ತಿ.ನರಸಿಪುರ ತಾಲೂಕಿನ ಸಿದ್ದನಹುಂಡಿ ಗ್ರಾಮದಲ್ಲಿ ಮಾಜಿ ಸಚಿವ ದಿ.ವೈ.ರಾಮಕೃಷ್ಣ ಬಡಾವಣೆ ಹಾಗೂ ರಸ್ತೆ ಮಾರ್ಗಗಳ ಫಲಕ ಉದ್ಘಾಟನೆ ಸಮಾರಂಭವನ್ನು ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಉದ್ಘಾಟಿಸಿದರು. ಕೋಟೆ ಎಂ.ಶಿವಣ್ಣ, ವೈ.ಆರ್.ಲೋಕೇಶ್, ಗುರುಮೂರ್ತಿ, ಆರ್.ಕೃಷ್ಣಮೂರ್ತಿ, ಮೋಹನ್ ಹಿರೇಮನೆ ಇತರರು ಇದ್ದರು. 
ರಾಜ್ಯ

ಹಣದಿಂದ ಮೌಲ್ಯ ಅಳೆಯಲಾಗದು

ತಿ.ನರಸೀಪುರ: ಸಮುದಾಯದಏಳಿಗೆಗಾಗಿ ಮಾಜಿ ಸಚಿವ ದಿ.ವೈ.ರಾಮಕೃಷ್ಣಅವರು ಕೈಗೊಂಡ ದೂರದೃಷ್ಟಿಯನಿರ್ಧಾರಗಳು ಇಂದಿಗೂ ಸಾವಿರಾರುಜನರಿಗೆ ಆಶ್ರಯ ನೀಡಿ,ಆತ್ಮವಿಶ್ವಾಸತುಂಬಿವೆ ಎಂದು ಕೇಂದ್ರದ ಮಾಜಿಸಚಿವ ಎ. ನಾರಾಯಣಸ್ವಾಮಿಹೇಳಿದರು.

ತಾಲೂಕಿನಸಿದ್ದನಹುಂಡಿ ಗ್ರಾಮದಲ್ಲಿಭಾನುವಾರ ಮಾಜಿ ಸಚಿವ ದಿವಂಗತವೈ
.ರಾಮಕೃಷ್ಣಬಡಾವಣೆ ಹಾಗೂ ರಸ್ತೆ ಮಾರ್ಗಗಳಫಲಕ ಉದ್ಘಾಟನೆ ಕಾರ್ಯಕ್ರಮದಲ್ಲಿಮಾತನಾಡಿದರು.

ಶಾಸಕರಾಗಿ
,ಸಚಿವರಾಗಿ ವೈ.ರಾಮಕೃಷ್ಣ ಸಮಾಜದಅಭಿವೃದ್ಧಿಯನ್ನೇ ಜೀವನದಗುರಿಯನ್ನಾಗಿಸಿ ಕೊಂಡಿದ್ದರು.ಜೆಡಿಎಸ್ ಹಾಗೂಕಾಂಗ್ರೆಸ್‌ನಲ್ಲಿ ರಾಜಕೀಯ ಜೀವನಆರಂಭಿಸಿ ಬಳಿಕ ಬಿಜೆಪಿಗೆಸೇರ್ಪಡೆಯಾದ ಸಂದರ್ಭದಲ್ಲಿಅವರೊಂದಿಗೆ ಕಾರ್ಯನಿರ್ವಹಿಸುವಅವಕಾಶ ದೊರೆತಿದ್ದು, ಅವರಗಟ್ಟಿ ನಿರ್ಧಾರಗಳು ಮತ್ತುಸಮಾಜಮುಖಿ ಚಿಂತನೆಗಳು ಆಳವಾದಪ್ರಭಾವ ಬೀರಿವೆ ಎಂದು ಹೇಳಿದರು.

ಸಮಾಜಕ್ಕೆಏನಾದರೂ ಮಾಡಬೇಕು ಎಂಬ ತುಡಿತವೇವೈ
.ರಾಮಕೃಷ್ಣಅವರ ಬದುಕಿನ ಮೂಲಮಂತ್ರ ವಾಗಿತ್ತು.ಅವರು ತೆಗೆದುಕೊಂಡಐತಿಹಾಸಿಕ ನಿರ್ಧಾರಗಳಿಂದ ನೂರಾರುಕುಟುಂಬಗಳು ನೆಲೆ ಕಂಡುಕೊಂಡಿವೆ.ಇಂತಹ ನಿರ್ಧಾರಗಳಮೌಲ್ಯ ಯಾವುದೇ ಹಣದಿಂದ ಅಳೆಯಲುಸಾಧ್ಯವಿಲ್ಲ ಎಂದು ಹೇಳಿದರು.

ಮಾಜಿಸಚಿವ ಕೋಟೆ ಎಂ
.ಶಿವಣ್ಣಮಾತನಾಡಿ, ಇತ್ತೀಚಿನದಿನಗಳಲ್ಲಿ ವಿವಿಧ ಸಮಾಜಗಳುಸಮುದಾಯದ ಗಣ್ಯರ ಹೆಸರನ್ನು ರಸ್ತೆ,ಬಡಾವಣೆ ಹಾಗೂಸಾರ್ವಜನಿಕ ಸ್ಥಳಗಳಿಗೆ ನಾಮಕರಣಮಾಡುವುದು ಸಾಮಾನ್ಯವಾಗಿದೆ.ವೈ. ರಾಮಕೃಷ್ಣಬಡಾವಣೆಯಲ್ಲಿ ಮಾದಾರ ಚೆನ್ನಯ್ಯಹಾಗೂ ಅರುಂಧತಿ ಅವರ ಹೆಸರನ್ನುಮಾರ್ಗಗಳಿಗೆ ನಾಮಕರಣ ಮಾಡಿರುವುದುರಾಜ್ಯದಲ್ಲೇ ಹೊಸ ಸಂಪ್ರದಾಯಕ್ಕೆನಾಂದಿ ಹಾಡುವಂತಾಗಿದೆ ಎಂದರು.

