ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಜಯನಗರದ ಶ್ರೀಶಿವರಾತ್ರೀಶ್ವರ ಕೇಂದ್ರದಲ್ಲಿಜೆಎಸ್‌ಎಸ್ ಮಹಾವಿದ್ಯಾಪೀಠಹಮ್ಮಿಕೊಂಡಿದ್ದ ಶ್ರೀಸಿದ್ದೇಶ್ವರಸ್ವಾಮೀಜಿಯವರ ಅಲ್ಲಮನ ವಚನನಿರ್ವಚನ ಕೃತಿಯ ಇಂಗ್ಲಿಷ್ಅನುವಾದದ ‘ವಚನಾಸ್ ಆಫ್ ಅಲ್ಲಮಪ್ರಭು’ಗ್ರಂಥವನ್ನು ನ್ಯಾಯಮೂರ್ತಿದೀಕ್ಷಿತ್ ಕೃಷ್ಣ ಶ್ರೀಪಾದ್(ಕೃಷ್ಣದೀಕ್ಷಿತ್)ಲೋಕಾರ್ಪಣೆಮಾಡಿ ಮಾತನಾಡಿದರು.
ಭಾರತದಸಂವಿಧಾನದ ಹಲವು ಅನುಚ್ಛೇದಗಳಲ್ಲಿಬಸವಾದಿ ಶರಣರ ಚಿಂತನೆಗಳಿವೆ.ಆದ್ದರಿಂದಸಂವಿಧಾನ ಪುಸ್ತಕದಲ್ಲಿ ಬಸವಣ್ಣಅಥವಾ ವಚನ ಸಾಹಿತ್ಯಕ್ಕೆ ಸಂಬಂಧಪಟ್ಟಭಾವಚಿತ್ರವನ್ನು ಸೇರ್ಪಡೆ ಮಾಡಬೇಕುಎಂದು ಒತ್ತಾಯಿಸಿದ ಅವರು, ಸಂವಿಧಾನದಪುಸ್ತಕದಲ್ಲಿ ನಮ್ಮ ಕಲೆ,ಸಾಹಿತ್ಯ,ಸಂಸ್ಕೃತಿ,ಇತಿಹಾಸ,ಪರಂಪರೆಗೆಸಂಬಂಧಪಟ್ಟ 22ಭಾವಚಿತ್ರಗಳಿದ್ದು,ಅವುಗಳಲ್ಲಿಶರಣರ ಚಿತ್ರ ಇಲ್ಲದಿರುವುದುಅಪೂರ್ಣವೆನಿಸಿದೆ.ಸಂವಿಧಾನದಲ್ಲಿರುವಅಸ್ಪೃಶ್ಯತೆ ನಿವಾರಣೆ,ಸಮ ಸಮಾಜ ನಿರ್ಮಾಣಇತ್ಯಾದಿ ಕಳಕಳಿಗಳು ಶರಣರ ವಚನಗಳಿಂದಪ್ರೇರಣೆ ಪಡೆದುಕೊಂಡಿವೆ. ಆದ್ದರಿಂದಶರಣರಿಗೆ ಸಂವಿಧಾನ ಪುಸ್ತಕದಲ್ಲಿಗೌರವ ನೀಡಬೇಕು.ಸನಾತನ ಧರ್ಮಕ್ಕೆಹಲವು ಸವಾಲುಗಳಿವೆ.ಸತ್ಯದಿಂದಸೌಂದರ್ಯದ ಕಡೆಗೆ ಸಾಗುವುದೇಜೀವನದ ಗುರಿ ಎಂದು ನಂಬಿದ್ದಸಿದ್ದೇಶ್ವರ ಸ್ವಾಮೀಜಿ ಅದ್ವೆತಕ್ಕೆಮೂರ್ತರೂಪವಾಗಿದ್ದರು.ಅಲ್ಲಮಪ್ರಭುಉಪನಿಷತ್ತನ್ನು ಮೀರಿದ ಶರಣ.ಅಂತಹ ಅಲ್ಲಮನನ್ನುಅರ್ಥೈಸಿಕೊಳ್ಳುವ,ವ್ಯಾಖ್ಯಾನಿಸುವಶಕ್ತಿ ಸಿದ್ದೇಶ್ವರ ಸ್ವಾಮೀಜಿಗೆಮಾತ್ರ ಸಾಧ್ಯ ಎಂದು ವಿವರಿಸಿದರು.
