ಸಂಡೂರಿನ ತಾಲೂಕು ಕಚೇರಿ ಮುಂದೆ ಸಿಪಿಐ(ಎಂ)ನಿಂದ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಸುಧಾ ಆರಮನೆಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಸಿಪಿಐಎಂ ತಾಲೂಕು ಕಾರ್ಯದರ್ಶಿ ಎ.ಸ್ವಾಮಿ, ಕಪ್ರಾಂರೈಸಂ ಜಿಲ್ಲಾ ಕಾರ್ಯದರ್ಶಿ ಖಲಂದರ್ ಬಾಷಾ, ಕಪ್ರಾಂರೈಸಂ ತಾಲೂಕು ಅಧ್ಯಕ್ಷ ಪಂಪನಗೌಡ, ಸಿಡಬ್ಲ್ಯೂಎಫ್‌ಐ ಜಿಲ್ಲಾ ಉಪಾಧ್ಯಕ್ಷ ವಿ.ದೇವಣ್ಣ, ಎಸ್.ಕಾಲುಬಾ, ಹೆಚ್.ದುರುಗಮ್ಮ, ತ್ರಿವೇಣಿ, ಹುಲಿಗೆಮ್ಮ, ಭಾರತಿ ಜಿ.ವಸಂತ, ವಿ.ತಿಮ್ಮಪ್ಪ ಇತರರಿದ್ದರು.
ಸಂಡೂರು: ಕೇರಳ ಮಾಜಿ ಸಿ.ಎಂ. ಪಿಣರಾಯಿ ವಿಜಯನ್ ನಿವಾಸದಲ್ಲಿ ಜಾರಿ ನಿರ್ದೇಶನಾಲಯ(ಇಡಿ)ನಡೆಸಿದ ದಾಳಿ ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದ ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯರು ಗ್ರೇಡ್-2 ತಹಸೀಲ್ದಾರ್ ಸುಧಾ ಆರಮನೆಗೆ ಮನವಿ ಸಲ್ಲಿಸಿದರು.
ಸಮಿತಿ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ದೆಹಲಿಯ ಇಡಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ಬಂಧಿಸಿರುವುದು ಖಂಡನೀಯ.
ಪಿಣರಾಯಿ ವಿಜಯನ್ ಅವರ ನಿವಾಸದ ಮೇಲಿನ ದಾಳಿ ರಾಜಕೀಯ ಪ್ರೇರಿತ ಪ್ರತೀಕಾರದ ಕೃತ್ಯವಾಗಿದೆ. ಅವರ ವಿರುದ್ಧದ ರಾಜಕೀಯ ಬೇಟೆ ನಿರಂತರವಾಗಿ ಮುಂದುವರೆದಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಪ್ರಧಾನ ಮಂತ್ರಿ ಅವರನ್ನು ಭೇಟಿಯಾದ ತಕ್ಷಣ ಇಂತಹ ಕ್ರಮ ನಡೆಯುತ್ತಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಸರ್ಕಾರ ತನಿಖಾ ಸಂಸ್ಥೆ ಗಳನ್ನು ಆಯುಧವಾಗಿ ಬಳುಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.