ವೈ
.ರಾಮಕೃಷ್ಣ ಪುತ್ರಲೋಕೇಶ್ ಮಾತನಾಡಿ, ಸಿದ್ದನಹುಂಡಿಅಭಿವೃದ್ಧಿಗಾಗಿ ಬಡಾವಣೆನಿರ್ಮಾಣಕ್ಕೆ ಸರ್ಕಾರ 2.80ಲಕ್ಷ ರೂ.ಅನುದಾನ ನೀಡಿತ್ತು.2021ರಲ್ಲಿಯೇಬಡಾವಣೆಗೆ ವೈ. ರಾಮಕೃಷ್ಣಅವರ ಹೆಸರಿಡುವಂತೆ ಸೋಸಲೆ ಗ್ರಾಮಪಂಚಾಯಿತಿ ಅನುಮೋದನೆ ನೀಡಿದ್ದರೂ,ಅದು ಕಾರ್ಯರೂಪಕ್ಕೆಬಂದಿರಲಿಲ್ಲ. ಕೊನೆಗೆತಾವೇ ಮುಂದಾಗಿ ಬಡಾವಣೆಗೆ ವೈ.ರಾಮಕೃಷ್ಣ ಅವರಹೆಸರನ್ನು ನಾಮಕರಣ ಮಾಡಿರುವುದಾಗಿತಿಳಿಸಿದರು.

ಬೀದರ್‌ನಿಂದಕೊಳ್ಳೇಗಾಲದವರೆಗೆ ಮಾದಿಗ ಸಮುದಾಯದಕಾಲನಿಗಳಲ್ಲಿ ಪ್ರವಾಸ ಮಾಡಿರುವಅನುಭವ ಹಂಚಿಕೊಂಡ ಅವರು
,ಈ ಭಾಗದ ಮಾದಿಗರುನಿಜಕ್ಕೂ ಪುಣ್ಯವಂತರು.ಇಲ್ಲಿ ಹಸಿರುವಾತಾವರಣವಿದ್ದು, ಜನರುನೆಮ್ಮದಿಯಿಂದ ಅನ್ನ ಸೇವಿಸುವಅವಕಾಶವಿದೆ. ಆದರೆಚಿತ್ರದುರ್ಗದ ಆಚೆಗಿನ ಕೆಲವುಬರಪೀಡಿತ ಪ್ರದೇಶಗಳಲ್ಲಿ ನಮ್ಮಸಮುದಾಯದ ಜನರು ತೀವ್ರ ಸಂಕಷ್ಟದಲ್ಲಿಬದುಕುತ್ತಿದ್ದಾರೆ ಎಂದುಬೇಸರಿಸಿದರು.

ರಾಮನಗರಜಿಲ್ಲೆ ಕೆಡಿಪಿ ಸದಸ್ಯ ಗುರುಮೂರ್ತಿ
,ಆರ್.ಲೋಕೇಶ್,ಆರ್.ಕೃಷ್ಣಮೂರ್ತಿ,ಹುಬ್ಬಳ್ಳಿಮೋಹನ್ ಹಿರೇಮನೆ, ಹುಣಸೂರುನಗರಸಭೆ ಸದಸ್ಯ ಶಿವಕುಮಾರ್,ವಕೀಲರಾದಎಂ.ದಾಸಯ್ಯ,ಪ್ರಕಾಶ್,ಬೂದಿತಿಟ್ಟುರಾಜೇಂದ್ರ, ವಿಜಯಕುಮಾರ್,ಬೆಳಗಾವಿ ರಾಜೇಂದ್ರಐಹೊಳೆ, ಚಿಕ್ಕಬಳ್ಳಾಪುರವೇಣು, ಅಲೆಮಾರಿಸಮುದಾಯದ ಅಧ್ಯಕ್ಷ ಲೋಕೇಶ್,ಮಾದಪ್ಪ ಮಾದಿಗರ,ಆರ್ಯ ಗುರೂಜಿ,ಸಿ.ಮಹದೇವ,ನಿವೃತ್ತ ಪೊಲೀಸ್ಅಧಿಕಾರಿ ಮಲ್ಲೇಶ್,ಕೃಷ್ಣಮೂರ್ತಿ,ಬಿ..ಶಿವಣ್ಣ,ದುದ್ದಗೆರೆಮಾದೇಶ, ರಂಗಕರ್ಮಿಕತ್ಯಾಣಿ, ರಾಚಪ್ಪ,ವೆಂಕಟೇಶ್ಕೊಳ್ಳೇಗಾಲ ಸಿದ್ದಪ್ಪ,ಶಂಕರ್,ಕೆಬ್ಬೆ ಪ್ರಸಾದ್,ಗೋಪಿ,ಸಾವಯವ ಕೃಷಿಕಶ್ರೀನಿವಾಸಮೂರ್ತಿ ಇತರರು ಇದ್ದರು.