ಸಮಾರಂಭದಲ್ಲಿಪುಸ್ತಕ ಪರಿಚಯ ಮಾಡಿಕೊಟ್ಟಡಾ.ಮಲ್ಲೇಪುರಂಜಿ.ವೆಂಕಟೇಶ್,ಅಲ್ಲಮನಲ್ಲಿಸಿದ್ದೇಶ್ವರ ಸ್ವಾಮಿಗಳುಲೀನವಾಗಿದ್ದರು.ಅವರ ಅಲ್ಲಮನವಚನ ನಿರ್ವಚನ ಅದಕ್ಕೆ ಸಾಕ್ಷಿ.ಜಾಗತಿಕ ಸಾಹಿತ್ಯಕ್ಕೆಸಿಕ್ಕ ದೊಡ್ಡ ಕೊಡುಗೆ ಈ ಗ್ರಂಥಎಂದು ಹೇಳಿದರು.
ಸಮಾರಂಭದಲ್ಲಿಸುತ್ತೂರು ಶ್ರೀ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.ವಿಜಯಪುರಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗಸ್ವಾಮಿಗಳು ಸಮ್ಮುಖ ವಹಿಸಿದ್ದರು.ಬೃಹತ್ ಕೈಗಾರಿಕಾಸಚಿವ ಎಂ.ಬಿ.ಪಾಟೀಲ್,ಮಾಜಿ ಶಾಸಕಡಿ.ಆರ್.ಪಾಟೀಲ್,ಹಿರಿಯ ಸಾಹಿತಿಗೊ.ರು.ಚನ್ನಬಸಪ್ಪ,ಶರಣ ಸಾಹಿತ್ಯಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್,ಅನುವಾದಕಸುಬ್ಬಾರಾವ್ ಮತ್ತಿತರರುಪಾಲ್ಗೊಂಡಿದ್ದರು.
ಪ್ರಾಚೀನ ಕಾಲದಲ್ಲಿ ಬ್ರಹ್ಮಸೂತ್ರಕ್ಕೆ ಭಾಷ್ಯಗಳ ರಚನೆಯಾದಂತೆ ಅಲ್ಲಮನ ವಚನ ನಿರ್ವಚನ ರೂಪುಗೊಂಡಿದೆ. ಇದನ್ನು ಬೇರೆ ಭಾಷೆಗೆ ಅನುವಾದಿಸುವುದು ಅಷ್ಟು ಸುಲಭದ ಕೆಲಸವಲ್ಲ. ಯಾವುದೇ ವಿಷಯಗಳ ಬಗ್ಗೆಯೂ ನಕಾರಾತ್ಮಕ ಪ್ರತಿಕ್ರಿಯೆ ನೀಡದ ಏಕೈಕ ಸಂತ ಶ್ರೀಸಿದ್ದೇಶ್ವರ ಸ್ವಾಮಿಗಳು. ಜಗತ್ತಿನಲ್ಲಿ ಎಲ್ಲವೂ ಬಯಲು ಎಂಬ ಸತ್ಯ ಅರಿತಿದ್ದ ಮಹಾತ್ಮರು ಅವರು.
ವಚನ ಸಾಹಿತ್ಯ ಕನ್ನಡದ ಅಸ್ಮಿತೆ. ಇದನ್ನು ಜಾಗತಿಕ ಮಟ್ಟಕ್ಕೆ ಮುಟ್ಟಿಸಿದ ಕೀರ್ತಿ ಸುತ್ತೂರು ಮಠಕ್ಕೆ ಸಲ್ಲುತ್ತದೆ. ಸಿದ್ದೇಶ್ವರ ಸ್ವಾಮಿಗಳು ಅಲ್ಲಮನನ್ನು ಪರಿಚಯಿಸಿದಷ್ಟು ಸಮರ್ಥವಾಗಿ ಯಾರಿಂದಲೂ ಸಾಧ್ಯವಿಲ್ಲ. ತಮ್ಮ ಮರಣದ ಅಂತಿಮ ಪತ್ರದಲ್ಲಿಯೂ ಅಲ್ಲಮನ ಬಯಲನ್ನೇ ಉಲ್ಲೇಖಿಸಿದ ಮಹಾಸಂತ.