕ ಪರಿವರ್ತನೆಯ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಜಿಲ್ಲೆಯ ಎಲ್ಲ ತಾಲೂಕಗಳ ಒಟ್ಟು ೨೭೨ ತಾಂಡಾಗಳ ಮುಖಂಡರೊAದಿಗೆ ಚರ್ಚಿಸಿ ಒಪ್ಪಿಗೆ ಪಡೆದು ವರದಕ್ಷಿಣೆ ರಹಿತ ಮದುವೆಯ ಉಪಯುಕ್ತತೆ ಕುರಿತು ಜಾಗೃತಿ ಮೂಡಿಸಲು ಜು.೧೨ರಂದು ಯಾದಗಿರಿಯಲ್ಲಿ ಜಿಲ್ಲಾ ಮಟ್ಟದ ಬಂಜÁರ ಸಮಾಜದ ಸಭೆ ಕರೆಯಲಾಗಿದೆ. ಈ ಸಭೆಗೆ ನಾಯಕ, ಕಾರುಬಾರಿ, ಡಾವ ಮುಂತಾದ ತಾಂಡಾಗಳ ಗುರುಗಳು, ಮುಖಂಡರುಗಳು ಭಾಗವಹಿಸುವಂತೆ ಕೋರಲಾಗಿದೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಕಿಸಾನ್ ರಾಠೋಡ, ರಾಮು ರಾಠೋಡ್, ಚನ್ನಪ್ಪ ಚಿನ್ನಾ ರಾಠೋಡ್, ಅಂಬು ಜÁದವ್, ವಾಲು ರಾಠೋಡ್, ಶರಣಪ್ಪ ಚವ್ಹಾಣ, ತಾರಾಸಿಂಗ್ ರಾಠೋಡ್, ಪಂಪಣ್ಣ ರಾಠೋಡ್, ಗೋಪಾಲ ರಾಠೋಡ್, ವಿಶ್ವ ಚವ್ಹಾಣ, ಗುರುನಾಥ ಪವ್ಹಾರ, ಚಂದ್ರಕಾAತ ರಾಠೋಡ್, ರಾಜಕುಮಾರ ರಾಠೋಡ್, ಉಮೇಶ ರಾಠೋಡ, ಚಂದ್ರಶೇಖರ ಜಾಧವ್ ಇತರರಿದ್ದರು.
"

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಪರಿವರ್ತನೆಗಳಾಗಿದ್ದರೂ ಸಹ ಹೆಣ್ಣುಮಕ್ಕಳ ಪರಿಸ್ಥಿತಿ ಮತ್ತು ಬದುಕು ತುಂಬಾ ಸುಧಾರಿಸಬೇಕಾಗಿದೆ. ಈ ಸುಧಾರಣೆಗೆ ವರದಕ್ಷಿಣೆ ಮತ್ತು ಮೂಢನಂಬಿಕೆಗಳು ತೊಡೆದು ಹಾಕಲು ನಮ್ಮ ಸಮುದಾಯ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ.| ಮಾನಸಿಂಗ್ ಚವ್ಹಾಣ್ಬಂಜಾರ ಸಮಿತಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