ಹುಣಸಗಿಯ ಮಲ್ಲಯ್ಯ ದೇವಸ್ಥಾನದಲ್ಲಿ ಭಾನುವಾರ ನಡೆದ ಪಲ್ಸ್ ಪೋಲಿಯೋ ಲಸಿಕಾಕರಣ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಸಂಜಯ್ ಚಂದಾ, ಚಂದ್ರಶೇಖರ ದಂಡಿನ್, ಬಸವರಾಜ ಸಜ್ಜನ್, ಖಾಸೀಂಸಾಬ ಟೊಣ್ಣೂರು ಇತರರಿದ್ದರು.
ಹುಣಸಗಿ: ಮಕ್ಕಳು ಆರೋಗ್ಯವಾಗಿರಲು ಪಲ್ಸ್ ಪೋಲಿಯೋ ಲಸಿಕೆ ಹಾಕುವ ಅಗತ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಸಂಜಯ್ ಚಂದಾ ಹೇಳಿದರು. ಶ್ರೀ ಮಲ್ಲಯ್ಯ ದೇವಸ್ಥಾನದಲ್ಲಿ ಭಾನುವಾರ ಪೋಲಿಯೋ ಲಸಿಕಾಕರಣಕ್ಕೆ ಚಾಲನೆ ನೀಡಿದ ಅವರು, ಜು.1ರವರೆಗೆ ಪಲ್ಸ್ ಪೋಲಿಯೋ ಅಭಿಯಾನ ಜರುಗಲಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಮಾತಾನಾಡಿ, ಪೋಲಿಯೋಮುಕ್ತ ಭಾರತಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸವರಾಜ ಸಜ್ಜನ್, ವೈದ್ಯಾಧಿಕಾರಿ ಡಾ.ಮಂಜುನಾಥ ಪಾಟೀಲ್, ಡಾ.ನಿಖಿತಾ, ಪಟ್ಟಣ ಪಂಚಾಯಿತಿ ಸದಸ್ಯ ಖಾಸೀಂಸಾಬ ಟೊಣ್ಣೂರು, ಖಾಸೀಂಸಾಬ, ಶಾಂತಪ್ಪ ಬಿರಾದಾರ, ಶಾಂತಾ ಬಿರಾದಾರ, ಅಕ್ಷತಾ ಬಿರಾದಾರ, ಸುಧಾ ಬಿರಾದಾರ ಇದ್ದರು.