ಹೋಟೆಲ್ಗಳಲ್ಲಿ ಗೃಹ ಬಳಕೆ ಸಿಲಿಂಡರ್ ಬಳಕೆ!
ಬಂಗಾರಪೇಟೆ: ನಗರದ ವಿವಿಧ ಹೋಟೆಲ್ಗಳ ಮೇಲೆ ಭಾನುವಾರ ತಹಸೀಲ್ದಾರ್ ಸುಜಾತಾ ದಾಳಿ ನಡೆಸಿ 6 ಗೃಹಬಳಕೆ ಸಿಲಿಂಡರ್ಗಳನ್ನು ವಶಕ್ಕೆ ಪಡೆದುಕೊಂಡರು. hotels!
ಜಿಲ್ಲಾಧಿಕಾರಿಗಳ ಆದೇಶದಂತೆ ಹೋಟೆಲ್ಗಳ ಮೇಲೆ ದಾಳಿ ನಡೆಸಿ ಸಿಲಿಂಡರ್ ಪರಿಶೀಲಿಸಿದಾಗ ಅನಧಿಕೃತವಾಗಿ ಬಳಸುತ್ತಿದ್ದ 6 ಸಿಲಿಂಡರ್ ವಶಕ್ಕೆ ಪಡೆದುಕೊಂಡಿದ್ದೇವೆ. ಹೋಟೇಲ್ ಮಾಲೀಕರ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ತಹಸೀಲ್ದಾರ್ ತಿಳಿಸಿದರು.
ನಗರದ ಸುರುಬಿ ಹೋಟೆಲ್ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಅಡುಗೆಗೆ ಬಳಸುತ್ತಿರುವ ನೀರು ಸಹ ಅಶುದ್ಧತೆಯಿಂದ ಕೂಡಿದ್ದು, ನೀರನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗುವುದು. ಪರೀಕ್ಷೆಯಲ್ಲಿ ಲೋಪದೋಷ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೋಟೆಲ್ಗಳಲ್ಲಿ ಮನೆ ಸಿಲಿಂಡರ್ ಬಳಸಿದ್ದು ಕಂಡು ಬಂದಲ್ಲಿ ಹಾಗೂ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುವುದು ಕಂಡುಬಂದಲ್ಲಿ ತಕ್ಷಣ ತಾಲೂಕು ಆಡಳಿತ ಹಾಗೂ ನಗರಸಭೆ ಕಚೇರಿಗೆ ತಿಳಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪುರಸಭೆ ಮುಖ್ಯಅಧಿಕಾರಿ ಸತ್ಯನಾರಾಯಣ ಇದ್ದರು.