ಕನಕಗಿರಿ 10ನೇ ಅಂಗನವಾಡಿ ಕೇಂದ್ರದಲ್ಲಿ ಪಪಂ ಸದಸ್ಯ ಸಂಗಪ್ಪ ಸಜ್ಜನ್ ಭಾನುವಾರ ಮಗುವಿಗೆ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೋಗೆ ಚಾಲನೆ ನೀಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ನೂರ್ ಜಹಾನ್, ಅಂಗನವಾಡಿ ಕಾರ್ಯಕರ್ತೆ ಕವಿತಾ ಇದ್ದರು. 
ರಾಜ್ಯ

28ಗ್ರಾಮಗಳಲ್ಲಿ ವ್ಯಾಕ್ಸಿನ್ ಗುರಿ

ಕನಕಗಿರಿ: ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿ ಶರಣಪ್ಪ ಚಕೋಟಿ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ನೀಡಿದರು. 7ಉಪ ಕೇಂದ್ರಗಳ ವ್ಯಾಪ್ತಿಯ 28ಗ್ರಾಮಗಳಲ್ಲಿ 6200 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. 
ಮೊದಲ ದಿನ ಆಸ್ಪತ್ರೆ, ಅಂಗನವಾಡಿ ಕೇಂದ್ರ, ದೇವಸ್ಥಾನ, ಶಾಲೆಗಳಲ್ಲಿ 29 ತಂಡಗಳಿಂದ ಲಸಿಕೆ ಹಾಕಲಾಗುವುದು. ಅಲೆಮಾರಿ ಕುಟುಂಬದ ಮಕ್ಕಳಿಗಾಗಿ ಎರಡು ವಿಶೇಷ ಮೊಬೈಲ್ ತಂಡಗಳು ಕೆಲಸ ನಿರ್ವಹಿಸಲಿವೆ. 
ಮೂರು ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು ಎಂದರು. ಡಾ.ಭರಮನಾಯಕ, ಸಿಬ್ಬಂದಿ ವಿಜಯಪ್ರಸಾದ್, ಸಿದ್ರಾಮಪ್ಪ, ಕಿರಣ್‌ಕುಮಾರ ಇತರರಿದ್ದರು.
ಅಂಗನವಾಡಿ ಕೇಂದ್ರ:  ಸ್ಥಳೀಯ 10ನೇ ವಾರ್ಡ್ ಅಂಗನವಾಡಿ ಕೇಂದ್ರದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸಂಗಪ್ಪ ಸಜ್ಜನ್ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ನೂರ್ ಜಹಾನ್, ಅಂಗನವಾಡಿ ಕಾರ್ಯಕರ್ತೆ ಕವಿತಾ ಇದ್ದರು.