ರಾಸುಗಳ ಆರೋಗ್ಯಕ್ಕಾಗಿ ಲಸಿಕೆ calves 
ರಾಜ್ಯ

ರಾಸುಗಳ ಆರೋಗ್ಯಕ್ಕಾಗಿ ಲಸಿಕೆ calves

ಕದರೀಪುರ: ಕೋಲಾರ ತಾಲೂಕು ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದರೀಪುರ ಗ್ರಾಮದಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ, ಚರ್ಮಗಂಟು ರೋಗಕ್ಕೆ ಪಶು ವೈದ್ಯಧಿಕಾರಿ ಡಾ ನಿತ್ಯಾನಂದ ಅವರ ಮಾರ್ಗದರ್ಶನದಲ್ಲಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.calves
ಪಶು ವೈದ್ಯಾಧಿಕಾರಿ ಡಾ.ನಿತ್ಯಾನಂದ ಮಾತನಾಡಿ, ಪಶುಗಳನ್ನು ತಂಪಾಗಿಡುವ ಬಗ್ಗೆ ಗಮನಹರಿಸಿ ಬೇಸಿಗೆಯಲ್ಲಿ ಹಸಿಮೇವು, ಉತ್ತಮಆಹಾರ ನೀಡಿ ಜೋಪಾನವಾಗಿ ನೋಡಿಕೊಳ್ಳಬೇಕು. ರಾಸುಗಳಿಗೆ ಜೀವ ವಿಮೆ ಮಾಡಿಸಿಕೊಳ್ಳಿ ಎಂದು ಪಶು ಸಾಕಾಣಿಕೆದಾರರಿಗೆ ತಿಳಿಸಿದರು.
ಕಾಲುಬಾಯಿ ಜ್ವರ, ಚರ್ಮಗಂಟು ರೋಗಕ್ಕೆ ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದು, ರಾಸುಗಳ ವಾರಸುದಾರರು ಆಧಾರ ಕಾರ್ಡ್​ ಮತ್ತು ಮೊಬೈಲ್​ ನಂಬರ್​ಗೆ ಒಟಿಪಿ ಸ್ವೀಕೃತಿಯಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು.
ಲಸಿಕೆ ಅಭಿಯಾನದಲ್ಲಿ ಪಶು ವೈದ್ಯಕಿಯ ಪರಿವೀಕ ಮಂಜುನಾಥ್​, ಕಿರಿಯ ಪಶು ವೈದ್ಯಕಿಯ ಪರಿವೀಕ ಸುನಿಲ್​, ಸಿಬ್ಬಂದಿ ಮಟ್ನಹಳ್ಳಿ ವೆಂಕಟೇಶ್​, ರಾಜು, ನಾಗರಾಜ್​ ಇದ್ದರು.