ಯಳಂದೂರು ಪಟ್ಟಣದ ಎಸ್‌ವಿಇಟಿ ಶಾಲೆ ಆವರಣದಲ್ಲಿ ಶನಿವಾರ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಗಿಡ ನೆಡುವ ಮೂಲಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವನ್ನು ಆಚರಿಸಿದರು. ಬಿಜೆಪಿ ಮಂಡಲದ ಅಧ್ಯಕ್ಷ ಎನ್. ಅನಿಲ್ ಇತರರು ಇದ್ದರು.
ಯಳಂದೂರು: ಮಾಜಿ ಪ್ರಧಾನಿ ಭಾರತರತ್ನ ಅಟಲ್‌ಬಿಹಾರಿ ವಾಜಪೇಯಿರವರ 101 ನೇ ಹುಟ್ಟು ಹಬ್ಬದ ನಿಮಿತ್ತ ಪಟ್ಟಣದ ಎಸ್‌ವಿಇಟಿ ಶಾಲೆಯ ಆವರಣದಲ್ಲಿ ಶನಿವಾರ ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಗಿಡವನ್ನು ನೆಡುವ ಮೂಲಕ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಟಲ್‌ಬಿಹಾರಿ ವಾಜಪೇಯಿ ದೇಶ ಕಂಡ ಒಬ್ಬ ಅಪ್ರತಿಮ ರಾಜಕಾರಣಿಯಾಗಿದ್ದರು. ದಕ್ಷ ಆಡಳಿತಗಾರರು, ದೇಶಪ್ರೇಮಿಯಾಗಿದ್ದ ಇವರು ಕವಿ ಹೃದಯವನ್ನು ಹೊಂದಿದ್ದ ಒಬ್ಬ ಪ್ರಮಾಣಿಕ ರಾಜಕಾರಣಿಯಾಗಿದ್ದರು. ಇವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿದ್ದವು. ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದರು. ಇವರು ಅನೇಕ ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಕೂಡ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರಗಳನ್ನು ನೇರವಾಗಿ ವಿರೋಧಿಸುತ್ತಿದ್ದರು. ಆ ಮೂಲಕ ಆ ನಿರ್ಧಾರಗಳನ್ನು ಸರ್ಕಾರ ಬದಲಿಸಿಕೊಳ್ಳಲು ಕಾರಣವಾಗಿದ್ದರು. ಇಂತಹ ಅಪರೂಪದ ರಾಜಕಾರಣಿ ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಬೇಕು. ಇವರ ತತ್ವಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಇವರ ಮಾರ್ಗದರ್ಶನದೊಂದಿಗೆ ವಿಶ್ವದಲ್ಲಿ ಭಾರತವನ್ನು ಗುರುತಿಸಿಕೊಳ್ಳುವ ಎಲ್ಲ ಕೆಲಸಗಳನ್ನು ಕೇಂದ್ರದಲ್ಲಿ ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಎನ್. ಅನಿಲ್, ಜಿಲ್ಲಾ ಕಾರ್ಯದರ್ಶಿ ಪಿ. ಮಹೇಶ್ ಗುಂಬಳ್ಳಿ ಗ್ರಾ.ಪಂ ಸದಸ್ಯರಾದ ಕೆ.ಎಸ್. ಚಂದ್ರಶೇಖರ್, ಹೊನ್ನೂರು ಚಿನ್ನಸ್ವಾಮಿ, ಸೂರ್ಯನಾರಾಯಣ್, ಮಾಂಬಳ್ಳಿ ರಾಮು, ಅಗರ ರಾಜು, ರಾಮಣ್ಣ, ಮಾದನಾಯಕ, ಮಹದೇವಸ್ವಾಮಿ ಇತರರು ಇದ್ದರು.