ಶಿಡ್ಲಟ್ಟ ತಾಲೂಕು ಕೆ.ಮುತ್ತುಕದಹಳ್ಳಿಯಲ್ಲಿ ಜಿಕೆವಿಕೆ ಕೃಷಿ ವಿಜ್ಞಾನ ಪದವಿ ವಿದ್ಯಾರ್ಥಿಗಳು ರೈತರಿಗೆ ಜೈವಿಕ ಗೊಬ್ಬರ ಬಳಕೆ ಕುರಿತು ಸಾಧಕ ಬಾಧಾಕಗಳ ಬಗ್ಗೆ ಚರ್ಚಿಸಿದರು.
ಶಿಡ್ಲಟ್ಟ :ತಾಲೂಕಿನ ಕೆ.ಮುತ್ತುಕದಹಳ್ಳಿಯಲ್ಲಿ ಜಿಕೆವಿಕೆ ಕೃಷಿ ವಿಜ್ಞಾನ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದಲ್ಲಿ ವಾಸ್ತವ್ಯ ಹೂಡಿದ್ದು, ಗ್ರಾಮದಲ್ಲಿ ಬುಧವಾರ ಜೈವಿಕ, ಎರೆಹುಳು ಗೊಬ್ಬರ, ತ್ಯಾಜ್ಯ ಗೊಬ್ಬರ ಹಾಗೂ ಮೀನುಗಾರಿಕೆ ಕುರಿತು ಅರಿವು ಮೂಡಿಸಿದರು.
ವಿದ್ಯಾರ್ಥಿ ಅಫ್ಶಾನ್ ಮಾತನಾಡಿ, ಜೈವಿಕ ಗೊಬ್ಬರ ಬಳಕೆ ಮಹತ್ವ ಮತ್ತು ವಿಧಾನ ಕುರಿತು ಮಾಹಿತಿ ನೀಡಿದರೆ, ಸಂದೀಪ್ ವರ್ಮಿ ಕಾಂಪೋಸ್ಟ್ ತಯಾರಿಕೆ ಹಾಗೂ ಅದರ ಉಪಯೋಗಗಳ ಕುರಿತು. ರಾಹುಲ್ ವೇಸ್ಟ್ ಡಿಕಂಪೋಸರ್ ತಯಾರಿಕೆ ಮತ್ತು ಕೃಷಿಯಲ್ಲಿ ಅದರ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಜೈವಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರ ಜತೆಗೆ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಲಾಯಿತು.
ಕೃಷಿ ಹಾಗೂ ಮನೆಯ ಸಾವಯವ ತ್ಯಾಜ್ಯಗಳನ್ನು ಬಳಸಿಕೊಂಡು ವರ್ಮಿ ಕಾಂಪೋಸ್ಟ್ ಮತ್ತು ವೇಸ್ಟ್ ಡಿಕಂಪೋಸರ್ ಮೂಲಕ ಸಾವಯವ ಗೊಬ್ಬರ ತಯಾರಿಸುವ ವಿಧಾನಗಳ ಕುರಿತು ವಿವರಿಸಲಾಯಿತು. ಕೃಷಿಯೊಂದಿಗೆ ಮೀನುಗಾರಿಕೆಯನ್ನು ಸಂಯೋಜಿಸುವ ಮೂಲಕ ರೈತರು ಹೆಚ್ಚುವರಿ ಆದಾಯ ಗಳಿಸಬಹುದಾದ ಅವಕಾಶಗಳ ಬಗ್ಗೆಯೂ ಚರ್ಚಿಸಲಾಯಿತು.
ಮಣ್ಣಿನ ವಿಜ್ಞಾನ ವಿಭಾಗದ ಡಾ.ಗಾಯತ್ರಿ, ಕೃಷಿ ಸೂಕ್ಷ$್ಮಜಿವಶಾಸ ವಿಭಾಗದ ಡಾ.ಲ್ಮಪತಿ ಹಾಗೂ ಪಶುಪಾಲನೆ ಮತ್ತು ಪಶುಸಂಗೋಪನೆ ವಿಭಾಗದ ಡಾ.ಹರ್ಷ ಭಾಗವಹಿಸಿ ರೈತರಿಗೆ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳಾದ ಸಂದೀಪ್, ಮೋನಿಕಾ, ರಾಹುಲ್, ನಂದಿನಿ ನಾಯಕ್, ಮೋನಿಯಾ, ಮಾಳವಿಕಾ, ಪ್ರಿಯಾ, ನೀಲು, ನೇಹಾ, ಪ್ರಜ್ವಲ್, ಮಾದೇಶ್, ಮಲ್ಲಿಕಾರ್ಜುನ, ಪವನ್, ಸುಮಂತ್, ಕಾವೇರಪ್ಪ, ಪೂಜಾ, ಗ್ರಾಮಸ್ಥರಾದ ಪ್ರಕಾಶ್, ಮಂಜುನಾಥ್, ಮುನಿರಾಜು, ರಾಜಣ್ಣ, ಅಶ್ವತ್ಥಪ್ಪ, ಆನಂದ್, ಪುನೀತ್, ಚನ್ನಕೃಷ್ಣ, ಸುದರ್ಶನ, ವಿಜಯ್ ಕುಮಾರ್, ಮನೋಜ್ ಇದ್ದರು.