ರೈತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ Farmer ಇದ್ದರು.
- ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್ ಬಾಬು ಸಲಹೆ
ಶ್ರೀನಿವಾಸಪುರ: ರೈತರು ದೇಶದ ಬೆನ್ನೆಲುಬು, ರಾಸಾಯನಿಕ ರಸಗೊಬ್ಬರಗಳನ್ನು Farmer ಕಡಿಮೆ ಮಾಡಿ ಜೈವಿಕ ಗೊಬ್ಬರ ಉಪಯೋಗಿಸಿ ರೈತರು ಕೃಷಿ ಮುಂದುವರಿಸಲು ಮುಂದಾಗಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್ ಬಾಬು ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ರೈತ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಸಾಯನಿಕ ಸಿಂಪಡಣೆ ಜಾಸ್ತಿಯಾಗಿ ಭೂಮಿ ಫಲವತ್ತತೆ ಕಳೆದುಕೊಳ್ಳುವುದರ ಜತೆಗೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿದೆ. ಇದನ್ನು ತೊಲಗಿಸಲು ಪೂರ್ವಿಕರು ಮಾಡುತ್ತಿದ್ದ ಬೇಸಾಯ ಪದ್ಧತಿಯನ್ನು ನಾವು ಪುನ ಪ್ರಾರಂಭಿಸುವ ಘಟ್ಟ ಎದುರಾಗಿದೆ ಎಂದರು.
ಮಾವು ಬೆಳೆಗಾರ ಜಿಲ್ಲಾಧ್ಯಕ್ಷ ಚಿನ್ನಪ್ಪರೆಡ್ಡಿ ಮಾತನಾಡಿ, ಹೆಸರಿಗೆ ಮಾತ್ರ ರೈತನನ್ನು ಈ ದೇಶ ಬೆನ್ನೆಲುಬು ಎಂದು ನಾಮಕರಣ ಮಾಡುತ್ತಾರೆ. ವಾಸ್ತವವಾಗಿ ರೈತರು ಬೆಳೆದಂತ ಬೆಳೆಗಳಿಗೆ ದರ ಸಿಗುತ್ತಿಲ್ಲ. ಬೆಲೆ ನಿಗದಿ ಮಾಡಲು ರೈತರಿಂದ ಸಾಧ್ಯ ಆಗಲಿಲ್ಲ. ರೈತ ದಿನಾಚರಣೆ ಕೇವಲ ಕೃಷಿ ಇಲಾಖೆಗೆ ಸೀಮಿತವಾಗದೆ, ರೇಷ್ಮೆ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆಗಳನ್ನು ಒಗ್ಗೂಡಿಸಿಕೊಂಡು ಪೂರ್ವಭಾವಿಯಾಗಿ ರೈತ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ವರ್ಷವಾದರೂ ಬೃಹತ್ ಸಂಖ್ಯೆಯಲ್ಲಿ ರೈತರನ್ನು ಸೇರಿಸಿಕೊಂಡು ಕಾರ್ಯಕ್ರಮ ಮಾಡಬೇಕೆಂದು ತಿಳಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ವಿಭಾಗೀಯ ಕಾರ್ಯದರ್ಶಿ ಸಿ.ವಿ. ಪ್ರಭಾಕರ ಗೌಡ ಮಾತನಾಡಿ, ಚೌದರಿ ಚರಣ್ ಸಿಂಗ್ ಉಪ ಪ್ರಧಾನಿಗಳಾಗಿ ನಂತರ ಪ್ರಧಾನಮಂತ್ರಿಗಳಾಗಿ, ಉತ್ತಮ ಆಡಳಿತ ನಡೆಸಿ ರೈತರ ರಕ್ಷಣೆ ಹಕ್ಕುಗಳ ಹೋರಾಟಕ್ಕೆ ರೈತರ ಬೆನ್ನೆಲುಬಾಗಿ ನಿಂತು ಉತ್ತಮ ಆಡಳಿತ ಸೇವೆ ಮಾಡಿದ್ದರಿಂದ 2001ರಲ್ಲಿ ಅಟಲ್ ಬಿಹಾರ್ ವಾಜಪೇಯಿ ಅವರು 1902ರ ಚರಣ್ ಸಿಂಗ್ ಅವರ ಹುಟ್ಟು ಹಬ್ಬವನ್ನು ರೈತ ದಿನವನ್ನಾಗಿ 2001ರಲ್ಲಿ ಘೋಷಣೆ ಮಾಡಿದರು ಎಂದು ತಿಳಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮಾಸ್ತೇನಹಳ್ಳೀ ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವೆಂಕಟರೆಡ್ಡಿ, ತೋಟಗಾರಿಕೆ ವಿಜ್ನಾನಿ ಆಂಜನೇಯರೆಡ್ಡಿ, ಕೃಷಿ ಅಧಿಕಾರಿಗಳಾದ ನಳಿನಿ, ರಘು, ಈಶ್ವರ್ ಇದ್ದರು.
ಶ್ರೀನಿವಾಸಪುರದ ಕೃಷಿ ಇಲಾಖೆಯ ಆವರಣದಲ್ಲಿ ಕಸಬಾ ರೇಷ್ಮೆ ಬೆಳೆಗಾರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಸಿಪಿಎಂ ನವೀನ್ ಕುಮಾರ್